Site icon Vistara News

DMK leader Controversy: ಶ್ರೀರಾಮನ ಅಸ್ತಿತ್ವಕ್ಕೆ ಪುರಾವೆಗಳೇ ಇಲ್ಲ: ಡಿಎಂಕೆ ನಾಯಕನ ವಿಡಿಯೋ ಫುಲ್‌ ವೈರಲ್‌

DMK Leader Controversy

ಚೆನ್ನೈ: ಅದೆಷ್ಟೋ ಸಹಸ್ರಾರು ಸಂಖ್ಯೆ ಭಕ್ತರು ಪೂಜಿಸುವ ಆರಾಧಿಸುವ ಭಗವಾನ್‌ ಶ್ರೀರಾಮ(Lord Ram) ಅಸ್ತಿತ್ವದ ಬಗ್ಗೆ ಆಗಾಗ ಪ್ರಶ್ನೆಗಳು ಭುಗಿಲೇಳುತ್ತಲೇ ಇರುತ್ತವೆ. ಅದರಲ್ಲೂ ಪ್ರತಿಪಕ್ಷ ನಾಯಕರು ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನಿಸಿ ವಿವಾದ ಸೃಷ್ಟಿಸಿರುವ ಘಟನೆ ಆಗಾಗ ವರದಿಯಾಗುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ತಮಿಳುನಾಡಿನ ಡಿಎಂಕೆ ನಾಯಕ(DMK leader Controversy) ಎಸ್‌.ಎಸ್‌. ಶಿವಶಂಕರ್‌(SS Sivasankar) ಶ್ರೀರಾಮನ ಅಸ್ತಿತ್ವಕ್ಕೆ ಪುರಾವೆಗಳೇ ಇಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ಅರಿಯಾಲೂರ್‌ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಪ್ರದೇಶದಲ್ಲಿ ನಡೆದ ರಾಜೇಂದ್ರ ಚೋಳನ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿವಶಂಕರ್‌, ರಾಜೇಂದ್ರ ಚೋಳನ ಪರಂಪರೆಯನ್ನು ಆಚರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿತ್ತು. ಕೆಲವರು ಅಪ್ರಸ್ತುತ ವ್ಯಕ್ತಿಗಳ ಪೂಜೆಗೆ ಜನರನ್ನು ಒತ್ತಾಯಿಸಿದರು. ನಾವು ಚೋಳ ರಾಜವಂಶದ ಚಕ್ರವರ್ತಿ ರಾಜೇಂದ್ರ ಚೋಳನ ಜನ್ಮದಿನವನ್ನು ಆಚರಿಸುತ್ತೇವೆ, ಏಕೆಂದರೆ ನಮ್ಮಲ್ಲಿ ಶಾಸನಗಳು, ಅವನು ನಿರ್ಮಿಸಿದ ದೇವಾಲಯಗಳು ಮತ್ತು ಅವನು ರಚಿಸಿದ ಸರೋವರದಂತಹ ಪುರಾತತ್ತ್ವ ಶಾಸ್ತ್ರದ ಪುರಾವೆಗಳಿವೆ. ಆದರೆ, ರಾಮನ ಇತಿಹಾಸವನ್ನು ಪತ್ತೆಹಚ್ಚಲು ಯಾವುದೇ ಪುರಾವೆಗಳಿಲ್ಲ ಎಂದು ಶಿವಶಂಕರ್ ಹೇಳಿದ್ದಾರೆ.

“ಭಗವಾನ್ ರಾಮನು 3,000 ವರ್ಷಗಳ ಹಿಂದೆ ಬದುಕಿದ್ದನೆಂದು ಅವರು ಹೇಳಿಕೊಳ್ಳುತ್ತಾರೆ ಮತ್ತು ಅವನನ್ನು ಅವತಾರ ಪುರುಷ ಎಂದು ಕರೆಯುತ್ತಾರೆ. ಅವತಾರ ಪುರುಷನಾದವನಿಗೆ ಹುಟ್ಟು ಸಾವಿಲ್ಲ. ರಾಮನ ಅವತಾರ ಆಗಿದ್ದರೆ ಅವನು ಹುಟ್ಟುತ್ತಿರಲಿಲ್ಲ. ಅವನು ಹುಟ್ಟಿದ್ದರೆ ಅವನು ದೇವರಾಗಲು ಸಾಧ್ಯವಿಲ್ಲ. ನಮ್ಮನ್ನು ಕುಶಲತೆಯಿಂದ, ನಮ್ಮ ಇತಿಹಾಸವನ್ನು ಮರೆಮಾಚಲು ಮತ್ತು ಇನ್ನೊಂದು ಇತಿಹಾಸವನ್ನು ದೊಡ್ಡದಾಗಿ ತೋರಿಸಲು ಇದನ್ನು ಮಾಡಲಾಗುತ್ತಿದೆ. ರಾಮಾಯಣ ಮತ್ತು ಮಹಾಭಾರತದಿಂದ ಕಲಿಯುವಂತಹ ಯಾವುದೇ ಜೀವನ ಪಾಠ ಇಲ್ಲ ಎಂದು ಸಚಿವರು ಟೀಕಿಸಿದ್ದಾರೆ.

ಇನ್ನು ಡಿಎಂಕೆ ಸಚಿವ ವಿವಾದಾತ್ಮಕ ಹೇಳಿಕೆ ಬಿಜೆಪಿ ಭಾರೀ ಕಿಡಿಕಾರಿದೆ. ಈ ಬಗ್ಗೆ ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಈ ಬಗ್ಗೆ ಕಿಡಿಕಾರಿದ್ದು, ಡಿಎಂಕೆ ಶ್ರೀರಾಮನ ಬಗ್ಗೆ ಏಕೆ ಇಷ್ಟು ಕೋಪ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Mallikarjuna Kharge: ಶಿವ, ಶ್ರೀರಾಮನ ಬಗ್ಗೆ ಖರ್ಗೆ ವಿವಾದಾತ್ಮಕ ಹೇಳಿಕೆ; ಬಿಜೆಪಿ ಕಿಡಿ

Exit mobile version