Site icon Vistara News

Delhi Pollution: ಮತ್ತೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾದ ದೆಹಲಿ

Delhi

ನವದೆಹಲಿ: ನೂತನ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ(World Air Quality) ಬಿಹಾರದ ಬೇಗುಸರಾಯ್(Bihars Begusarai) ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್(polluted metropolitan) ಪ್ರದೇಶವಾಗಿ ಮತ್ತು ದೆಹಲಿಯು(delhi pollution) ಅತ್ಯಂತ ಕಳಪೆ ಗಾಳಿಯ ಗುಣಮಟ್ಟವನ್ನು ಹೊಂದಿರುವ ರಾಜಧಾನಿಯಾಗಿ ಗುರುತಿಸಲ್ಪಟ್ಟಿದೆ.

ನೂತನ ವರದಿಯ ಪ್ರಕಾರ ಭಾರತ ಪ್ರತಿ ಕ್ಯೂಬಿಕ್​ ಮೀಟರ್‌ಗೆ ಸರಾಸರಿ 54.4 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ 134 ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. 2022ರಲ್ಲಿ, ಪ್ರತಿ ಕ್ಯೂಬಿಲ್​ ಮೀಟರ್‌ಗೆ ಸರಾಸರಿ 53.3 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ ಭಾರತವು ಎಂಟನೇ ಅತ್ಯಂತ ಕಲುಷಿತ ರಾಷ್ಟ್ರವಾಗಿತ್ತು.

ಇದನ್ನೂ ಓದಿ Air pollution: ದಿಲ್ಲಿ ಮಾತ್ರವಲ್ಲ, ಭಾರತದ ಇನ್ನೂ ಎರಡು ನಗರಗಳ ವಾಯು ವಿಶ್ವದಲ್ಲೇ ಅತಿ ಕಳಪೆ

ಸದ್ಯ ಸ್ವಿಸ್ ಸಂಸ್ಥೆ IQAir ವಿಶ್ವ ವಾಯು ಗುಣಮಟ್ಟ 2023ರ ವರದಿ ಪ್ರಕಾರ ಬಾಂಗ್ಲಾದೇಶ (ಪ್ರತಿ ಕ್ಯೂಬಿಕ್​​ ಮೀಟರ್‌ಗೆ 79.9 ಮೈಕ್ರೋಗ್ರಾಂ) ಮತ್ತು ಪಾಕಿಸ್ತಾನ (ಪ್ರತಿ ಕ್ಯೂಬಿಲ್​ ಮೀಟರ್‌ಗೆ 73.7 ಮೈಕ್ರೋಗ್ರಾಂಗಳು) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಭಾರತ ಮೂರನೇ ಸ್ಥಾನ ಪಡೆದಿದಿದೆ. ಇದೇ ದಿಲ್ಲಿಯಲ್ಲಿ ಇದೇ ರೀತಿಯ ವಾಯುವಾಲಿನ್ಯ ಮುಂದುವರಿದೆ. ಭಾರತವೂ ಕೂಡ ಅಗ್ರಸ್ಥಾನ ಪಡೆಯುವ ದಿನಗಳು ಹೆಚ್ಚು ದೂರ ಇಲ್ಲ ಎನ್ನಲಡ್ಡಿಯಿಲ್ಲ.

ಬಿಹಾರದ ಬೇಗುಸರಾಯ್ ಪ್ರತಿ ಘನ(ಕ್ಯೂಬಿಲ್​) ಮೀಟರ್‌ಗೆ ಸರಾಸರಿ 118.9 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ ಜಾಗತಿಕವಾಗಿ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿದೆ. ಅಚ್ಚರಿ ಎಂದರೆ 2022ರ ವರದಿಯಲ್ಲಿ ಈ ನಗರ ಕಾಣಿಸಿಕೊಂಡಿರಲಿಲ್ಲ. ದೆಹಲಿಯ PM2.5 ಮಟ್ಟವು 2022 ರಲ್ಲಿ ಘನ ಮೀಟರ್‌ಗೆ 89.1 ಮೈಕ್ರೋಗ್ರಾಂನಿಂದ 2023 ರಲ್ಲಿ ಪ್ರತಿ ಘನ ಮೀಟರ್‌ಗೆ 92.7 ಮೈಕ್ರೋಗ್ರಾಂಗಳಿಗೆ ಹದಗೆಟ್ಟಿದೆ. 2022ರಲ್ಲಿ ದಿಲ್ಲಿ ಏಷ್ಯಾದ ಕಲುಷಿತ ನಗರದ ಪಟ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಕಾಣಿಸಿಕೊಂಡಿದೆ.

ಸೊನ್ನೆ ಮತ್ತು 50 ರ ನಡುವಿನ AQI ಉತ್ತಮ, 51 ಮತ್ತು 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತ್ಯಂತ ಕಳಪೆ, 401 ಮತ್ತು 450 ತೀವ್ರ ಮತ್ತು 450 ಕ್ಕಿಂತ ಹೆಚ್ಚು ತೀವ್ರ ಎಂದು ಪರಿಗಣಿಸಲಾಗುತ್ತದೆ.

Exit mobile version