Site icon Vistara News

Delhi Terror Plot | ಶಿವಸೇನೆ, ಬಜರಂಗ ದಳ ನಾಯಕರ ಹತ್ಯೆಗೆ ಸಂಚು, 2.5 ಕೋಟಿ ರೂ. ಸುಪಾರಿ, ಇದು ಶಂಕಿತ ಉಗ್ರರು ಬಿಚ್ಚಿಟ್ಟ ಸತ್ಯ

Delhi Terro Plot

ನವದೆಹಲಿ: ಕೆಲ ದಿನಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ಬಂಧಿತರಾದ ಶಂಕಿತ ಉಗ್ರರು (Delhi Terror Plot) ಆತಂಕಕಾರಿ ಮಾಹಿತಿ ಹೊರಹಾಕಿದ್ದಾರೆ. “ದೆಹಲಿ ಹಾಗೂ ಪಂಜಾಬ್‌ ಮೂಲದ ಶಿವಸೇನೆ ಹಾಗೂ ಬಜರಂಗ ದಳ ಸೇರಿ ಹಲವು ಬಲಪಂಥೀಯ ನಾಯಕರ ಹತ್ಯೆಗೆ ಸಂಚು ರೂಪಿಸಲಾಗಿತ್ತು” ಎಂದು ಬಂಧಿತ ಉಗ್ರರು ಪೊಲೀಸರ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿ ಪೊಲೀಸ್‌ನ ವಿಶೇಷ ವಿಭಾಗದ ಪೊಲೀಸರು ಜನವರಿ 12ರಂದೇ ಜಗಜೀತ್‌ ಸಿಂಗ್‌ ಹಾಗೂ ನೌಶಾದ್‌ ಎಂಬ ಶಂಕಿತ ಖಲಿಸ್ತಾನ್‌ ಉಗ್ರರನ್ನು ಬಂಧಿಸಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಇದೇ ವೇಳೆ ಇವರು ಪೊಲೀಸರಿಗೆ ನೀಡಿದ ಮಾಹಿತಿಯು ಆತಂಕಕಾರಿಯಾಗಿದೆ.

“ಶಿವಸೇನೆ ಹಾಗೂ ಬಜರಂಗ ದಳದ ನಾಯಕರ ಹತ್ಯೆಗೆ ಸುಪಾರಿ ನೀಡಲಾಗಿತ್ತು. ಹತ್ಯೆ ಮಾಡಿದರೆ 2.5 ಕೋಟಿ ರೂ. ನೀಡಲಾಗುವುದು ಎಂಬುದಾಗಿ ಹೇಳಲಾಗಿತ್ತು. ಅದರಂತೆ, ಮೊದಲ ಕಂತಿನಲ್ಲಿ ಹವಾಲ ಮೂಲಕ 5 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ. ಜನವರಿ 27ರಿಂದ 31ರ ಅವಧಿಯಲ್ಲಿ ಹತ್ಯೆ ಮಾಡಬೇಕು ಎಂಬುದು ಸುಪಾರಿ ನೀಡಿದವರ ಬೇಡಿಕೆಯಾಗಿತ್ತು” ಎಂಬುದಾಗಿ ಶಂಕಿತ ಉಗ್ರರು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣದ ಉನ್ನತ ತನಿಖೆಯ ಭಾಗವಾಗಿ ಪೊಲೀಸರು ಭಾಲಸ್ವ ಡೈರಿ ಪ್ರದೇಶದ ಶ್ರದ್ಧಾನಂದ ಕಾಲೋನಿಯಲ್ಲಿ ಇಬ್ಬರು ಶಂಕಿತರು ವಾಸವಿರುವ ಬಾಡಿಗೆ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ಎರಡು ಹ್ಯಾಂಡ್‌ ಗ್ರೆನೇಡ್‌ ಹಾಗೂ ಮನುಷ್ಯರ ರಕ್ತವನ್ನು ಪತ್ತೆ ಹಚ್ಚಿದ್ದರು. ಇದಾದ ಕೆಲವೇ ದಿನದಲ್ಲಿ ಮೂರು ತುಂಡಾಗಿರುವ ಶವವೊಂದು ಪತ್ತೆಯಾಗಿತ್ತು. ಹಾಗಾಗಿ, ಎಲ್ಲ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Grenades Found | ಗಣರಾಜ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ, 2 ಗ್ರೆನೇಡ್, ಮನುಷ್ಯರ ರಕ್ತ ಪತ್ತೆ

Exit mobile version