Site icon Vistara News

ಮಾರ್ಚ್ 31ರಿಂದ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ HBO ಕಂಟೆಂಟ್ ಪ್ರಸಾರ ಸ್ಥಗಿತ!

Disney+ Hotstar to stop streaming HBO

ನವದೆಹಲಿ: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ (Disney+ Hotstar) ಮಾರ್ಚ್ 31ರಿಂದ ಎಚ್‌ಬಿಒ ಪ್ರಸಾರವಾಗುವುದಿಲ್ಲ. ಎಚ್‌ಬಿಒ(HBO) ಪ್ರಸಾರ ಹಕ್ಕುಗಳನ್ನು ಕಳೆದುಕೊಳ್ಳುವ ಮೂಲಕ ಡಿಸ್ನಿ ಮಾಲೀಕತ್ವದ ವಿಡಿಯೋ ಸ್ಟ್ರೀಮಿಂಗ್ ಸರ್ವೀಸ್ ವೇದಿಕೆಗೆ ಮತ್ತೊಂದು ಹಿನ್ನಡೆಯಾಗಿದೆ.

ಡಿಸ್ನಿ ಸಿಇಒ ಬಾಬ್ ಇಗರ್ ಅವರು 5.5 ಶತಕೋಟಿ ಡಾಲರ್ ವೆಚ್ಚವನ್ನು ತಗ್ಗಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಈ ವಿಷಯವನ್ನು ಪ್ರಕಟಿಸಿದ ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಇದರಲ್ಲಿ ಸುಮಾರು 3 ಬಿಲಿಯನ್ ಡಾಲರ್ ಕ್ರೀಡಾ ಹೊರತಾದ ವಿಷಯ ಮತ್ತು 2.5 ಬಿಲಿಯನ್ ಡಾಲರ್ ನಾನ್ ಕಂಟೆಂಟ್ ವೆಚ್ಚಗಳು ಸೇರಿವೆ. ಇದರ ಭಾಗವಾಗಿಯೇ ಕಂಪನಿಯು ಸುಮಾರು 7000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ. ಅಂದರೆ, ಒಟ್ಟು ಕೆಲಸಗಾರರ ಪೈಕಿ ಶೇ.3.6ರಷ್ಟು ಉದ್ಯೋಗಿಗಳು ಕೆಲಸವನ್ನು ಕಳೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: Disney layoffs : ಡಿಸ್ನಿಯಿಂದ 7000 ಉದ್ಯೋಗ ಕಡಿತ

ಮಾರ್ಚ್ 31ರಿಂದ ಎಚ್‌ಬಿಒ ಕಂಟೆಂಟ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ದೊರೆಯುವುದಿಲ್ಲ. 10 ಭಾಷೆಗಳಲ್ಲಿ 100,000 ಗಂಟೆಗಳ ಟಿವಿ ಶೋಗಳು, ಸಿನಿಮಾಗಳು ಮತ್ತು ಪ್ರಮುಖ ಜಾಗತಿಕ ಕ್ರೀಡಾಕೂಟಗಳ ಕಂಟೆಂಟ್ ಅನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಹೊಂದಿದ್ದು, ನೀವು ಆನಂದಿಸಬಹುದು ಎಂದು ಕಂಪನಿ ಟ್ವೀಟ್‌ನಲ್ಲಿ ತಿಳಿಸಿದೆ.

Exit mobile version