ನವದೆಹಲಿ: ಸನಾತನ ಧರ್ಮವನ್ನು (Sanatana Dharma Row) ನಿರ್ಮೂಲನೆ ಮಾಡಬೇಕು ಎನ್ನುವ ಮೂಲಕ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಹೇಳಿಕೆಯ ಬೆನ್ನಲ್ಲೇ, ಡಿಎಂಕೆ ಇನ್ನೊಬ್ಬ ನಾಯಕ ಎ. ರಾಜಾ (DMK MP A Raja) ಅವರು ಸನಾತನ ಧರ್ಮವನ್ನು ಎಚ್ಐವಿ(ಏಡ್ಸ್-AIDS) ಮತ್ತು ಕುಷ್ಠರೋಗಕ್ಕೆ (leprosy) ಹೋಲಿಕೆ ಮಾಡಿದ್ದಾರೆ. ಇದರೊಂದಿಗೆ ಸನಾತನ ಧರ್ಮ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ ಎ. ರಾಜಾ ಅವರು.
ಚೆನ್ನೈನಲ್ಲಿ ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದ ಎ ರಾಜಾ ಅವರು , ಸನಾತನ ಧರ್ಮ’ದ ಕುರಿತು ಉದಯನಿಧಿ ಅವರು ಆಡಿರುವ ಮಾತುಗಳು ಬಹಳ ಸೌಮ್ಯವಾದವು. ಸನಾತನ ಮತ್ತು ವಿಶ್ವಕರ್ಮ ಯೋಜನೆಗಳು ಬೇರೆ ಬೇರೆ ಅಲ್ಲ. ಮಲೇರಿಯಾ ಮತ್ತು ಡೆಂಗ್ಯೂ ರೀತಿಯಲ್ಲಿ ಸಂತಾನ ಧರ್ಮವನ್ನು ತೊಡೆದುಹಾಕಬೇಕು ಎಂದು ಉದಯನಿಧಿ ಬಹಳ ಸೌಮ್ಯವಾಗಿ ಹೇಳಿದ್ದಾರೆಂದು ತಿಳಿಸಿದರು.
ಡೆಂಗೆ ಮತ್ತು ಮಲೇರಿಯಾ ಈ ರೋಗಗಳು ಸಾಮಾಜಿಕ ಕಳಂಕವನ್ನು ಹೊಂದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕುಷ್ಠರೋಗವನ್ನು ಅಸಹ್ಯಕರವಾಗಿ ನೋಡಲಾಯಿತು ಮತ್ತು ಎಚ್‌ಐವಿ ಕೂಡ. ಆದ್ದರಿಂದ, ನಾವು ಇದನ್ನು (ಸನಾತನ ಧರ್ಮ) ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ದುರವಸ್ಥೆಗಳಿಂದ ಕೂಡಿದ ಕಾಯಿಲೆಗಳಾಗಿ ನೋಡಬೇಕಾಗಿದೆ ಎಂದು ಡಿಎಂಕೆ ಸಂಸದ ಎ ರಾಜಾ ಅವರು ಹೇಳಿದರು.
ಡಿಎಂಕೆ ಸಂಸದ ಎ ರಾಜಾ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ಅವರು, ಸನಾತನ ಧರ್ಮವನ್ನು ಅನುಸರಿಸುವ 80% ಭಾರತದ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡು ನಡೆಸುತ್ತಿರು ದ್ವೇಷ ಭಾಷಣವಾಗಿದೆ ಎಂದು ತಿವಿದಿದ್ದಾರೆ.
ಈ ಸುದ್ದಿಯನ್ನೂ ಓದಿ; Udhayanidhi Stalin: ಸನಾತನ ಧರ್ಮ; ಉದಯನಿಧಿ ಕೆನ್ನೆಗೆ ಬಾರಿಸಿದರೆ 10 ಲಕ್ಷ ರೂ. ಘೋಷಣೆ
ಉದಯನಿಧಿ ಸ್ಟಾಲಿನ್ ಬಳಿಕ ಈಗ ಡಿಎಂಕೆ ಸಂಸದ ಎ ರಾಜಾ ಅವರು ಸನಾತನ ಧರ್ಮವನ್ನು ಅವಮಾನಗೊಳಿಸಿದ್ದಾರೆ. ಇದು ಸನಾತನ ಧರ್ಮವನ್ನು ಅನುಸರಿಸುವ 80% ಭಾರತದ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡು ಮಾಡಿದ ದ್ವೇಷದ ಭಾಷಣವಲ್ಲದೆ ಬೇರೇನೂ ಅಲ್ಲ. ಇದುವೇ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ಸ್ವರೂಪವಾಗಿದೆ. ಚುನಾವಣೆಗಳನ್ನು ಗೆಲ್ಲಲು ಹಿಂದೂಗಳಿಗೆ ಅವಮಾನ ಮಾಡುವುದೇ ದಾರಿ ಎಂದಿಕೊಂಡಿದ್ದಾರೆ. ಮುಂಬೈ ಸಭೆಯಲ್ಲಿ ಈ ಕುರಿತೇ ನಿರ್ಧರಿಸಲಾಯಿೇ ಎಂದು ಅವರು ಪ್ರಶ್ನಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.