ಚೆನ್ನೈ: ಒಂದು ರಾಷ್ಟ್ರ ಒಂದು ಚುನಾವಣೆಗೆ (One Nation, One Election) ವಿರೋಧ ವ್ಯಕ್ತಪಡಿಸಿರುವ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ, ಚನಾವಣೆಗಳು ಪ್ರಜಾಪ್ರಭುತ್ವದ ಶ್ರೇಷ್ಠತೆಯ ಪ್ರತೀಕವಾಗಿದ್ದು, ಅವು ವೆಚ್ಚಕ್ಕೆ ಕಾರಣವಾಗುತ್ತಿವೆ ಎಂಬಂತೆ ನೋಡಬಾರದು ಎಂದು ಬಿಜೆಪಿ ಮತ್ತು ಇತರ ಪಕ್ಷಗಳಿಗೆ ತಿವಿದಿದೆ. ಒಂದು ರಾಷ್ಟ್ರ ಒಂದು ಚುನಾವಣೆಗೆ ತಮಿಳುನಾಡಿನ ಎಐಎಡಿಎಂಕೆ ಮತ್ತು ಬಿಜೆಪಿ ಸೇರಿದಂತೆ ಕೆಲವು ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.
ಡಿಎಂಕೆಯ ಮುಖವಾಣಿ ಮುರಸೋಳಿಯಲ್ಲಿ ಈ ಕುರಿತು ಸಂಪಾದಕೀಯ ಪ್ರಕಟಿಸಲಾಗಿದೆ. ಒಂದು ರಾಷ್ಟ್ರ ಮತ್ತು ಒಂದು ಚುನಾವಣೆಗೆ ಎಐಡಿಎಂಕೆ ಬೆಂಬಲ ನೀಡುತ್ತಿದ್ದು, ಅದರ ಈ ನಡೆ ವಿಧ್ವಂಸಕದಲ್ಲೇ ಕೊನೆಯಾಗಲಿದೆ ಎಂದು ಕಟುವಾಗಿ ಟೀಕಿಸಿದೆ. ಜತೆಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಲೆಕ್ಷನ್ ನಡೆಸಲು ಹೆಣಗಾಡುತ್ತಿರುವ ಪಕ್ಷವು ಒಂದು ರಾಷ್ಟ್ರ, ಒಂದು ಚುನಾವಣೆಗೆ ಬೆಂಬಲ ನೀಡುತ್ತಿದೆ ಎಂದು ವ್ಯಂಗ್ಯವಾಡಿದೆ.
ಬಿಜೆಪಿಗೆ ಒಂದು ಎಂಬ ಒಂದೇ ಒಂದು ಪದ ಮಾತ್ರ ಗೊತ್ತಿದೆ. ಒಂದು ಎಂಬ ಪದವನ್ನು ಸೇರಿಸುವುದರ ಮೂಲಕ ದೇಶ ಒಂದುಗೂಡುತ್ತದೆ ಎಂದು ಬಿಜೆಪಿ ಭಾವಿಸಿದೆ. ಒಂದು ಧರ್ಮ, ಒಂದು ಭಾಷೆ, ಒಂದು ಆಹಾರ, ಒಂದು ಸಂಸ್ಕೃತಿ ಒಂದು ತೆರಿಗೆ, ಒಂದು ಎಕ್ಸಾಮ್ ಮತ್ತು ಒಂದು ಫರ್ಟಿಲೈಸರ್ ಎಂದು ಹೇಳುತ್ತಲೇ ಇರಲಿ ಎಂದು ಸಂಪಾದಕೀಯದಲ್ಲಿ ವ್ಯಂಗ್ಯ ಮಾಡಲಾಗಿದೆ.
ಇದನ್ನೂ ಓದಿ | Bell & Ross Watch | ನೀವು ಧರಿಸುವ ದುಬಾರಿ ವಾಚ್ ಖರೀದಿಯ ರಶೀದಿ ತೋರಿಸಿ: ಬಿಜೆಪಿ ನಾಯಕ ಅಣ್ಣಾಮಲೈಗೆ ಡಿಎಂಕೆ ಸವಾಲು