Site icon Vistara News

ಸಿನಿಮಾಗಳಲ್ಲಿ ಹಿಂದೂ ಧರ್ಮದ ಅವಹೇಳನ ತಡೆಯಲು ಧರ್ಮ ಸೆನ್ಸಾರ್‌ ಬೋರ್ಡ್‌ ಸ್ಥಾಪನೆ!

dharma sensor board

ಪ್ರಯಾಗ್‌ರಾಜ್:‌ ಸನಾತನ ಧರ್ಮವನ್ನು ಅವಹೇಳನ ಮಾಡುವ, ಅಪಮಾನಿಸುವ ಚಲನಚಿತ್ರಗಳನ್ನು ಚಿತ್ರೀಕರಿಸದಂತೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಚಿತ್ರ ತಯಾರಕರು, ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದು, ಇದಕ್ಕಾಗಿ ʼಧರ್ಮ ಸೆನ್ಸಾರ್‌ ಮಂಡಳಿʼಯನ್ನೂ ಸ್ಥಾಪಿಸಿದ್ದಾರೆ.

ಇದು ಸನಾತನ ಧರ್ಮದ ಅಂಶಗಳನ್ನು ಹೇಗೆ ಚಿತ್ರೀಕರಿಸಲಾಗಿದೆ ಎಂದು ಬಾಲಿವುಡ್‌ ಫಿಲಂಗಳನ್ನು ಪರಿಶೀಲಿಸುತ್ತದಂತೆ. ಈ ಕುರಿತು ಎಲ್ಲ ಚಿತ್ರ ತಯಾರಕರಿಗೂ ಸೂಚನೆಗಳನ್ನೂ ಕೊಡಲಾಗಿದೆಯಂತೆ.

ಸನಾತನ ಧರ್ಮವನ್ನು ಗೇಲಿ ಮಾಡುವ ವಿಚಾರಗಳು ಚಿತ್ರಗಳಲ್ಲಿ ಇಲ್ಲದಂತೆ ಮಂಡಳಿ ನೋಡಿಕೊಳ್ಳಲಿದೆ. ಇಂದು ಸರ್ಕಾರಿ ಸೆನ್ಸಾರ್‌ ಮಂಡಳಿ ಪಾಸ್‌ ಮಾಡಿರುವ ಸಿನಿಮಾಗಳು ಕೂಡ ಜನರ ಭಾವನೆಗೆ ಧಕ್ಕೆ ಬರುವಂಥ ಅಂಶಗಳನ್ನು ಹೊಂದಿರುತ್ತವೆ. ಧಾರ್ಮಿಕ ವ್ಯಕ್ತಿಗಳನ್ನು ಸೆನ್ಸಾರ್‌ ಮಂಡಳಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ನಾವು ಪದೇ ಪದೆ ಮನವಿ ಮಾಡಿದ್ದರೂ ಸರ್ಕಾರ ಪರಿಗಣಿಸಿಲ್ಲ. ಹೀಗಾಗಿ ನಾವು ನಮ್ಮದೇ ಮಂಡಳಿ ಸ್ಥಾಪಿಸಿದ್ದೇವೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಇದನ್ನೂ ಓದಿ | ಸನಾತನ ಧರ್ಮದ ಬಗ್ಗೆ ಕಲಿಕೆಗೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿರೋಧ

ಈ ಮಂಡಳಿ ಸಿನಿಮಾಗಳು, ಸೀರಿಯಲ್‌ಗಳ ಜತೆಗೆ ಶಾಲೆ- ಕಾಲೇಜುಗಳಲ್ಲಿ ತಯಾರಾಗುವ ನಾಟಕಗಳನ್ನು ಸಹ ಪರಿಶೀಲಿಸಲಿದೆ ಎಂದಿದ್ದಾರೆ. ಈ ಮಂಡಳಿಗೆ ಒಂದು ಕಾನೂನು ಸೆಲ್‌ ಸಹ ಇದೆ. ಅವಮಾನಕಾರಕ ಅಂಶಗಳನ್ನು ಚರ್ಚೆಯ ಮೂಲಕ ತಡೆಯಲು ಯತ್ನಿಸಿ, ಸಾಧ್ಯವಾಗದಿದ್ದರೆ ನ್ಯಾಯಾಂಗ ಮೊರೆ ಹೋಗಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ | ಈದ್ಗಾ ಗೋಡೆ ಕೆಡುವುದಾಗಿ ಹೇಳಿಕೆ; ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ವಿರುದ್ಧ ಎಫ್‌ಐಆರ್‌

Exit mobile version