ರತ್ನಲಮ್, ಮಧ್ಯ ಪ್ರದೇಶ: ಭಾರತವನ್ನು (India) ಕೊಂಡಾಡುವ ಎಲ್ಲರನ್ನೂ ಸಹೋದರರಂತೆ ಕಾಣುತ್ತೇವೆ. ಅದೇ ವೇಳೆ, ಭಾರತವನ್ನು ಟೀಕಿಸುವ ಯಾರನ್ನೇ ಆಗಲಿ ಕೊಲ್ಲದೇ (Kill) ಬಿಡುವುದಿಲ್ಲ ಎಂದು ಬಿಜೆಪಿಯ (BJP) ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ (Kailash Vijayvargiya) ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಬಾಂಗ್ರೋಟ್‌ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ದ್ವೇಷ ಮೂಡಿಸುವ ಹೇಳಿಕೆಯನ್ನು ನೀಡಿದ್ದಾರೆ.
ನಾವು ಯಾರ ವಿರುದ್ಧವೂ ಇಲ್ಲ. ಯಾರು ಭಾರತ್ ಮಾತಾ ಕೀ ಜಯ ಎನ್ನುತ್ತಾರೋ ಅವರು ನಮ್ಮ ಸಹೋದರರು ಅವರಿಗಾಗಿ ನಮ್ಮ ಪ್ರಾಣಬೇಕಾದರೂ ಕೊಡುತ್ತೇವೆ. ಆದರೆ, ಯಾರು ಭಾರತ ಮಾತಾ ವಿರುದ್ಧ ಮಾತನಾಡುತ್ತಾರೋ ಅವರ ಜೀವವನ್ನು ತೆಗೆಯಲು ನಾವು ಹಿಂಜರಿಯುವುದಿಲ್ಲ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕೈಲಾಶ್ ವಿಜಯವರ್ಗೀಯ ಹೇಳಿದೆ.
ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ್ ಅವರು, ಭಗವಾನ್ ರಾಮ ಕಾಲ್ಪನಿಕ ವ್ಯಕ್ತಿ ಎಂದು ವಾದಿಸುವವರೆಲ್ಲರೂ ತಮ್ಮ ಪಾಪಗಳನ್ನು ತೊಡೆದುಹಾಕಲು ಜನವರಿಯಲ್ಲಿ ಅಯೋಧ್ಯೆಗೆ ಹೋಗಬೇಕು ಎಂದು ಹೇಳಿದರು. ಕಾಂಗ್ರೆಸ್ ಪಕ್ಷವೂ ಮೇಲಿಂದ ಮೇಲೆ, ಯಾವಾಗ ರಾಮ ಮಂದಿರ ನಿರ್ಮಾಣ ಮಾಡುತ್ತೀರಿ ಎಂದು ಪ್ರಶ್ನಿಸುತ್ತಿತ್ತು.
ಇದೇ ವೇಳೆ ಅವರು ನರೇಂದ್ರ ಮೋದಿ ಸರ್ಕಾರವನ್ನು ಹೊಗಳಿದರು. ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಈ ಪ್ರದೇಶದಲ್ಲಿ ಪರಿಸ್ಥಿತಿ ಯಾವ ರೀತಿಯಾಗಿತ್ತು ಎಂಬುದು ಎಲ್ಲರಿಗೊ ಗೊತ್ತಿರುವ ಸಂಗತಿಯಾಗಿದೆ. ಕಾಶ್ಮೀರ ಕಣಿವೆಯ ಪ್ರತಿ ಮನೆಯ ಮೇಲೆ ತಿರಂಗಾ ಹಾರಾಡುತ್ತಿದೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: BBC Documentary: ಬಿಬಿಸಿ ಹಿಂದು ವಿರೋಧಿ, ಮೋದಿ ವಿರೋಧಿ ಎಂದು ಆಪಾದಿಸಿ ಬ್ರಿಟನ್‌ನಾದ್ಯಂತ ಭಾರತೀಯರ ಪ್ರತಿಭಟನೆ
ಬಿಜೆಪಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕೈಲಾಶ್ ವಿಜಯವರ್ಗೀಯ್ ಅವರು ಮಧ್ಯ ಪ್ರದೇಶದವರಾಗಿದ್ದು, ಆಗಾಗ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ವಿಶೇಷವಾಗಿ ಮುಸ್ಲಿಮ್ ಸಮುದಾಯದ ವಿರುದ್ಧ ಅವರು ಕೆಂಡ ಕಾರುತ್ತಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.