Site icon Vistara News

DGCA New Rules: ವಿಮಾನದ ಟಿಕೆಟ್‌ ಕ್ಯಾನ್ಸಲ್‌ ಆದರೆ ಶೇ.75ರಷ್ಟು ಹಣ ವಾಪಸ್‌, ಡಿಜಿಸಿಎ ಹೊಸ ನಿಯಮ

DGCA New Rules

ನವದೆಹಲಿ: ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (DGCA) ಸಿವಿಲ್‌ ಏವಿಯೇಷನ್‌ ರಿಕ್ವೈರ್‌ಮೆಂಟ್‌ (CAR) ನಿಯಮಗಳನ್ನು (DGCA New Rules) ಬದಲಾಯಿಸಿದ್ದು, ಹಲವು ಕಾರಣಗಳಿಂದಾಗಿ ಟಿಕೆಟ್‌ ಕ್ಯಾನ್ಸಲ್‌ ಆದರೆ, ಪ್ರಯಾಣಿಕರಿಗೆ ಟಿಕೆಟ್‌ ದರದ ಶೇ.75ರಷ್ಟು ಹಣವನ್ನು ಮರುಪಾವತಿ ಮಾಡಲಾಗುತ್ತದೆ. “ವಿಮಾನ ಪ್ರಯಾಣಿಕರ ಹಿತದೃಷ್ಟಿಯಿಂದಾಗಿ ನಿಯಮಗಳನ್ನು ಬದಲಾಯಿಸಲಾಗಿದೆ” ಎಂದು ಡಿಜಿಸಿಎ ತಿಳಿಸಿದೆ.

ವಿಮಾನ ಹತ್ತಲು ನಿರಾಕರಿಸಿದರೆ, ವಿಮಾನಗಳ ಹಾರಾಟ ರದ್ದಾದರೆ ಹಾಗೂ ವಿಮಾನಗಳ ಹಾರಾಟ ವಿಳಂಬವಾದರೆ ತೆರಿಗೆ ಸೇರಿ ಒಟ್ಟು ಟಿಕೆಟ್‌ ದರದ ಶೇ.75ರಷ್ಟು ಹಣವನ್ನು ಪ್ರಯಾಣಿಕರಿಗೆ ಮರುಪಾವತಿ ಮಾಡುವುದು ಹೊಸ ನಿಯಮದಲ್ಲಿದೆ. ಇದರಿಂದಾಗಿ, ಪ್ರಯಾಣಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ.

ಎಷ್ಟು ಪ್ರಮಾಣದ ಹಣ ವಾಪಸ್?

ಶೀಯ ವಿಮಾನ ಪ್ರಯಾಣಿಕರಿಗೆ ಶೇ.75ರಷ್ಟು ಟಿಕೆಟ್‌ ಹಣವನ್ನು ವಾಪಸ್‌ ನೀಡಲಾಗುತ್ತದೆ. ಹಾಗೆಯೇ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 1,500 ಕಿ.ಮೀ ಅಥವಾ ಅದಕ್ಕಿಂತ ಕಡಿಮೆ ದೂರದ ಪ್ರಯಾಣದ ಟಿಕೆಟ್‌ನ ಶೇ.30ರಷ್ಟು, 1,500ರಿಂದ 3,000 ಕಿ.ಮೀ ದೂರದ ಪ್ರಯಾಣದ ಟಿಕೆಟ್‌ ದರದಲ್ಲಿ ಶೇ.50ರಷ್ಟು ಹಾಗೂ 3,500 ಕಿ.ಮೀಗಿಂತ ಅಧಿಕ ದೂರದ ಪ್ರಯಾಣದ ಟಿಕೆಟ್‌ ದರದಲ್ಲಿ ಶೇ.75ರಷ್ಟು ಹಣವನ್ನು ರಿಫಂಡ್‌ ಮಾಡಲಾಗುತ್ತದೆ.

ಇದನ್ನೂ ಓದಿ: Air India Alcohol Policy: ಡಿಜಿಸಿಎ ಭಾರಿ ದಂಡದ ಬೆನ್ನಲ್ಲೇ ಆಲ್ಕೋಹಾಲ್‌ ನೀತಿ ಬದಲಿಸಿದ ಏರ್‌ ಇಂಡಿಯಾ, ಏನಿದು?

Exit mobile version