Site icon Vistara News

ಗೋಮೂತ್ರ ಹೇಳಿಕೆ ವಾಪಸ್ ಪಡೆದ ಡಿಎಂಕೆ ಸಂಸದ ಎಷ್ಟೆಲ್ಲ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ನೋಡಿ…!

DMK MP Senthil Kumar withdraws his remark about BJP win election

ನವದೆಹಲಿ: ತಮಿಳುನಾಡಿನ ಧರ್ಮಪುರಿ ಲೋಕಸಭೆ ಕ್ಷೇತ್ರದ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ (DMK MP Senthil Kumar) ಅವರು, ”ಭಾರತೀಯ ಜನತಾ ಪಾರ್ಟಿ (BJP Party) ಗೋ ಮೂತ್ರ ರಾಜ್ಯಗಳಲ್ಲಿ (Gau Mutra States) ಮಾತ್ರ ಗೆಲ್ಲುತ್ತದೆ ಎಂದು ಹೇಳಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (Tamil Nadu CM MK Stalin) ಅವರು ಈ ಸಂಬಂಧ ಎಚ್ಚರಿಕೆ ನೀಡಿದ್ದರು. ಅಲ್ಲದೇ, ಈ ಹೇಳಿಕೆ ತೀವ್ರ ವಿವಾದ ಸ್ವರೂಪಡೆದುಕೊಂಡ ಹಿನ್ನೆಲೆಯಲ್ಲಿ, ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಛತ್ತೀಸ್‌ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರು ಈ ವಿವಾದಿತ ಹೇಳಿಕೆಯನ್ನು ನೀಡಿದ್ದರು. ಬಿಜೆಪಿ ಸೇರಿದಂತೆ ವಿವಿಧ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರೀಗ ಹೇಳಿಕೆಯನ್ನು ವಾಪಸ್ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ(election Results 2023). ಆದರೆ, ಸೆಂಥಿಲ್ ಕುಮಾರ್ ಇದೇ ಮೊದಲ ಬಾರಿ ಈ ರೀತಿಯ ಹೇಳಿಕೆ ನೀಡಿಲ್ಲ. ಈ ಹಿಂದೆಯೂ ಅವರು ಈ ಪದಗಳನ್ನು ಬಳಸಿದ್ದಾರೆ.

ನಿನ್ನೆ ನಾನು ಅಚಾತುರ್ಯದಿಂದ ಆಡಿದ ಮಾತುಗಳಿಂದ ಸದನದ ಸದಸ್ಯರು ಮತ್ತು ಜನರ ಭಾವನೆಗಳಿಗೆ ಧಕ್ಕೆಯಾಗಿದ್ದರೆ, ಆ ಮಾತುಗಳನ್ನು ನಾನು ವಾಪಸ್ ಪಡೆಯುತ್ತೇನೆ. ಕಡತದಿಂದ ನಾನು ಬಳಸಿದ ಪದಗಳನ್ನು ತೆಗೆದು ಹಾಕಲು ವಿನಂತಿಸುತ್ತೇನೆ. ನನ್ನ ಹೇಳಿಕೆಗೆ ವಿಷಾದಿಸುತ್ತೇನೆ ಎಂದು ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಅವರು ಹೇಳಿದ್ದಾರೆ. ಇದಕ್ಕೂ ಮೊದಲ ಎಕ್ಸ್ ವೇದಿಕೆಯಲ್ಲಿ ಪೋಸ್ಟ್, ಕ್ಷಮೆ ಕೋರಿದ್ದರು.

ಇತ್ತೀಚಿನ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸುತ್ತಾ, ನಾನು ಒಂದು ಪದವನ್ನು ಅನುಚಿತ ರೀತಿಯಲ್ಲಿ ಬಳಸಿದ್ದೇನೆ. ಯಾವುದೇ ಉದ್ದೇಶದಿಂದ ಆ ಪದವನ್ನು ಬಳಸಿರಲಿಲ್ಲ. ತಪ್ಪು ಅರ್ಥದ ಸಂದೇಶ ರವಾನೆಯಾಗಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಸೆಂಥಿಲ್ ಕುಮಾರ್ ಅವರು ಟ್ವೀಟ್ ಮಾಡಿದ್ದರು.

ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಹೇಳಿದ್ದೇನು?

ಭಾರತೀಯ ಜನತಾ ಪಾರ್ಟಿಯು (Bharatiya Janata Party) ಕೇವಲ ಗೋ ಮೂತ್ರ ರಾಜ್ಯಗಳಲ್ಲಿ (gau mutra states) ಮಾತ್ರ ಗೆಲ್ಲುತ್ತದೆ ಎಂದು ಹೇಳುವ ಮೂಲಕ ತಮಿಳುನಾಡಿನ ಧರ್ಮಪುರಿ ಕ್ಷೇತ್ರದ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ (DMK MP Senthil Kumar) ಅವರು ವಿವಾದಕ್ಕೆ ಕಾರಣವಾಗಿದ್ದಾರೆ. ಹಿಂದಿ ಹಾರ್ಟ್‌ಲ್ಯಾಂಡ್ ಎಂದು ಹೇಳಲಾಗುವ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಸೆಂಥಿಲ್ ಕುಮಾರ್ ಈ ಕಮೆಂಟ್ ಮಾಡಿದ್ದಾರೆ(election Results 2023).

ಈ ಬಿಜೆಪಿಯ ಶಕ್ತಿಯು ಮುಖ್ಯವಾಗಿ ಹಿಂದಿಯ ಹೃದಯಭಾಗದ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಈ ದೇಶದ ಜನರು ಭಾವಿಸುತ್ತಿದ್ದಾರೆ. ನಾವು ಸಾಮಾನ್ಯವಾಗಿ ಈ ರಾಜ್ಯಗಳನ್ನು ‘ಗೋಮೂತ್ರ ರಾಜ್ಯಗಳು’ ಎಂದು ಕರೆಯುತ್ತೇವೆ ಎಂದು ಲೋಕಸಭೆಯ ಚಳಿಗಾಲದ ಅಧಿವೇಶನದ ಎರಡನೇ ದಿನದಂದು ಸೆಂಥಿಲ್ ಕುಮಾರ್ ಹೇಳಿದರು.

ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಅವರ ಈ ಹೇಳಿಕೆಗೆ ಭಾರತೀಯ ಜನತಾ ಪಾರ್ಟಿಯು ವಿರೋಧ ವ್ಯಕ್ತಪಡಿಸಿದೆ. ಇದೊಂದು ಅಸೂಕ್ಷ್ಮ ಹೇಳಿಕೆಯಾಗಿದೆ ಎಂದುಹೇಳಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಸೆಂಥಿಲ್ ಕುಮಾರ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಡಿಎಂಕೆಯ ದುರಾಡಳಿತದಿಂದ ಚೆನ್ನೈ ಮುಳುಗುತ್ತಿದೆ ಮತ್ತು ಸಂಸತ್ತಿನಲ್ಲಿ ಆ ಪಕ್ಷದ ಸಂಸದ ಭಾಷಣವೂ ಹಾಗೆಯೇ ಇದೆ. ನಮ್ಮ ಉತ್ತರ ಭಾರತದ ಸ್ನೇಹಿತರನ್ನು ಪಾನಿ ಪುರಿ ಮಾರಾಟಗಾರರು, ಶೌಚಾಲಯ ನಿರ್ಮಿಸುವವರು, ಇತ್ಯಾದಿಗಳನ್ನು ಕರೆದ ನಂತರ ಇಂಡಿಯಾ ಮೈತ್ರಿಕೂಟದ ಡಿಎಂಕೆ ಸಂಸದರು ಗೋಮೂತ್ರ ಎಂದು ಮೊದಲಿಸುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿಯು ಈ ಸಂವೇದನಾರಹಿತ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ ತಮಿಳುನಾಡು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಕೆ ಅಣ್ಣಾಮಲೈ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಹಿಂದಿ ಭಾಷಿಕ ರಾಜ್ಯಗಳನ್ನು ಗೋಮೂತ್ರ ರಾಜ್ಯಗಳೆಂದು ಸೆಂಥಿಲ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಹೇಳಿದ್ದಲ್ಲ. ಈ ಹಿಂದೆಯೂ ಅವರು ಗೋಮೂತ್ರ ರಾಜ್ಯಗಳು ಎಂದು ಹೇಳಿದ್ದರು. 2022ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯ ಕುರಿತು ಮಾತನಾಡುವಾಗಲೂ ಸೆಂಥಿಲ್ ಕುಮಾರ್ ಅವರು, ಗೋಮೂತ್ರ ರಾಜ್ಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕು ಎಂದು ಹೇಳಿದ್ದರು.

ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿ ಅಗತ್ಯ ಎನ್ನುವುದಾದರೆ ಅವರು ತಮಿಳುನಾಡಿನ ಮಾದರಿಯನ್ನು ದೇಶಾದ್ಯಂತ ಜಾರಿ ಮಾಡಲಿ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಮ್ಮ ಮೇಲೆ ಏಕೆ ಹೇರಲಾಗುತ್ತಿದೆ. ನಾವು ಅದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಅವರಿಗೆ ಬೇಕಿದ್ದರೆ ತಮ್ಮ ಗೋಮೂತ್ರ ರಾಜ್ಯಗಳಲ್ಲಿ ಜಾರಿ ಮಾಡಲಿದೆ ಎಂದು ಈ ಹಿಂದೆ ಸೆಂಥಿಲ್ ಕುಮಾರ್ ಅವರು ಹೇಳಿದ್ದರು.

ಸೆಂಥಿಲ್ ಕುಮಾರ್ ಅವರ ವಿವಾದಿತ ಹೇಳಿಕೆಗಳು

-ಉತ್ತರ ಭಾರತದಲ್ಲಿ ಶಿವ ಮತ್ತು ಪಾರ್ವತಿಯ ಕುಟುಂಬವು ಗಣೇಶನೊಂದಿಗೆ ಮುಕ್ತಾಯವಾಗುತ್ತದೆ. ಅದೇ ನೀವು ದಕ್ಷಿಣಕ್ಕೆ ಬಂದರೆ ಶಿವ ಮತ್ತು ಪಾರ್ವತಿಗೆ ಮರುಗನ್ ಕೂಡ ಇದ್ದಾರೆಂದು ಗೊತ್ತಾಗುತ್ತದೆ. ಅಲ್ಲೇನಾದರೂ ಫ್ಯಾಮಿಲಿ ಪ್ಲ್ಯಾನಿಂಗ್ ಜಾರಿಯಾಗಿತ್ತಾ ಎಂಬ ಬಗ್ಗೆ ನಮಗೆ ಗೊತ್ತಿಲ್ಲ.

ಈ ಸುದ್ದಿಯನ್ನೂ ಓದಿ: Udhayanidhi Stalin: ಸನಾತನ ಧರ್ಮ; ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್‌, ಎದುರಾಯ್ತು ಸಂಕಷ್ಟ

Exit mobile version