Site icon Vistara News

ಇನ್ನು ಮುಂದೆ ಮೋದಿಯನ್ನು ಯಾರೂ ಹೀಗೆ ಕರೆಯುವಂತಿಲ್ಲ!

PM Narendra Modi wishes new cm Nitish kumar

ನವದೆಹಲಿ: ತಮ್ಮನ್ನು ಮೋದಿಜಿ(modiji), ಆದರಣೀಯ ಮೋದಿಜಿ(aadarniya modiji), ಶ್ರೀ ಮೋದಿಜಿ(Shri Modiji) ಎಂದು ಕರೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರಿಗೆ ತಿಳಿಸಿದ್ದಾರೆ. ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಭಾರತೀಯ ಜನತಾ ಪಾರ್ಟಿಯ (Bharatiya Janata Party) ಸಂಸದೀಯ ಸಭೆಯಲ್ಲಿ ಅವರು ಈ ಮನವಿ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ತಮ್ಮ ಹೆಸರಿನ ಮುಂದೆ ಅಥವಾ ಹಿಂದೆ ವಿಶೇಷಣವನ್ನು ಸೇರಿಸಿ ಹೇಳುವುದರಿಂದ, ತಮಗೂ ಮತ್ತು ಈ ದೇಶದ ಜನರ ನಡುವೆ ಅಂತರ ಉಂಟಾಗುತ್ತದೆ ಎಂದು ಭಾವನೆ ಮೂಡುತ್ತದೆ ಎಂದು ಹೇಳಿದ್ದಾರೆ.

ನಾನು ಪಕ್ಷದ ಒಬ್ಬ ಸಣ್ಣ ಕಾರ್ಯಕರ್ತ. ಜನರು ನಾನೂ ಕೂಡ ಅವರ ಕುಟುಂಬದ ಸದಸ್ಯ ಎಂದು ಭಾವಿಸುತ್ತಾರೆ. ಹಾಗಾಗಿ, ಶ್ರೀ ಅಥವಾ ಆದರಣೀಯ ವಿಶೇಷಣಗಳನ್ನು ಸೇರಿಸಬೇಡಿ ಮತ್ತು ನಾನು ನಿಮ್ಮಲ್ಲಿ ಒಬ್ಬ ಎಂದು ಭಾವಿಸಿ ಎಂದು ಹೇಳಿದರಂದು ಸಂಸದರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯ ಪ್ರದೇಶಗಳ ಗೆಲುವನ್ನು ಮೋದಿ ಅವರು ತಂಡದ ಸ್ಫೂರ್ತಿಗೆ ಸಾಕ್ಷಿ ಎಂದು ಹೇಳಿದ್ದಾರೆ. ಇದೇ ತಂಡ ಸ್ಫೂರ್ತಿಯಿಂದ ಮುಂಬರುವ ಟಾಸ್ಕ್‌ಗಳನ್ನು ಮುಂದುವರಿಯಬೇಕು ಎಂದು ಮೋದಿ ಹೇಳಿದ್ದಾರೆ. ತನ್ನ ಆಡಳಿತದ ಮಾದರಿಯಿಂದಾಗಿ ಭಾರತೀಯ ಜನತಾ ಪಾರ್ಟಿಯು ಜನರ ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಉತ್ತಮ ಆಡಳಿತದ ನಿಲುವಿನಿಂದಾಗಿ ಬಿಜೆಪಿಯ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತಿತ್ತು. ಪಕ್ಷವು ಎರಡನೇ ಬಾರಿಗೆ ಶೇ.57 ಮತಗಳೊಂದಿಗೆ ಆಯ್ಕೆಯಾಗುತ್ತಿದೆ. ಆದರೆ, ಕಾಂಗ್ರೆಸ್‌ಗೆ ಕೇವಲ 20 ಪರ್ಸೆಂಟ್ ಮತ ಬಿದ್ದಿದೆ. ಪ್ರಾದೇಶಿಕ ಪಕ್ಷಗಳು ಶೇ.49 ಮತ ಪಡೆದುಕೊಂಡಿವೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ನಡೆಯಲಿರುವ ವಿಕಸಿತ್ ಭಾರತ್ ಯಾತ್ರೆಯಲ್ಲಿ ಎಲ್ಲ ಸಂಸದರು ಪಾಲ್ಗೊಳ್ಳಲು ಪ್ರಧಾನಿ ಮೋದಿ ಕರೆ ನೀಡಿದರು. ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಯಶಸ್ಸನ್ನು ಜನರಿಗೆ ತಲುಪಿಸಬೇಕು ಎಂದು ಹೇಳಿದರು.

ಸ್ವದೇಶಿಯವಾಗಿ ನಿರ್ಮಿತ ತೇಜಸ್‌ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಬಳಿಕ ಪ್ರಧಾನಿ ಮೋದಿ ಅವರು, ಭಾರತದ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಜಾಗತಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೆಯೇ, ಸ್ಥಳೀಯ ಉತ್ಪಾದನೆ ಮತ್ತು ಉತ್ಪನ್ನಗಳನ್ನು ಪ್ರಮೋಟ್ ಮಾಡಬೇಕು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Narendra Modi: 3 ರಾಜ್ಯಗಳ ಗೆಲುವು ತಂಡದ ಶ್ರಮಕ್ಕೆ ಸಿಕ್ಕ ಯಶಸ್ಸು ಎಂದ ಮೋದಿ

Exit mobile version