Site icon Vistara News

Jagan Mohan Reddy: ಸರ್ಕಾರದ 500 ಕೋಟಿ ರೂ.ನಲ್ಲಿ ಜಗನ್‌ ಅರಮನೆ ನಿರ್ಮಾಣ? ಟಿಡಿಪಿ ಸ್ಫೋಟಕ ಆರೋಪ

Jagan Mohan Reddy

Did YS Jagan Mohan Reddy Build Palace On Hill For His Use? TDP's New Charge

ಅಮರಾವತಿ: ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ (Andhra Pradesh Assembly Election 2024) ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ (Jagan Mohan Reddy) ಅವರ ವೈಎಸ್‌ಆರ್‌ಸಿಪಿ ಪಕ್ಷವು ಸೋಲನುಭವಿಸಿದ್ದು, ಜಗನ್‌ ಮೋಹನ್‌ ರೆಡ್ಡಿ ಅವರು ಮುಖಭಂಗ ಅನುಭವಿಸಿದ್ದಾರೆ. ಎನ್‌.ಚಂದ್ರಬಾಬು ನಾಯ್ಡು (N Chandra Babu Naidu) ಅವರ ಟಿಡಿಪಿಯು ಆಂಧ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಇದರ ಬೆನ್ನಲ್ಲೇ, “ಜಗನ್‌ ಮೋಹನ್‌ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದ 500 ಕೋಟಿ ರೂ. ವೆಚ್ಚದಲ್ಲಿ ವಿಶಾಖಪಟ್ಟಣಂನಲ್ಲಿ ಅರಮನೆಯಂತಹ ಐಷಾರಾಮಿ ಬಂಗಲೆ ಕಟ್ಟಿಸಿಕೊಂಡಿದ್ದಾರೆ” ಎಂಬುದಾಗಿ ಟಿಡಿಪಿ ಗಂಭೀರ ಆರೋಪ ಮಾಡಿದೆ.

ವಿಶಾಖಪಟ್ಟಣಂನಲ್ಲಿರುವ ಋಷಿಕೊಂಡ ಬೆಟ್ಟದಲ್ಲಿ ನಿರ್ಮಿಸಲಾಗಿರುವ ಟಿಡಿಪಿ ಶಾಸಕ ಗಂಟಾ ಶ್ರೀನಿವಾಸ್‌ ರಾವ್‌ ನೇತೃತ್ವದ ಎನ್‌ಡಿಎ ನಿಯೋಗವು ಭೇಟಿ ನೀಡಿದ್ದು, ಇದಾದ ಬಳಿಕ ಟಿಡಿಪಿಯು ಗಂಭೀರ ಆರೋಪ ಮಾಡಿದೆ. “ಜಗನ್‌ ಮೋಹನ್‌ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ 500 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಬಂಗಲೆಯನ್ನು ಕಟ್ಟಿಸಿಕೊಂಡಿದ್ದಾರೆ. ಇನ್ನೂ 10 ವರ್ಷ ಆಡಳಿತದಲ್ಲಿರುತ್ತೇನೆ ಎಂದು ಭಾವಿಸಿ, ವೈಯಕ್ತಿಕ ಕಾರಣಗಳಿಗಾಗಿ ಇದನ್ನು ಬಳಸುವುದು ಅವರ ಉದ್ದೇಶವಾಗಿತ್ತು” ಎಂದು ಟಿಡಿಪಿ ಆರೋಪಿಸಿದೆ.

ವಿಶಾಖಪಟ್ಟಣಂ ಅಥವಾ ವೈಜಾಗ್‌ಅನ್ನೇ ಇದಕ್ಕೂ ಮೊದಲು ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಲಾಗಿತ್ತು. ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಅವರು ಇದಕ್ಕೂ ಮೊದಲು ಮೂರು ನಗರಗಳನ್ನು ರಾಜಧಾನಿ ಎಂಬುದಾಗಿ ಘೋಷಿಸಲಾಗಿತ್ತು. ವಿಶಾಖಪಟ್ಟಣಂಅನ್ನು ಕೂಡ ರಾಜಧಾನಿ ಎಂಬುದಾಗಿ ಘೋಷಿಸಲಾಗಿತ್ತು. ಹಾಗಾಗಿ, ಇಲ್ಲಿಯೇ ಐಷಾರಾಮಿ ಮನೆಯನ್ನು ಕಟ್ಟಿಸಿದ್ದಾರೆ. ಪತ್ನಿಯ ಆಸೆಯಂತೆಯೇ ಜಗನ್‌ ಮೋಹನ್‌ ರೆಡ್ಡಿ ಅವರು ಐಷಾರಾಮಿ ಬಂಗಲೆ ಕಟ್ಟಿಸಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ.

ಋಷಿಕೊಂಡ ಹಿಲ್ಸ್‌ ಪ್ರವಾಸಿ ತಾಣವಾಗಿತ್ತು. ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, 9.88 ಎಕರೆ ಜಾಗದಲ್ಲಿ ಜಗನ್‌ ಮೋಹನ್‌ ರೆಡ್ಡಿ ಅವರು ಬಂಗಲೆ ನಿರ್ಮಿಸಿದ್ದಾರೆ. ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಬಾತ್‌ ಟಬ್‌ ನಿರ್ಮಿಸಿದ್ದಾರೆ. ಇಂತಹ ಹತ್ತಾರು ಐಷಾರಾಮಿ ಕೋಣೆಗಳು, ಸೌಕರ್ಯಗಳು ಬಂಗಲೆಯಲ್ಲಿವೆ. ಇದನ್ನೇ ಪಾರ್ಟಿ ಕಚೇರಿ ಮಾಡುವುದು ಜಗನ್‌ ಮೋಹನ್‌ ರೆಡ್ಡಿ ಅವರ ಉದ್ದೇಶವಾಗಿತ್ತು ಎಂದು ಆರೋಪಿಸಲಾಗಿದೆ. ಆಂಧ್ರ ಪ್ರದೇಶ ವಿಧಾನ ಸಭೆಯ 175 ಸೀಟುಗಳ ಪೈಕಿ ಎನ್‌ಡಿಎ 164 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಈ ಪೈಕಿ ಟಿಡಿಪಿ 135, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 8 ಕಡೆ ಗೆದ್ದಿದೆ. ವೈಎಸ್‌ಆರ್‌ಸಿಪಿಯು ಕೇವಲ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ಅವರಿಗೆ ಮುಖಭಂಗ ತಂದಿದೆ.

ಇದನ್ನೂ ಓದಿ: Jagan Reddy : ಚುನಾವಣಾ ರ್ಯಾಲಿಯಲ್ಲಿ ಆಂಧ್ರ ಸಿಎಂ ಜಗನ್​​ ತಲೆಗೆ ಕಲ್ಲೆಸೆತ

Exit mobile version