Site icon Vistara News

Halal Certification | ಹಲಾಲ್‌ ಪ್ರಮಾಣೀಕೃತ ಮಾಂಸದ ಉತ್ಪನ್ನ ರಫ್ತಿಗೆ ಅನುಮತಿ, ಕೇಂದ್ರದ ಕರಡು ಅಧಿಸೂಚನೆಯಲ್ಲೇನಿದೆ?

Halal Meat Products

ನವದೆಹಲಿ: ದೇಶದ ಎಲ್ಲ ಬಗೆಯ ಮಾಂಸದ ಉತ್ಪನ್ನಗಳ ರಫ್ತಿಗಾಗಿ ಹಲಾಲ್‌ ಪ್ರಮಾಣೀಕರಣದ (Halal Certification) ಕುರಿತು ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಹಲಾಲ್‌ ಪ್ರಮಾಣೀಕೃತ ಯಾವುದೇ ಮಾಂಸದ ಉತ್ಪನ್ನವನ್ನು ಬೇರೆ ದೇಶಗಳಿಗೆ ರಫ್ತು ಮಾಡಬಹುದು ಎಂಬುದು ಸೇರಿ ಹಲವು ಅಂಶಗಳು ಕರಡು ಅಧಿಸೂಚನೆಯಲ್ಲಿವೆ.

ಉತ್ಪಾದನೆಯಾದ ಮಾಂಸದ ಸಂಸ್ಕರಣೆ, ಪ್ಯಾಕೇಜಿಂಗ್‌ ಸೇರಿ ಹಲವು ಅಂಶಗಳ ಕುರಿತು ಭಾರತೀಯ ಗುಣಮಟ್ಟ ಸಮಿತಿಯು (Quality Council of India) ಹಲಾಲ್‌ ಪ್ರಮಾಣಪತ್ರ ನೀಡಿದ ಉತ್ಪನ್ನಗಳನ್ನು ರಫ್ತು ಮಾಡಬಹುದು ಎಂದು ವಾಣಿಜ್ಯ ಸಚಿವಾಲಯ ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹಲಾಲ್‌ ಕರಡು ಅಧಿಸೂಚನೆ ಕುರಿತು ಕೇಂದ್ರ ಸರ್ಕಾರ ಸಾರ್ವಜನಿಕವಾಗಿ ಪ್ರಕಟಿಸಿದ್ದು, ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ, ಪ್ರತಿಕ್ರಿಯೆಗಳನ್ನು ನೀಡಬಹುದಾಗಿದೆ. ಫೆಬ್ರವರಿ 17ರವರೆಗೆ ಪ್ರತಿಕ್ರಿಯೆ ನೀಡಬಹುದಾಗಿದೆ. ಇದಾದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ಜಾಗತಿಕ ಹಲಾಲ್‌ ಆಹಾರ ಮಾರುಕಟ್ಟೆ ಮೌಲ್ಯವು 2021ರಲ್ಲಿ 1.61 ಲಕ್ಷ ಕೋಟಿ ರೂ. ಇತ್ತು.

ಇದನ್ನೂ ಓದಿ | Halal Certification | ಹಲಾಲ್‌ ವಿಷಯದಿಂದ ಅಂತರ ಕಾಯ್ದುಕೊಂಡ ಸಿಎಂ ಬೊಮ್ಮಾಯಿ; ಖಾಸಗಿ ವಿಧೇಯಕಕ್ಕೆ ಹಿನ್ನಡೆ

Exit mobile version