Site icon Vistara News

Maha politics | ನಮ್ಮನ್ನು ಹೆದರಿಸಲು ಟ್ರೈ ಮಾಡಬೇಡಿ ಎಂದು ಶಿವಸೇನಾ ನಾಯಕರಿಗೆ ಶಿಂಧೆ ತಿರುಗೇಟು

ಏಕನಾಥ ಶಿಂಧೆ

ಮುಂಬಯಿ: ಪಕ್ಷದಿಂದ ಬಂಡಾಯವೆದ್ದಿರುವ ೧೨ ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಶಿವಸೇನಾದ ಬೇಡಿಕೆಗೆ, ಬಂಡಾಯ ಬಣದ ನಾಯಕ ಏಕನಾಥ್‌ ಶಿಂಧೆ ತಿರುಗೇಟು ನೀಡಿದ್ದಾರೆ.

” ನೀವು ಯಾರನ್ನು ಹೆದರಿಸಲು ಯತ್ನಿಸುತ್ತಿದ್ದೀರಿ? ನಮಗೂ ಕಾನೂನು ಗೊತ್ತಿದೆ. ನಾವು ಬಾಳಾ ಸೇಹೇಬ್‌ ಠಾಕ್ರೆಯವರ ನಿಷ್ಠಾವಂತ ಅನುಯಾಯಿಗಳು. ಹೀಗಾಗಿ ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲʼʼ ಎಂದು ಏಕನಾಥ್‌ ಶಿಂಧೆ ಟ್ವೀಟ್‌ ಮಾಡಿದ್ದಾರೆ.

ಶಿಂಧೆ ಸೇರಿದಂತೆ ೧೨ ಮಂದಿ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಶಿವಸೇನಾ ಗುರುವಾರ ವಿಧಾನಸಭೆ ಡೆಪ್ಯುಟಿ ಸ್ಪೀಕರ್‌ಗೆ ಮನವಿ ಸಲ್ಲಿಸಿತ್ತು.

ಮತ್ತೆ ಮೂವರು ಶಿಂಧೆ ಬಣಕ್ಕೆ ಸೇರ್ಪಡೆ

ಶಿವಸೇನಾದ ೩೭ ಶಾಸಕರು ಏಕನಾಥ್‌ ಶಿಂಧೆ ಅವರನ್ನು ಬೆಂಬಲಿಸಿದ್ದಾರೆ. ಜತೆಗೆ ಇಂದು ಮತ್ತೆ ಮೂವರು ಶಾಸಕರು ಶಿಂಧೆ ಬಣವನ್ನು ಸೇರಿದ್ದಾರೆ. ಒಟ್ಟು ೪೨ ಶಾಸಕರು ತಮ್ಮ ಜತೆ ಇದ್ದಾರೆ ಎಂದು ಶಿಂಧೆ ಈಗಾಗಲೇ ಹೇಳಿದ್ದಾರೆ. ಈ ನಡುವೆ ಸದನದಲ್ಲಿ ಶೀಘ್ರವೇ ವಿಶ್ವಾಸ ಮತ ಪರೀಕ್ಷೆ ನಡೆಸುವಂತೆ ಕಾಂಗ್ರೆಸ್‌ ಒತ್ತಾಯಿಸಿದೆ.

Exit mobile version