Site icon Vistara News

Congress Party: ತನಿಖಾ ಸಂಸ್ಥೆಗಳ ದಾಳಿ ಬಳಿಕ ಕಂಪನಿಗಳಿಂದ ಬಿಜೆಪಿಗೆ ದೇಣಿಗೆ! ತನಿಖೆಗೆ ಕಾಂಗ್ರೆಸ್ ಒತ್ತಾಯ

Donations from companies to BJP after raids, congress party demands probe

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ (Congress Leader KC Venugopal) ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರಿಗೆ ಪತ್ರ ಬರೆದು, ಭಾರತೀಯ ಜನತಾ ಪಕ್ಷ (BJP Party) ಮತ್ತು ವಿವಿಧ ಕೇಂದ್ರ ತನಿಖಾ ಸಂಸ್ಥೆಗಳ ದಾಳಿಗೆ ಒಳಗಾದ ಹಲವಾರು ಕಾರ್ಪೊರೇಟ್ ದಾನಿಗಳ ನಡುವಿನ ಕೊಡು-ಕೊಳ್ಳುವಿಕೆಯ (quid-pro-quo) ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಕೇಂದ್ರ ತನಿಖಾ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ದಾಳಿ ನಡೆಸಿದ ಬಳಿಕ, ಹಲವು ಕಾರ್ಪೊರೇಟ್ ‌ಕಂಪನಿಗಳು ಬಿಜೆಪಿಗೆ ನೀಡಿದ ದಾನದಲ್ಲಿ ಒಂದೇ ಮಾದರಿಯು ಇರುವುದರ ಬಗ್ಗೆ ಆನ್‌ಲೈನ್ ಪ್ರಕಟಣೆಗಳಾದ ನ್ಯೂಸ್‌ಲಾಂಡ್ರಿ ಮತ್ತು ದಿ ನ್ಯೂಸ್‌ ಮಿನಿಟ್‌ಗಳು ತನಿಖಾ ವರಿದಯನ್ನು ಪ್ರಕಟಿಸಿದ ಬೆನ್ನಲ್ಲೇ ಕಾಂಗ್ರೆಸ್ ತನಿಖೆಗೆ ಒತ್ತಾಯಿಸಿ ಪತ್ರ ಬರೆದಿದೆ.

2018-19 ಮತ್ತು 2022-23 ಆರ್ಥಿಕ ವರ್ಷದಲ್ಲಿ ಸುಮಾರು 30 ಕಂಪನಿಗಳು ಭಾರತೀಯ ಜನತಾ ಪಾರ್ಟಿಗೆ 335 ಕೋಟಿ ರೂಪಾಯಿ ದಾನ ಮಾಡಿವೆ. ಈ ಪೈಕಿ 23 ಕಂಪನಿಗಳು ತನಿಖಾ ಸಂಸ್ಥೆಗಳು ದಾಳಿ ಮಾಡುವುದಕ್ಕಿಂತ ಮುಂಚೆ ಎಂದಿಗೂ ಬಿಜೆಪಿಗೆ ಹಣವನ್ನು ದಾನ ಮಾಡಿರಲಿಲ್ಲ. ತನಿಖಾ ಸಂಸ್ಥೆಗಳ ಕ್ರಮದ ಬಳಿಕ ಅನೇಕ ಕಂಪನಿಗಳು ತಮ್ಮ ದಾನದ ಮೊತ್ತವನ್ನು ಹೆಚ್ಚಿಸಿವೆ ಎಂದು ಆನ್‌ಲೈನ್ ವೇದಿಕೆಗಳಲ್ಲಿ ಪ್ರಕಟಿಸಲಾದ ತನಿಖಾ ವರದಿಯಲ್ಲಿ ತಿಳಿಸಲಾಗಿದೆ.

ಮೇಲಿನ ನಿದರ್ಶನಗಳು ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರುವ ಮೂಲಕ ಆಡಳಿತ ಪಕ್ಷಕ್ಕೆ ದೇಣಿಗೆ ರೂಪದಲ್ಲಿ ಕಾನೂನು ಸುಲಿಗೆಯ ಸ್ಪಷ್ಟ ಪ್ರಕರಣಗಳಾಗಿವೆ. ನಿಸ್ಸಂಶಯವಾಗಿ, ಸುಲಿಗೆ ಮಾಡುವಿಕೆಯ ಇಂತಹ ವಿಧಾನಗಳು ನಡೆದಿರುವ ಪ್ರಕರಣಗಳು ಮಾತ್ರವಲ್ಲ. ಇದು ಕೇವಲ ಈಗ ಗೊತ್ತಾಗಿರುವ ಸ್ವಲ್ಪ ಮಾಹಿತಿ ಮಾತ್ರ. ತನಿಖೆ ನಡೆದರೆ ಇನ್ನಷ್ಟು ಮಾಹಿತಿಗಳ ಹೊರಬಹುದು ಎಂದು ಕಾಂಗ್ರೆಸ್ ನಾಯಕ ವೇಣುಗೋಪಾಲ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಈ ಮೇಲಿನ ನಿದರ್ಶನಗಳು ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರುವ ಮೂಲಕ ಆಡಳಿತ ಪಕ್ಷಕ್ಕೆ ದೇಣಿಗೆ ರೂಪದಲ್ಲಿ ಕಾನೂನು ಸುಲಿಗೆಯ ಸ್ಪಷ್ಟ ಪ್ರಕರಣಗಳಂತೆ ತೋರುತ್ತಿದೆ. ನಿಸ್ಸಂಶಯವಾಗಿ, ಸುಲಿಗೆ ಮಾಡುವಿಕೆಯ ಇಂತಹ ವಿಧಾನಗಳು ನಡೆದಿರುವ ಪ್ರಕರಣಗಳು ಮಾತ್ರವಲ್ಲ ಎಂದು ವೇಣುಗೋಪಾಲ್ ಪತ್ರದಲ್ಲಿ ತಿಳಿಸಿದ್ದಾರೆ.

ದಾಖಲಾದ ಪ್ರಕರಣಗಳು ಅಥವಾ ತನಿಖಾ ಸಂಸ್ಥೆಗಳು ತೆಗೆದುಕೊಂಡ ಕ್ರಮಗಳು ಕಾನೂನುಬಾಹಿರವೆಂದು ನಾವು ಎಲ್ಲಿಯೂ ಆರೋಪಿಸುವುದಿಲ್ಲ, ಆದರೆ ಇದು ತನಿಖೆಯನ್ನು ಸಮರ್ಥಿಸುತ್ತದೆ, ತಮ್ಮ ವಿರುದ್ಧ ಇಡಿ ಪ್ರಕರಣಗಳನ್ನು ಹೊಂದಿರುವ ಈ “ಸಂಶಯಾಸ್ಪದ” ಸಂಸ್ಥೆಗಳು ಆಡಳಿತ ಪಕ್ಷಕ್ಕೆ ಏಕೆ ದೇಣಿಗೆ ನೀಡುತ್ತಿವೆ. ಬಿಜೆಪಿ, ಅವರ ವಿರುದ್ಧ ಇಡಿ ತನಿಖೆಯ ಹೊರತಾಗಿಯೂ, ಇಡಿ ಕ್ರಮದ ನಂತರ ಅವರು ಬಿಜೆಪಿಗೆ ದೇಣಿಗೆ ನೀಡುತ್ತಿರುವುದು ಕೇವಲ ಕಾಕತಾಳೀಯವೇ? ವೇಣುಗೋಪಾಲ್ ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: INDIA Alliance: ದಿಲ್ಲಿ ಬಳಿಕ ಗೋವಾ, ಹರ್ಯಾಣ, ಗುಜರಾತ್‌ನಲ್ಲೂ ಕಾಂಗ್ರೆಸ್-ಆಪ್ ಸೀಟು ಹಂಚಿಕೆ ಫೈನಲ್!

Exit mobile version