Site icon Vistara News

ಪತಿ ಅಥವಾ ಪತ್ನಿಯು ಸೆಕ್ಸ್‌ಗೆ ನಿರಾಕರಿಸುವುದು ಕೂಡ ಕ್ರೌರ್ಯ ಎಂದ ಕೋರ್ಟ್

Denial Of Sex

Denial of sex by spouse can be considered mental cruelty: Says Delhi High Court

ನವದೆಹಲಿ: “ಪತಿ ಅಥವಾ ಪತ್ನಿಯು ಉದ್ದೇಶಪೂರ್ವಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನಿರಾಕರಿಸುವುದು (Denial Of Sex) ಕೂಡ ಮಾನಸಿಕ ಕ್ರೌರ್ಯಕ್ಕೆ (Mental Cruelty) ಸಮನಾದುದು” ಎಂದು ದೆಹಲಿ ಹೈಕೋರ್ಟ್‌ (Delhi High Court) ಮಹತ್ವದ ಪ್ರಸ್ತಾಪ ಮಾಡಿದೆ. ಲೈಂಗಿಕ ಕ್ರಿಯೆಗೆ ನಿರಾಕರಿಸುವುದು, ನನ್ನ ತವರು ಮನೆಯಲ್ಲಿಯೇ ಇರು ಎಂದು ಪತ್ನಿ ಒತ್ತಾಯಿಸಿದ ಕಾರಣ, ನನಗೆ ಆಕೆಯಿಂದ ವಿಚ್ಛೇದನ ಬೇಕು ಎಂದು ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬನಿಗೆ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ವ್ಯಕ್ತಿಯ ಪತ್ನಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಹೀಗೆ ಪ್ರಸ್ತಾಪಿಸಿದೆ.

ವ್ಯಕ್ತಿಯು ವಿಚ್ಛೇದನ ಪಡೆಯಲು ಅರ್ಹ ಎಂದು ಅಧೀನ ನ್ಯಾಯಾಲಯ ಹೊರಡಿಸಿದ ಆದೇಶ ಪ್ರಶ್ನಿಸಿ ವ್ಯಕ್ತಿಯ ಪತ್ನಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಸಚ್‌ದೇವ ಹಾಗೂ ಮನೋಜ್‌ ಜೈನ್‌ ಅವರಿದ್ದ ನ್ಯಾಯಪೀಠವು, ಅಧೀನ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿತು. “ಮಹಿಳೆಯು ಮಾನಸಿಕ ಕ್ರೌರ್ಯ ಎಸಗಿದ್ದಾಳೆ ಎಂಬುದನ್ನು ಸಾಬೀತುಪಡಿಸುವಲ್ಲಿ ವ್ಯಕ್ತಿ ವಿಫಲವಾದ ಕಾರಣ ವಿಚ್ಛೇದನ ರದ್ದುಗೊಳಿಸಲಾಗಿದೆ” ಎಂದು ಸ್ಪಷ್ಟಪಡಿಸಿತು.

“ತನ್ನ ತವರು ಮನೆಯಲ್ಲಿಯೇ ಇರು ಎಂಬುದಾಗಿ ಪತ್ನಿಯು ಪತಿಗೆ ಒತ್ತಾಯಿಸುವುದು ಮಾನಸಿಕ ಕ್ರೌರ್ಯ ಆಗುವುದಿಲ್ಲ. ಪ್ರಕರಣದಲ್ಲಿ ವ್ಯಕ್ತಿಯ ತಾಯಿ (ಮಹಿಳೆಯ ಅತ್ತೆ) ಜತೆ ಮಹಿಳೆಗೆ ಭಿನ್ನಾಭಿಪ್ರಾಯ ಇರುವುದು ಗೊತ್ತಾಗಿದೆ. ಇದೇ ಕಾರಣಕ್ಕಾಗಿ ಆಕೆ ತನ್ನ ಮನೆಯಲ್ಲಿಯೇ ಇರು ಎಂಬುದಾಗಿ ಪತಿಗೆ ಹೇಳಿದ್ದಾರೆ. ಆದರೆ, ಪತಿ ಅಥವಾ ಪತ್ನಿಯು ಹಠಕ್ಕಾಗಿಯೋ, ಉದ್ದೇಶಪೂರ್ವಕವಾಗಿಯೋ ಲೈಂಗಿಕ ಕ್ರಿಯೆಗೆ ನಿರಾಕರಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮನಾದುದು” ಎಂದು ಕೋರ್ಟ್‌ ತಿಳಿಸಿದೆ.

ಇದನ್ನೂ ಓದಿ: Assault Case: ಸೆಕ್ಸ್‌ಗೆ ನಿರಾಕರಿಸಿದ ಲಿವ್‌ ಇನ್‌ ಗೆಳತಿಗೆ ಸ್ಕ್ರೂಡ್ರೈವರ್‌ ಇರಿದ ದುರುಳ; ಕಂಬಿ ಹಿಂದೆ ಕಂತ್ರಿ

“ನನ್ನ ಪತ್ನಿಯು ನಮ್ಮ ಮನೆಯಲ್ಲಿ ಇರಲು ಒಪ್ಪುತ್ತಿಲ್ಲ ಹಾಗೂ ತನ್ನ ತವರು ಮನೆಯಲ್ಲಿಯೇ ನಾನು ಕೂಡ ಇರಬೇಕು ಎಂದು ಒತ್ತಾಯಿಸುತ್ತಿದ್ದಾಳೆ. ಅಲ್ಲದೆ, ಆಕೆಯು ನನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನಿರಾಕರಿಸುತ್ತಿದ್ದಾಳೆ” ಎಂದು ಆರೋಪಿಸಿ ವ್ಯಕ್ತಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಯನ್ನು ಅಧೀನ ನ್ಯಾಯಾಲಯವು ಪುರಸ್ಕರಿಸಿತ್ತು. ಆದರೆ, ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆತನ ಪತ್ನಿಯು ಹೈಕೋರ್ಟ್‌ ಮೊರೆಹೋಗಿದ್ದಳು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version