Site icon Vistara News

RSS R-Day | ಗಣರಾಜ್ಯೋತ್ಸವ ಪರೇಡ್‌ಗೆ ನೆಹರು ಆರ್‌ಎಸ್ಎಸ್ ಆಹ್ವಾನಿಸಿದ್ದರೆ? ಸರ್ಕಾರಿ ದಾಖಲೆ ಏನು ಹೇಳುತ್ತವೆ?

Neharu

ನವ ದೆಹಲಿ: ಕೇರಳ ಗವರ್ನರ್ ಆರೀಫ್ ಮೊಹಮ್ಮದ್ ಖಾನ್ ಅವರು ಆರ್‌ಎಸ್‌ಎಸ್ (RSS) ಮುಖ್ಯಸ್ಥರನ್ನು ಭೇಟಿ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ರಾಜ್ಯಪಾಲರ ಈ ನಡೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಟುವಾಗಿ ಟೀಕಿಸಿದ್ದಾರೆ. ಆದರೆ, ರಾಜ್ಯಪಾಲರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯಪಾಲರು ಯಾರನ್ನಾದರೂ ಭೇಟಿ ಮಾಡಬಹುದು ಎಂದು ಆರ್‌ಎಸ್ಎಸ್ ಕೂಡ ಕೇರಳ ಗವರ್ನರ್ ಬೆನ್ನಿಗೆ ನಿಂತಿದೆ.

ಈ ವಿವಾದವೂ ಇನ್ನಷ್ಟು ಹೆಚ್ಚಿತ್ತಿದ್ದಂತೆ ಮತ್ತೆ ಜವಾಹರ್ ಲಾಲ್ ನೆಹರು ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಗಣರಾಜ್ಯೋತ್ಸವ ಪರೇಡ್‌ಗೆ ಆರ್‌ಎಸ್ಎಸ್ ಸ್ವಯಂ ಸೇವಕರನ್ನು ಆಹ್ವಾನಿಸಿದ್ದರು ಎಂದು ಆರ್‌ಎಸ್‌ಸ್, ಕೇರಳ ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡಿದೆ. 1962ರ ಇಂಡೋ-ಚೀನಾ ಯುದ್ಧದ ವೇಳೆ, ಆರ್‌ಎಸ್ಎಸ್ ಸ್ವಯಂ ಸೇವಕರ ಕೈಗೊಂಡ ಸೇವೆಯನ್ನು ಪರಿಗಣಿಸಿ ನೆಹರು ಗಣರಾಜ್ಯೋತ್ಸವ ಪರೇಡ್‌ಗೆ ಆಹ್ವಾನಿಸಿದ್ದರು ಎಂದು ಆರ್‌ಎಸ್ಎಸ್ ಹೇಳಿಕೊಳ್ಳುತ್ತಿದೆ.

ನಿಜವಾಗ್ಲೂ ನೆಹರು ಆಹ್ವಾನಿಸಿದ್ದರೆ?
ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಆರ್‌ಎಸ್ಎಸ್ ಅನ್ನು ಗಣರಾಜ್ಯೋತ್ಸವ ಪರೇಡ್‌ಗೆ ಆಹ್ವಾನಿಸಿದ್ದಕ್ಕೆ ಅಧಿಕೃತ ದಾಖಲೆಗಳಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂಡಿಯಾ ಟುಡೇ ಮ್ಯಾಗ್‌ಜಿನ್ 2018ರಲ್ಲಿಆರ್‌ಟಿಐನಡಿ ಮಾಹಿತಿಯನ್ನು ಕೇಳಿತ್ತು. ಈ ಅರ್ಜಿಗೆ ಉತ್ತರಿಸಿದ್ದ ರಕ್ಷಣಾ ಸಚಿವಾಲಯವು, 1963ರ ಗಣ ರಾಜ್ಯೋತ್ಸವದ ವೇಳೆ ಪರೇಡ್‌ಗೆ ಸಂಬಂಧಿಸಿದ ಮಾಹಿತಿಗಳು ಲಭ್ಯವಿಲ್ಲ ಎಂಬ ಉತ್ತರವನ್ನು ನೀಡಿತ್ತು.

ಆರ್‌ಎಸ್ಎಸ್ ಹೇಳೋದೇನು?
ಈ ಆರ್‌ಟಿಐ ವರದಿಯನ್ನು ಅಲ್ಲಗಳೆಯುವ ಆರ್‌ಎಸ್ಎಸ್ ನಾಯಕ ಜೆ ನಂದಕುಮಾರ್ ಅವರು ಹೇಳುವುದೇ ಬೇರೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆರ್‌ಎಸ್ಎಸ್ ಪಾಲ್ಗೊಂಡಿದ್ದ ಸತ್ಯ. ಇದು ದಾಖಲೆಗಳಲ್ಲಿದೆ. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ಕೂಡ ಈ ಬಗ್ಗೆ ಫೋಟೊಗ್ರಾಫ್ ಪ್ರಕಟಿಸಿತ್ತು ಎಂದು ಹೇಳಿದ್ದಾರೆ.

ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಆರ್‌ಟಿಐ ಮಾಹಿತಿಯನ್ನು ಒದಗಿಸುತ್ತದೆ. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ದಾಖಲೆಗಳು ಕೂಡ ಲಭ್ಯವಿಲ್ಲ. ಸಾಕ್ಷ್ಯಗಳನ್ನು ನಾಶಪಡಿಸಿರಬಹುದು, ಹಾಗಂತ ಇದೇ ಸತ್ಯವಲ್ಲ. ಆ ಸಮಯದಲ್ಲಿ ಆಡಳಿತದಲ್ಲಿದ್ದ ಸರ್ಕಾರವು, ಒಪ್ಪಿಕೊಳ್ಳಲು ಇಷ್ಟವಿಲ್ಲದ ಸತ್ಯ ಸಂಗತಿಗಳ ರಕ್ಷಣೆಗೆ ಮುಂದಾಗದಿರಬುಹುದು ಎಂದು ತಿಳಿಸಿದ್ದಾರೆ.

ಯಾರನ್ನಾದರೂ ಭೇಟಿಯಾಗಬಹುದು?
ಆರ್‌ಎಸ್ಎಸ್ ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್, ರಾಜ್ಯಪಾಲರ ಭೇಟಿಯನ್ನು ವಿನಾಕಾರಣ ವಿವಾದ ಮಾಡಲಾಗುತ್ತಿದೆ. ಯಾರನ್ನಾದರೂ ಭೇಟಿಯಾಗಲು ಗವರ್ನರ್ ಮುಕ್ತರಾಗಿರುತ್ತಾರೆ. ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ, ಅವರು ಯಾರನ್ನಾದರೂ ಭೇಟಿಯಾಗಬಹುದು ಎಂದು ಅವರು ತಿಳಿಸಿದ್ದಾರೆ.

ನೆಹರು ಅವರು ಆರ್‌ಎಸ್ಎಸ್‌ಗೆ ಸಂಬಂಧಿಸಿದ ಈ ಮಾಹಿತಿಯನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿಲ್ಲ ಎಂದು ಹಿರಿಯ ಕಾಂಗ್ರೆಸಿಗ ಎಂ ವೀರಪ್ಪ ಮೊಯ್ಲಿ ಅವರು, ಆರ್‌ಎಸ್ಎಸ್ ವಾದವನ್ನು ತಳ್ಳಿ ಹಾಕುತ್ತಾರೆ.

ಏತನ್ಮಧ್ಯೆ, ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು, ಎರಡೂ ಸಮುದಾಯಗಳ ಮಧ್ಯೆ ಸೌಹಾರ್ದ ಸ್ಥಾಪಿಸುವುದಕ್ಕಾಗಿ ಮುಸ್ಲಿಮ್ ಸಮುದಾಯದ ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ |Kerala Governor | ಕೇರಳ ಸರ್ಕಾರ v/s ಗವರ್ನರ್ : ಹಳೆ ವಿಡಿಯೋ ಷೇರ್ ಮಾಡಿದ ಖಾನ್!

Exit mobile version