Site icon Vistara News

Shivaji Krishnamoorthy | ತಮಿಳುನಾಡು ರಾಜ್ಯಪಾಲರ ಹತ್ಯೆ ಕುರಿತು ಹೇಳಿಕೆ, ಡಿಎಂಕೆ‌ ನಾಯಕ ಶಿವಾಜಿ ತಾತ್ಕಾಲಿಕ ಅಮಾನತು

Shivaji Krishnamoorthy

ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್‌.ಎನ್‌.ರವಿ ಅವರ ಹತ್ಯೆಗೆ ಉಗ್ರರನ್ನು ಕಳುಹಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ (Shivaji Krishnamoorthy) ಅವರನ್ನು ಪಕ್ಷದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. “ಪಕ್ಷದ ನಿಯಮಗಳನ್ನು ಮೀರಿದ್ದಕ್ಕಾಗಿ ಶಿವಾಜಿ ಕೃಷ್ಣಮೂರ್ತಿ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ” ಎಂದು ಡಿಎಂಕೆ ಮಾಹಿತಿ ನೀಡಿದೆ.

ರಾಜ್ಯಪಾಲರ ಹತ್ಯೆ ಕುರಿತು ಶಿವಾಜಿ ಕೃಷ್ಣಮೂರ್ತಿ ನೀಡಿದ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು, ಪೊಲೀಸರಿಗೆ ದೂರು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ಪಕ್ಷಕ್ಕೆ ಹಾನಿಯಾಗುವುದನ್ನು ಅರಿತ ಡಿಎಂಕೆ, ಶಿವಾಜಿ ಕೃಷ್ಣಮೂರ್ತಿ ಅವರನ್ನು ಅಮಾನತುಗೊಳಿಸಿದೆ.

“ತಮಿಳುನಾಡು ಸರ್ಕಾರ ನೀಡಿದ ಭಾಷಣದ ಪ್ರತಿಯನ್ನು ನೀವು (ಆರ್‌.ಎನ್‌.ರವಿ) ಓದಲು ನಿರಾಕರಿಸಿದರೆ, ಕಾಶ್ಮೀರಕ್ಕೆ ಹೋಗಿ. ನಿಮ್ಮನ್ನು ಹತ್ಯೆ ಮಾಡಲು ನಾವು ಉಗ್ರರನ್ನು ಕಳುಹಿಸುತ್ತೇವೆ” ಎಂದು ಕಾರ್ಯಕ್ರಮವೊಂದರಲ್ಲಿ ಶಿವಾಜಿ ಕೃಷ್ಣಮೂರ್ತಿ ಹೇಳಿದ್ದರು.

ಇದನ್ನೂ ಓದಿ | ರಾಜ್ಯಪಾಲರನ್ನು ಶೂಟ್ ಮಾಡಿ ಕೊಲ್ಲಲು ಉಗ್ರನನ್ನು ಕಳಿಸುತ್ತೇವೆ ಎಂದ ತಮಿಳುನಾಡು ಡಿಎಂಕೆ ನಾಯಕ

Exit mobile version