Site icon Vistara News

Delhi Jama Masjid | ಆಕ್ರೋಶದ ಬೆನ್ನಲ್ಲೇ ಮಹಿಳೆಯರ ಪ್ರವೇಶ ನಿಷೇಧ ರದ್ದುಗೊಳಿಸಿದ ಜಾಮಾ ಮಸೀದಿ

Women Entry To Jama Masjid In Delhi

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಜಾಮಾ ಮಸೀದಿಗೆ (Delhi Jama Masjid) ಹೆಣ್ಣುಮಕ್ಕಳ ಪ್ರವೇಶ ನಿರ್ಬಂಧಿಸಿದ ಕುರಿತು ಸಾರ್ವಜನಿಕ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮಸೀದಿ ಆಡಳಿತ ಮಂಡಳಿಯು ನಿರ್ಬಂಧ ಹಿಂಪಡೆದಿದೆ. “ಹುಡುಗಿಯರು ಅಥವಾ ಮಹಿಳೆಯರು ಒಬ್ಬಂಟಿಯಾಗಿ ಆಗಲಿ, ಗುಂಪಾಗಿ ಆಗಲಿ ಮಸೀದಿಯನ್ನು ಪ್ರವೇಶಿಸುವಂತಿಲ್ಲ” ಎಂದು ಮಸೀದಿಯ ಮೂರು ದ್ವಾರಗಳಲ್ಲಿ ಫಲಕ ಹಾಕಲಾಗಿತ್ತು. ಇದನ್ನು ಜನ ತೀವ್ರವಾಗಿ ಖಂಡಿಸಿದ ಕಾರಣ ಬೋರ್ಡ್‌ಗಳನ್ನು ತೆರವುಗೊಳಿಸಲಾಗಿದೆ.

ಹೆಣ್ಣುಮಕ್ಕಳ ನಿಷೇಧದ ಕುರಿತು ಮಸೀದಿ ಆಡಳಿತ ಮಂಡಳಿಯು ಫಲಕಗಳನ್ನು ಹಾಕಿದ ಕಾರಣ ದೆಹಲಿ ಮಹಿಳಾ ಆಯೋಗವು (DCW) ಮಸೀದಿ ಮಂಡಳಿಗೆ ನೋಟಿಸ್‌ ನೀಡಿತ್ತು. ಅಲ್ಲದೆ, ಸಾಮಾಜಿಕ ಜಾಲತಾಣಗಳು ಸೇರಿ ಹಲವು ಮಾಧ್ಯಮಗಳಲ್ಲಿ ಮಸೀದಿಯ ತೀರ್ಮಾನದ ವಿರುದ್ಧ ಭಾರಿ ಖಂಡನೆ ವ್ಯಕ್ತವಾಗಿತ್ತು. ಹಾಗಾಗಿ, ಮಸೀದಿ ಸಮಿತಿಯು ಬೋರ್ಡ್‌ಗಳನ್ನು ತೆರವುಗೊಳಿಸಿದೆ.

ಶಾಹಿ ಇಮಾಮ್‌ ಜತೆ ಲೆಫ್ಟಿನೆಂಟ್‌ ಗವರ್ನರ್‌ ಮಾತುಕತೆ

ಮಹಿಳೆಯರ ಪ್ರವೇಶ ನಿಷೇಧದ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ನಡೆದ ಕಾರಣ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಮಸೀದಿಯ ಇಮಾಮ್‌ ಶಾಹಿ ಜತೆ ಮಾತುಕತೆ ನಡೆಸಿದ್ದು, ನಿಷೇಧ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ ಎಂದು ರಾಜ್‌ ನಿವಾಸ್‌ ಮೂಲಗಳು ತಿಳಿಸಿವೆ. ಮಸೀದಿಯು ನಿಷೇಧ ಹಿಂಪಡೆಯಲು ಲೆಫ್ಟಿನೆಂಟ್‌ ಗವರ್ನರ್‌ ದೂರವಾಣಿ ಕರೆಯೂ ಕಾರಣ ಎಂದು ತಿಳಿದುಬಂದಿದೆ.

ಇದನ್ನೂ ಓದಿ | ದೆಹಲಿ ಜಾಮಾ ಮಸೀದಿಗೆ ಹುಡುಗಿಯರಿಗಿಲ್ಲ ಪ್ರವೇಶ, ಕುಟುಂಬದವರ ಜತೆ ಬಂದರೆ ಮಾತ್ರ ಅವಕಾಶ; ವ್ಯಾಪಕ ಆಕ್ರೋಶ

Exit mobile version