Site icon Vistara News

ರಾಹುಲ್‌ ಗಾಂಧಿ ತಯಾರಿಸಿದ್ದ ಮೇಜುಗಳು ವಿಶೇಷ ಚೇತನರ ಶಾಲೆಗೆ ಕೊಡುಗೆ; ಮಾನವೀಯ ನಡೆ

Rahul Gandhi Made Tables

Desks made by Rahul Gandhi, furniture market carpenters donated to school for specially-abled

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಬಡಗಿಗಳು (Carpenters) ಹಾಗೂ ಕಾಂಗ್ರೆಸ್‌ ನಾಯಕರು ಮಾನವೀಯತೆಯ ನಡೆ ಅನುಸರಿಸಿದ್ದಾರೆ. ಕಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಕೆಲ ತಿಂಗಳ ಹಿಂದೆ ತಯಾರಿಸಿದ್ದ ಮೇಜುಗಳನ್ನು ದೆಹಲಿಯಲ್ಲಿರುವ ವಿಶೇಷ ಚೇತನರ ಶಾಲೆಯೊಂದಕ್ಕೆ ಕೊಡುಗೆಯನ್ನಾಗಿ ನೀಡಿದ್ದಾರೆ. ಇಂತಹ ಮಾನವೀಯತೆಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಕಳೆದ ಸೆಪ್ಟೆಂಬರ್‌ 28ರಂದು ರಾಹುಲ್‌ ಗಾಂಧಿ ಅವರು ದೆಹಲಿಯ ಕೀರ್ತಿ ನಗರ ಫರ್ನಿಚರ್‌ ಮಾರುಕಟ್ಟೆಗೆ ತೆರಳಿದ್ದರು. ಆಗ ಅವರು ಹಲವು ಮೇಜುಗಳನ್ನು ತಯಾರಿಸಿದ್ದರು. ಕಾರ್ಪೆಂಟರ್‌ಗಳ ಜತೆಗೂಡಿ ರಾಹುಲ್‌ ಗಾಂಧಿ ಅವರು ಮೇಜುಗಳನ್ನು ತಯಾರಿಸಿದ್ದರು. ಈ ಮೇಜುಗಳನ್ನು ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಅರವಿಂದರ್‌ ಸಿಂಗ್‌ ಲವ್ಲಿ ಹಾಗೂ ಕಾರ್ಪೆಂಟರ್‌ಗಳು ಜತೆಗೂಡಿ ಪ್ರಮೀಳಾ ಬಾಯಿ ಚವ್ಹಾಣ್ ಶಾಲೆಗೆ ದೇಣಿಗೆಯಾಗಿ ನೀಡಲಾಗಿದೆ. ಕಾರ್ಕರ್‌ಡೂಮಾದಲ್ಲಿರುವ ಶಾಲೆಗೆ ಮೇಜುಗಳನ್ನು ದೇಣಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ಮಾಹಿತಿ ನೀಡಿದೆ.

ಬೈಕ್‌ ರಿಪೇರಿ ಮಾಡಿದ್ದ ರಾಹುಲ್‌ ಗಾಂಧಿ

ಕಳೆದ ಜೂನ್‌ನಲ್ಲಿ ರಾಹುಲ್‌ ಗಾಂಧಿ ಅವರು ದೆಹಲಿಯ ಕಾಜೋಲ್‌ಬಾಗ್‌ನಲ್ಲಿರುವ ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳಿ ಬೈಕ್‌ ರಿಪೇರಿ ಮಾಡಿದ್ದರು. “ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳಿ, ನಾನೂ ವ್ರೆಂಚ್‌ಗಳನ್ನು ತಿರುಗಿಸಿದೆ. ಅವರಿಂದ ಬೈಕ್‌ ರಿಪೇರಿ ಮಾಡುವುದನ್ನು ಕಲಿತೆ. ಬೈಕ್‌ ರಿಪೇರಿ ಮಾಡುವ ಇಂತಹ ಕೈಗಳೇ ಭಾರತವನ್ನು ನಿರ್ಮಿಸಿವೆ. ಇಲ್ಲಿಗೆ ಭೇಟಿ ನೀಡುವ ಮೂಲಕ ನಾನು ಮತ್ತೆ ಭಾರತ್‌ ಜೋಡೋ ಯಾತ್ರೆಯನ್ನು ಮುಂದುವರಿಸಿದ್ದೇನೆ” ಎಂದು ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದರು.

ರಾಹುಲ್‌ ಗಾಂಧಿ ಭೇಟಿ ಕುರಿತು ಕಾಂಗ್ರೆಸ್‌ ಕೂಡ ಪೋಸ್ಟ್ ಮಾಡಿತ್ತು. “ಗ್ರೀಸ್‌ ಮೆತ್ತಿದ ಅಂಗಿಗಳು ಭಾರತದ ಹೆಮ್ಮೆ ಹಾಗೂ ಸ್ವಾವಲಂಬನೆಯ ಸಂಕೇತವಾಗಿವೆ. ಒಬ್ಬ ನಿಜವಾದ ಜನನಾಯಕ ಮಾತ್ರ ಅಂತಹ ಕೈಗಳನ್ನು ಪ್ರೋತ್ಸಾಹಿಸುತ್ತಾನೆ. ರಾಹುಲ್‌ ಗಾಂಧಿ ಅವರು ದೆಹಲಿಯ ಕಾಜೋಲ್‌ಬಾಗ್‌ನಲ್ಲಿರುವ ಬೈಕ್‌ ರಿಪೇರಿ ಅಂಗಡಿಗಳಿಗೆ ಭೇಟಿ ನೀಡಿದರು. ಹಾಗೆಯೇ, ಭಾರತ್‌ ಜೋಡೋ ಯಾತ್ರೆಯನ್ನು ಮುಂದುವರಿಸಿದ್ದಾರೆ” ಎಂದು ಫೋಟೊಗಳ ಸಮೇತ ಕಾಂಗ್ರೆಸ್‌ ಪೋಸ್ಟ್‌ ಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version