Site icon Vistara News

Twin Tower Demolition | ಕಟ್ಟಡಗಳೇನೋ ನೆಲಸಮವಾದವು, ಆದರೆ ಮುಂದೇನು?

Noida 2

ನೊಯ್ಡಾ: ಎಲ್ಲವೂ ಅಂದುಕೊಂಡಂತೆಯೇ ಆಗಿದೆ. ಬೇರೆ ಯಾವುದೇ ಕಟ್ಟಡಗಳಿಗೆ ಹಾನಿಯಾಗದೆ, ಯಾರಿಗೂ ತೊಂದರೆಯಾಗದೆ, ನಿಗದಿತ ಸಮಯಕ್ಕೆ ನೊಯ್ಡಾದ ಅವಳಿ ಕಟ್ಟಡಗಳನ್ನು (Twin Tower Demolition) ನೆಲಸಮಗೊಳಿಸಲಾಗಿದೆ. ಇದರಿಂದ ಹಲವು ವರ್ಷಗಳ ಪ್ರಕರಣವೊಂದು ಇತ್ಯರ್ಥವಾದಂತಾಗಿದೆ. ಆದರೆ, ಮುಂದಿನ ಪ್ರಕ್ರಿಯೆ ಏನು, ಕಟ್ಟಡಗಳೇನೋ ನೆಲಸಮವಾದವು, ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ. ಮುಂದಿನ ಪ್ರಮುಖ ಬೆಳವಣಿಗೆಗಳು ಹೀಗಿವೆ.

೧. ನೂರು ಮೀಟರ್‌ ಎತ್ತರದ ಕಟ್ಟಡಗಳು, ೩,೭೦೦ ಕೆಜಿ ಸ್ಫೋಟಕಗಳನ್ನು ಬಳಸಿ ನೆಲಸಮಗೊಳಿಸಿದ ಕಾರಣ ಸುಮಾರು ೫೫ ಸಾವಿರ ಟನ್‌ ತ್ಯಾಜ್ಯ ಸಂಗ್ರಹವಾಗಿದೆ. ಇದನ್ನು ಸಾಗಿಸುವುದಲ್ಲಿ ನೊಯ್ಡಾ ಪ್ರಾಧಿಕಾರದ ಅಧಿಕಾರಿಗಳು ನಿರತರಾಗಿದ್ದಾರೆ.

೨. ಸ್ಫೋಟಕಗಳಿಂದಾಗಿ ಹೆಚ್ಚಿನ ಧೂಳು ಆವರಿಸಿದ್ದು, ಇದರಿಂದ ಯಾರಿಗಾದರೂ ಉಸಿರಾಟದ ತೊಂದರೆಯಾದರೆ ಅವರನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ.

೩. ಅವಳಿ ಕಟ್ಟಡಗಳ ಸುತ್ತಮುತ್ತ ನೆಲೆಸಿದ್ದ ಐದು ಸಾವಿರ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಅವರನ್ನು ಮತ್ತೆ ಮೂಲ ನಿವಾಸಕ್ಕೆ ಕರೆದುಕೊಂಡು ಬರುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

೪. ಭಾನುವಾರ ಸಂಜೆ ಆರು ಗಂಟೆಯೊಳಗೆ ನಿವಾಸಿಗಳನ್ನು ಕರೆಸಿ, ನಿವಾಸಗಳಿಗೆ ನೀರು ಹಾಗೂ ವಿದ್ಯುತ್‌ ಪೂರೈಸಲಾಗುತ್ತದೆ.

ಇದನ್ನೂ ಓದಿ | Twin Towers Demolition | ಅವಳಿ ಕಟ್ಟಡ ನೆಲಸಮಕ್ಕೆ 100 ಕೋಟಿ ರೂ.ಗಳ ವಿಮೆ!

Exit mobile version