ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಆರಂಭಿಸಿದ ಜನಪ್ರಿಯ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ಹೊಸ ಮೈಲುಗಲ್ಲು ಸೃಷ್ಟಿಸುತ್ತಿದೆ. ಮೋದಿ ಅವರು ಮಾತನಾಡುವ ಕಾರ್ಯಕ್ರಮವು 100ನೇ ಸಂಚಿಕೆಯತ್ತ ದಾಪುಗಾಲು ಇಡುತ್ತಿದೆ. ಇದಕ್ಕಾಗಿ ಜನರು ವಿಶೇಷ ಲೋಗೊ ಹಾಗೂ ಜಿಂಗಲ್ ರಚಿಸಲು ಆಹ್ವಾನಿಸಲಾಗಿದೆ. ಆಕರ್ಷಕ ಲೋಗೊ ಹಾಗೂ ಜಿಂಗಲ್ ತಯಾರಿಸಿದವರಿಗೆ 1 ಲಕ್ಷಕ್ಕೂ ಅಧಿಕ ನಗದು ಬಹುಮಾನವಿದೆ.
ಏಪ್ರಿಲ್ ತಿಂಗಳ ಕೊನೆಯ ಭಾನುವಾರ ಅಂದರೆ, ಏಪ್ರಿಲ್ 30ರಂದು 100ನೇ ಕಾರ್ಯಕ್ರಮ ನಡೆಯಲಿದೆ. ಹಾಗಾಗಿ, ಆಲ್ ಇಂಡಿಯಾ ರೇಡಿಯೊ ಸಾರ್ವಜನಿಕರಿಂದ ಲೋಗೊ ಹಾಗೂ ಜಿಂಗಲ್‌ಗಳನ್ನು ಆಹ್ವಾನಿಸಿದೆ. ಆಕರ್ಷಕ ಲೋಗೊ ತಯಾರಿಸಿದವರಿಗೆ 1 ಲಕ್ಷ ರೂ. ಹಾಗೂ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದ ಪ್ರಾಮುಖ್ಯತೆ ಸಾರುವ ಜಿಂಗಲ್‌ಗೆ 11 ಸಾವಿರ ರೂ. ನಗದು ಬಹುಮಾನ ಇದೆ.
ಫೆಬ್ರವರಿ 1 ಲೋಗೊ ಹಾಗೂ ಜಿಂಗಲ್ ಕಳುಹಿಸಲು ಕೊನೆಯ ದಿನವಾಗಿದೆ. ಲೋಗೊ ಹಾಗೂ ಜಿಂಗಲ್ ರಚಿಸುವವರು ಕೇಂದ್ರ ಸರ್ಕಾರದ mygov.in ಗೆ ಭೇಟಿ ನೀಡಬಹುದು. ಸ್ಪರ್ಧೆಯ ನಿಯಮಗಳು ಸೇರಿ ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ. 2014ರ ಅಕ್ಟೋಬರ್‌ನಿಂದ ಸತತವಾಗಿ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ