ಜೀವ ಉಳಿಸುವ ವೈದ್ಯರನ್ನು ದೇವರು ಎಂದೇ ಭಾವಿಸಲಾಗುತ್ತದೆ. ಸಾವಿನ ಅಂಚಿಗೆ ಹೋದವರನ್ನೂ ಮತ್ತೆ ಬದುಕಿಸಿಕೊಟ್ಟ ವೈದ್ಯರು ನಮ್ಮ ನಿಮ್ಮ ಮಧ್ಯೆ ಅನೇಕರು ಇದ್ದಾರೆ. ಹೀಗಾಗಿ ವೈದ್ಯರ ಕಡೆಗೆ ನಮ್ಮೆಲ್ಲರಿಗೂ ಒಂದು ಗೌರವಯುತ ಭಾವನೆ ಇದ್ದೇ ಇರುತ್ತದೆ. ಆದರೆ ಉತ್ತರ ಪ್ರದೇಶದ (Uttar Pradesh News) ಸೈಫೈ ವೈದ್ಯಕೀಯ ಕಾಲೇಜು ವಿಶ್ವವಿದ್ಯಾಲಯದ ವೈದ್ಯನೊಬ್ಬನ ವಿಡಿಯೊ ವೈರಲ್ ಆಗಿದೆ (Viral Video). ಅದನ್ನು ನೋಡಿದರೆ, ಇವನೇನು ವೈದ್ಯನೋ, ರಾಕ್ಷಸನೋ ಎಂದು ಎನ್ನಿಸುವುದು ಸುಳ್ಳಲ್ಲ.
ಆಸ್ಪತ್ರೆಯ ದೊಡ್ಡದಾದ ವಾರ್ಡ್ನಲ್ಲಿ ಹಲವು ರೋಗಿಗಳು ಇದ್ದಾರೆ. ಅವನೊಬ್ಬ ಯುವ ವೈದ್ಯ. ಬೆಡ್ ಮೇಲೆ ಕುಳಿತಿದ್ದ ರೋಗಿಯೊಬ್ಬನ ಬಳಿಗೆ ಹೋಗಿ ಬಾಯಿಗೆ ಬಂದಂತೆ ಬೈಯ್ಯುತ್ತಾನೆ. ಬಳಿಕ ಒಂದೇಟು ಹೊಡೆಯುತ್ತಾನೆ. ಆಗ ರೋಗಿ ತಲೆ ಬಾಗಿಸಿ ಕುಳಿತುಕೊಳ್ಳುತ್ತಾನೆ. ಹೀಗೆ ಕೂಗೂತ್ತಲೇ ಅಲ್ಲಿಂದ ಹೋಗುವ ವೈದ್ಯನಿಗೆ ಆಸ್ಪತ್ರೆ ಸಿಬ್ಬಂದಿ ಕೆಲವರು ಅವನ ತಪ್ಪು ಅರ್ಥ ಮಾಡಿಸಲು ಪ್ರಯತ್ನ ಮಾಡುತ್ತಾರೆ. ಆದರೆ ಅದ್ಯಾವುದನ್ನೂ ಅವನು ಕಿವಿಮೇಲೆ ಹಾಕಿಕೊಳ್ಳುವುದಿಲ್ಲ. ತಾನು ಮಾಡಿದ್ದು ಸರಿ ಎಂದೇ ವಾದಿಸುತ್ತಾನೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಇವನ್ಯಾವ ಸೀಮೆ ವೈದ್ಯ ಎಂದಿದ್ದಾರೆ. ಹಾಗೇ, ಇವನ ವರ್ತನೆ ರೌಡಿಗಳ ವರ್ತನೆಯಂತಿದೆ ಎಂದೂ ಹಲವರು ಆರೋಪಿಸಿದ್ದಾರೆ. ವಿಡಿಯೊ ನೋಡುತ್ತಿದ್ದಂತೆ ಆಸ್ಪತ್ರೆ ಡೀನ್ ತನಿಖೆಗೆ ಆದೇಶಿಸಿದ್ದಾರೆ. ಒಂದು ಕಮಿಟಿಯನ್ನೂ ರಚಿಸಲಾಗಿದೆ. ಕಮಿಟಿ ವರದಿ ಬರುತ್ತಿದ್ದಂತೆ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
A resident doctor slapped a patient admitted to the ward of Saifai Medical College University of Etawah district. #viralvideo pic.twitter.com/Spji5vckW4
— Zaitra (@Zaitra6) July 15, 2023