Site icon Vistara News

Padma Awards 2024: ದಿವ್ಯಾಂಗರಾದರೂ ಸಮಾಜಕ್ಕೆ ಮಿಡಿದ ಗುರ್ವಿಂದರ್‌ಗೆ ಪದ್ಮಶ್ರೀ ಗರಿ!

gurvinder singh Social worker

Divyang Gurvinder Singh from Haryana has been awarded Padma Shri Award

ನವದೆಹಲಿ: ಕೇಂದ್ರ ಸರ್ಕಾರವು 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು (Padma Awards 2024) ಘೋಷಿಸಿದೆ. ಒಟ್ಟು 110 ಜನರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಪೈಕಿ ಕರ್ನಾಟಕದ ಎಂಟು ಸಾಧಕರಿದ್ದಾರೆ. ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಪ್ರೇಮಾ ಧನರಾಜ್, ಅನುಪಮಾ ಹೊಸಕೆರೆ, ಶ್ರೀಧರ್ ಎಂ ಕೃಷ್ಣಮೂರ್ತಿ, ಸಾಮಾಜಿಕ ಸೇವೆಗಾಗಿ ಕೆ ಎಸ್ ರಾಜಣ್ಣ, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಸಿ ಆರ್ ಚಂದ್ರಶೇಖರ್, ಮೈಸೂರಿನ ಸೋಮಣ್ಣ, ಉದ್ಯಮಿ ಶಶಿ ಸೋನಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಇನ್ನು ಪದ್ಮಶ್ರೀ ಪುರಸ್ಕೃತ ಸಾಧಕರಲ್ಲಿ ಹರಿಯಾಣದ ಗುರ್ವಿಂದರ್‌ ಸಿಂಗ್‌ (Gurvinder Singh) ಅವರು ಕೂಡ ಇದ್ದಾರೆ. ಇವರು ವಿಶೇಷ ಚೇತನರಾದರೂ ದಿವ್ಯಾಂಗರು, ಅಸಹಾಯಕರಿಗೆ ಮಾಡಿದ ಸೇವೆ ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿ (Padma Shri Award) ಘೋಷಿಸಲಾಗಿದೆ.

ಹರಿಯಾಣದ ಸಿರ್ಸಾ ಜಿಲ್ಲೆಯವರಾದ ಗುರ್ವಿಂದರ್‌ ಸಿಂಗ್‌ ಅವರು ಕಳೆದ 34 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಗುರ್ವಿಂದರ್‌ ಸಿಂಗ್‌ ಅವರು ವಿಶೇಷ ಚೇತನರಾಗಿದ್ದರೂ ಸಮಾಜ ಸೇವೆಯಲ್ಲಿ ತೊಡಗಿ, ಸಾವಿರಾರು ಜನರಿಗೆ ಆಶ್ರಯವಾದ ಕಾರಣ ಇವರಿಗೆ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ. 53 ವರ್ಷದ ಗುರ್ವಿಂದರ್‌ ಸಿಂಗ್‌ ಅವರು 19ನೇ ವರ್ಷದಿಂದಲೂ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಅನಾಥರು, ದಿವ್ಯಾಂಗರು, ವೃದ್ಧರ ಸೇವೆಯಲ್ಲಿ ತೊಡಗಿರುವ ಇವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

ಗುರ್ವಿಂದರ್‌ ಸಿಂಗ್‌ ಸಮಾಜಮುಖಿ ಕೆಲಸಗಳು

ಇದನ್ನೂ ಓದಿ: Padma Awards: ರೋಹನ್ ಬೋಪಣ್ಣ, ಅನುಪಮಾ ಹೊಸಕೆರೆ, ಸಿ.ಆರ್ ಚಂದ್ರಶೇಖರ್ ಸೇರಿ 8 ಕನ್ನಡಿಗರಿಗೆ ಪದ್ಮಶ್ರೀ

ವ್ಹೀಲ್‌ಚೇರ್‌ನಲ್ಲೇ ಜೀವನ, ಸಮಾಜಸೇವೆಯ ಧ್ಯಾನ

ಗುರ್ವಿಂದರ್‌ ಸಿಂಗ್‌ ಅವರು ಚಿಕ್ಕವರಿದ್ದಾಗಲೇ ಟ್ರಕ್‌ ಗುದ್ದಿದ ಪರಿಣಾಮ ಅವರ ಸೊಂಟವು ಸ್ವಾಧೀನ ಕಳೆದುಕೊಂಡಿದ್ದಾರೆ. ಹಾಗಾಗಿ, ಅವರು ವ್ಹೀಲ್‌ಚೇರ್‌ನಲ್ಲಿಯೇ ಇಡೀ ಜೀವನ ಸಾಗಿಸುತ್ತಿದ್ದಾರೆ. ಆದರೆ, ತಮಗಾದ ಅಪಘಾತವನ್ನು ಶಪಿಸುತ್ತ ಕೂರದ ಅವರು ಸಾವಿರಾರು ಜನರಿಗೆ ದಾರಿದೀಪವಾಗಿದ್ದಾರೆ. ತಲೆನೋವು ಬಂದರೂ ಆಫೀಸಿಗೆ ರಜೆ ಹಾಕುವ, ದಿನವಿಡೀ ದೂರುತ್ತಲೇ ಇರುವ ನಮ್ಮ ಮಧ್ಯೆ, ದಿವ್ಯಾಂಗರಾದರೂ ಬೇರೆಯವರ ಜೀವನಕ್ಕಾಗಿ ಮಿಡಿಯುತ್ತಿರುವ ಗುರ್ವಿಂದರ್‌ ಅವರಿಗೆ ಪದ್ಮಶ್ರೀ ಘೋಷಿಸುವ ಮೂಲಕ ಪ್ರಶಸ್ತಿಯ ಮೌಲ್ಯವನ್ನೇ ಹೆಚ್ಚಿಸಿದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version