ಮುಂಬೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ನೂಡಲ್ಸ್ ಪ್ಯಾಕೆಟ್ಗಳಲ್ಲಿ ಹುದುಗಿಸಿಟ್ಟಿದದ ವಜ್ರಗಳ ಹರಳುಗಳು (Diamond Smuggling) ಪತ್ತೆಯಾಗಿವೆ. ಅದರ ಮೌಲ್ಯ 6.48 ಕೋಟಿ ರೂಪಾಯಿ ಎಂದು ಮೌಲ್ಯ ಮಾಪನ ಮಾಡಲಾಗಿದೆ. ಅರೋಪಿ ಸಮೇತ ಅಧಿಕಾರಿಗಳು ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯನ್ನು ವಿವರಿಸಿದ ಅಧಿಕಾರಿಯೊಬ್ಬರು ಮುಂಬೈನಿಂದ ಬ್ಯಾಂಕಾಕ್ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯನ್ನು ತಡೆಯಲಾಯಿತು. ಈ ವೇಳೆ ಆತನ ಟ್ರಾಲಿ ಬ್ಯಾಗ್ನಲ್ಲಿ ನೂಡಲ್ಸ್ ಪ್ಯಾಕೆಟ್ಗಳಿದ್ದವು. ಅದರಲ್ಲಿ ಅಡಗಿಸಿಟ್ಟಿದ್ದ ವಜ್ರಗಳಿದ್ದು/ ಅವುಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂತು ಎಂದು ಹೇಳಿದ್ದಾರೆ.
ಅದೇ ರೀತಿ ಕೊಲಂಬೋದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿದೇಶಿ ಪ್ರಜೆಯೊಬ್ಬರು ಚಿನ್ನದ ಗಟ್ಟಿಗಳು ಮತ್ತು ಕತ್ತರಿಸಿದ ತುಂಡನ್ನು ಸಾಗಿಸುತ್ತಿರುವುದು ಕಂಡುಬಂದಿದೆ. 321 ಗ್ರಾಂ ತೂಕದ ಚಿನ್ನವನ್ನು ತನ್ನ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿರುವುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.
ದುಬೈ ಮತ್ತು ಅಬುಧಾಬಿಯಿಂದ ತಲಾ ಇಬ್ಬರು, ಬಹ್ರೇನ್, ದೋಹಾ, ರಿಯಾದ್, ಮಸ್ಕತ್, ಬ್ಯಾಂಕಾಕ್ ಮತ್ತು ಸಿಂಗಾಪುರದಿಂದ ತಲಾ ಒಬ್ಬರು ಸೇರಿದಂತೆ ಕನಿಷ್ಠ 10 ಭಾರತೀಯ ಪ್ರಜೆಗಳನ್ನು ತಡೆದು 4.04 ಕೋಟಿ ಮೌಲ್ಯದ 6.199 ಕೆ.ಜಿ ಚಿನ್ನ ಸಾಗಿಸುತ್ತಿರುವುದು ಕಂಡುಬಂದಿದೆ. ಅವರಲ್ಲಿ ಮೂವರನ್ನು ನಂತರ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ರೆಸ್ಟೊರೆಂಟ್ ಮಾಲೀಕನ ನೆರವು
ಇದೇ ರೀತಿಯ ಘಟನೆಯಲ್ಲಿ, ಮುಂಬೈ ವಿಮಾನ ನಿಲ್ದಾಣದಿಂದ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಹೊರತರಲು ಸಹಾಯ ಮಾಡಿದ್ದ ಆರೋಪದ ಮೇಲೆ ಅಲ್ಲಿನ ಫಾಸ್ಟ್ ಫುಡ್ ರೆಸ್ಟೋರೆಂಟ್ 38 ವರ್ಷದ ಉದ್ಯೋಗಿಯನ್ನು ಮುಂಬೈ ಕಸ್ಟಮ್ಸ್ನ ಏರ್ ಇಂಟೆಲಿಜೆನ್ಸ್ ಯುನಿಟ್ ಬಂಧಿಸಿದೆ. ಸುಮಾರು 1.86 ಕೋಟಿ ಮೌಲ್ಯದ 6 ಅಂಡಾಕಾರದ ಚಿನ್ನದ ಕ್ಯಾಪ್ಸೂಲ್ಸ್ನಲ್ಲಿ ತನ್ನ ಬೆಲ್ಟ್ನಲ್ಲಿ ಅಡಗಿಸಿಟ್ಟಿರುವುದು ಕಂಡುಬಂದಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಇದನ್ನೂ ಓದಿ: Fraud Case : ಗುಜರಿ ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಪೀಕಿದ ಪೊಲೀಸ್ ಹಾಗೂ ಇನ್ಫಾರ್ಮರ್
ನಿರ್ಗಮನ ಪ್ರದೇಶದಲ್ಲಿ ಚಿನ್ನವನ್ನು ಸ್ವೀಕರಿಸುವುದು ಮತ್ತು ಅದನ್ನು ಹೊರಗಿನ ದಂಧೆಯ ಸದಸ್ಯರಿಗೆ ಹಸ್ತಾಂತರಿಸುವುದು ಅವನ ಪಾತ್ರವಾಗಿತ್ತು. ಅವರು ಬಾಂದ್ರಾ ಟಿ ಜಂಕ್ಷನ್ನಲ್ಲಿ ನೂರುಲ್ ಹಸನ್ ಜೆ ಮತ್ತು ಕಲಂದರ್ ಅಝರುದ್ದೀನ್ ಎಂಬುವರಿಗೆ ಸರಕುಗಳನ್ನು ಹಸ್ತಾಂತರಿಸಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಸ್ಜಿದ್ ಬಂದರ್ ನ ಹೋಟೆಲ್ ಸ್ಟಾರ್ ನಲ್ಲಿ ತಂಗಿದ್ದ ನೂರುಲ್ ಮತ್ತು ಕಲಂದರ್ ಅವರು ಮೊಹಮ್ಮದ್ ಅಲಿ ರಸ್ತೆಯ ಆಂಥೋನಿ ಎಂಬುವರಿಗೆ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅವರು ಪ್ರತಿ ವಿತರಣೆಗೆ 3 ಲಕ್ಷ ರೂ.ಗಳನ್ನು ಪಡೆದರು, ಅದರಲ್ಲಿ 1.8 ಲಕ್ಷ ರೂ.ಗಳನ್ನು ಕಳ್ಳಸಾಗಣೆಗೆ ಸಹಾಯ ಮಾಡಿದ್ದಕ್ಕಾಗಿ ಪಾಂಡಿಯನ್ ಗೆ ಪಾವತಿಸುತ್ತಿದ್ದರು.