ಚಂಢೀಗಡ: ರಾಷ್ಟ್ರೀಯ ಹೆದ್ದಾರಿ(National Highway)ಯಲ್ಲಿ ಡ್ರೈನೇಜ್ ಪೈಪ್(Drain Pipe collapse) ಕುಸಿದು ಅನೇಕರು ಗಾಯಗೊಂಡಿದ್ದು, ನೂರಾರು ವಾಹನಗಳು ಜಖಂಗೊಂಡಿರುವ ಘಟನೆ ಹರ್ಯಾಣ(Haryana)ದ ಕರ್ನಾಲ್ ಪ್ರದೇಶದಲ್ಲಿ ನಡೆದಿದೆ. ಸುಮಾರು 700 ಮೀಟರ್ ಉದ್ದದ ಕಬ್ಬಿಣದ ಪೈಪ್ ಏಕಾಏಕಿ ವಾಹನಗಳ ಮೇಲೆ ಬಿದ್ದಿದೆ. ಘಟನೆಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್(Traffic Jam) ಉಂಟಾಗಿದೆ.
ಘಟನೆ ವಿವರ:
ಪಾನಿಪತ್-ಚಂಡೀಗಡ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮೇಲ್ಸೇತುವೆಗೆ ಅಳವಡಿಸಲಾಗಿದ್ದ ಪೈಪ್ ಲೈನ್ ಏಕಾಏಕಿ ಕುಸಿದುಬಿದ್ದಿದೆ. ಪರಿಣಾಮವಾಗಿ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಸುಮಾರು 50ಮೀಟರ್ ಎತ್ತರದಿಂದ ಈ ಪೈಪ್ ಕುಸಿದು ಬಿದ್ದಿದೆ. ಇನ್ನು ಅತ್ಯಂತ ಹಳೆಯ ಪೈಪ್‌ಗಳನ್ನು ಅಳವಡಿಸಲಾಗಿತ್ತು ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದುವರೆಗೆ ಸಾವು ನೋವಿನ ಬಗ್ಗೆ ವರದಿ ಆಗಿಲ್ಲ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
#WATCH | Haryana: Many injured as drain pipe under elevated NH-44 falls on vehicles in Karnal. pic.twitter.com/uSbp6AAZ3X
— ANI (@ANI) May 27, 2024
ಕಳೆದ ವರ್ಷ ಬೆಂಗಳೂರಿನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಯಿ, ಮಗಳ ಮೇಲೆಯೇ ಉರುಳಿ ಬಿದ್ದಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರೂ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು.
ಹೈದರಾಬಾದ್‌ನಲ್ಲಿ ಎರಡು ವಾರಗಳ ಹಿಂದೆ ಇಂತಹದ್ದೇ ಒಂದು ಘಟನೆ ಈ ಹಿಂದೆ ನಡೆದಿತ್ತು. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ದಂಪತಿ ಮೇಲೆ ಇದ್ದಕ್ಕಿದ್ದಂತೆ ಮರವೊಂದು ಉರುಳಿ ಬಿದ್ದಿದ್ದು, ಸ್ಥಳದಲ್ಲೇ ಪತಿ ಕೊನೆಯುಸಿರೆಳೆದಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಈ ವಿಡಿಯೋ ಸಿಸಿಟಿವಿ ಕ್ಯಾಮೆರಾ(CCTV)ದಲ್ಲಿ ರೆಕಾರ್ಡ್ ಆಗಿದ್ದು, ಎಲ್ಲೆಡೆ ವೈರಲ್ ಆಗಿತ್ತು.
ಇದನ್ನೂ ಓದಿ:Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ
ಹೈದರಾಬಾದ್‌ನ ಸಿಕಂದರಬಾದ್‌ನಲ್ಲಿ ಮಂಗಳವಾರ ಈ ದುರ್ಘಟನೆ ಸಂಭವಿಸಿದ್ದು, ಆಸ್ಪತ್ರೆಗೆಂದು ದಂಪತಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಬೊಲ್ಲಾರಾಮ್ ಕಂಟೋನ್ಮೆಂಟ್ ಆಸ್ಪತ್ರೆಗೆ ಬರುತ್ತಿದ್ದ ಸ್ಕೂಟರ್‌ನಲ್ಲಿ ದಂಪತಿ ಬರುತ್ತಿದ್ದರು. ದಂಪತಿ ಆಸ್ಪತ್ರೆ ಗೇಟ್ ಒಳಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ದೈತ್ಯ ಮರವೊಂದು ಸ್ಕೂಟರ್ ಮೇಲೆ ಉರುಳಿಬಿದ್ದಿದೆ. ಅದೃಷ್ಟವಶಾತ್ ಮತ್ತೊಂದು ಬೈಕ್ ತಕ್ಷಣ ಬ್ರೇಕ್ ಹಾಕಿ ನಿಲ್ಲುತ್ತೆ. ಅದರಲ್ಲಿದ್ದ ಸವಾರ ಅಪಾಯದಿಂದ ಪಾರಾಗುತ್ತಾನೆ. ಇದಾದ ತಕ್ಷಣ ಸೆಕ್ಯೂಟಿ ಗಾರ್ಡ್ ಹಾಗೂ ಇತರರು ಓಡಿ ಹೋಗಿ ದಂಪತಿ ರಕ್ಷಣೆಗೆ ಮುಂದಾಗುತ್ತಾರೆ. ಅಷ್ಟರಲ್ಲಿ ಪತಿ ಕೊನೆಯುಸಿರೆಳೆದಿದ್ದರು. ತಲೆಗೆ ಏಟು ಬಿದ್ದು ನರಳುತ್ತಿದ್ದಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.