ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿರುವ ದ್ರೌಪದಿ ಮುರ್ಮು ಅವರಿಗೆ ಜೆಡಿಯು ಮತ್ತು ಬಿಜೆಡಿ ಪಕ್ಷ ಬೆಂಬಲ ನೀಡಿವೆ. ಎನ್‌ಡಿಎ ಮಿತ್ರಕೂಟದ ಪ್ರಮಖ ಮಿತ್ರಪಕ್ಷಗಳ ಬೆಂಬಲದಿಂದ ದ್ರೌಪದಿ ಮುರ್ಮು ಅವರಿಗೆ ಚುನಾವಣೆಯಲ್ಲಿ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಹಾದಿ ಸುಗಮವಾಗಿದೆ.
ದ್ರೌಪದಿ ಮುರ್ಮು ಅವರು ನಾಳೆ (ಜೂನ್ ೨೪) ನಾಮಪತ್ರ ಸಲ್ಲಿಸಲಿದ್ದಾರೆ. ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಎಲ್ಲ ಚುನಾಯಿತ ಪ್ರತಿನಿಧಿಗಳು ಮುರ್ಮು ಅವರಿಗೆ ಮತ ನೀಡಬೇಕು ಎಂದು ಒತ್ತಾಯಿಸಿದರು. ಮುರ್ಮು ಅವರು ನಾಮಪತ್ರ ಸಲ್ಲಿಸುವ ವೇಳೆ ಬಿಜೆಡಿ ಪ್ರತಿನಿಧಿಗಳು ಹಾಜರಿರುವ ಸಾಧ್ಯತೆ ಇದೆ.
ಬಿಹಾರಸ ಸಿಎಂ ನಿತೀಶ್ ಕುಮಾರ್ ಕೂಡ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯಾಗಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.
ಜೆಡಿಯು ಲೋಕಸಭೆಯಲ್ಲಿ ೧೬ ಸಂಸದರನ್ನು ಒಳಗೊಂಡಿದೆ. ಬಿಹಾರದ ದಲಿತ ನಾಯಕರಾದ ಮಾಜಿ ಸಿಎಂ ಜಿತಿನ್ ರಾಮ್ ಮಾಂಜಿ ಮತ್ತು ಲೋಕಜನಶಕ್ತಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಬೆಂಬಲಿಸಿದ್ದಾರೆ.
ಯಶ್ವಂತ್ ಸಿನ್ಹಾ ಪ್ರತಿಪಕ್ಷಗಳ ಅಭ್ಯರ್ಥಿಯಾಗಿದ್ದಾರೆ.
ಇದನ್ನೂ ಓದಿ: President Election | ದ್ರೌಪದಿ ಮುರ್ಮು ಆಯ್ಕೆ ಮಾಸ್ಟರ್ ಸ್ಟ್ರೋಕ್ ಎಂಬುದಕ್ಕೆ ಇಲ್ಲಿವೆ 7 ಕಾರಣಗಳು