Site icon Vistara News

Tea Lovers | ಬಾ ಗುರು ಒಂದ್‌ ಕಪ್‌ ಟೀ ಕುಡಿ, ಹೀಗೆ ಹೇಳುತ್ತಿದೆ ಒಂದು ಹೊಸ ಸ್ಟಡಿ

Tea

ನವದೆಹಲಿ: “ಅಕ್ಕಿ ಮೇಲೆ ಆಸೆ, ಬೀಗರ ಮೇಲೆ ಪ್ರೀತಿ” ಎಂಬಂತೆ ತುಂಬ ಜನರಿಗೆ ಟೀ ಕುಡಿಯಲು ತುಂಬ ಆಸೆ (Tea Lovers) ಇರುತ್ತದೆ. ಆರೋಗ್ಯದ ಮೇಲಿನ ಅತಿಯಾದ ಕಾಳಜಿಯಿಂದಾಗಿ ಅವರು ಆ ಆಸೆಯನ್ನು ಕಮರಿಸುತ್ತಾರೆ. ಆದರೆ, ದಿನಕ್ಕೆ ಹಲವಾರು ಕಪ್‌ ಟೀ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಯುರೋಪಿಯನ್‌ ಅಸೋಸಿಯೇಷನ್‌ ಫಾರ್‌ ದಿ ಸ್ಟಡಿ ಆಫ್‌ ಡಯಾಬಿಟೀಸ್‌ ಈ ಟೀ ಕುಡಿಯುವ ಕುರಿತು ಅಧ್ಯಯನ ನಡೆಸಿದೆ. ಎಂಟು ರಾಷ್ಟ್ರಗಳ ೧೦ ಲಕ್ಷ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅಧ್ಯಯನ ವರದಿ ಪ್ರಕಾರ ದಿನಕ್ಕೆ ಒಂದರಿಂದ ಮೂರು ಕಪ್‌ ಟೀ ಕುಡಿದರೆ, ಅಂತಹವರಿಗೆ ಮಧುಮೇಹ ಆವರಿಸುವ ಪ್ರಮಾಣ ಶೇ.೪ರಷ್ಟು ಕಡಿಮೆ ಮಾಡುತ್ತದೆ. ಹಾಗೆಯೇ, ಪಾರ್ಶ್ವವಾಯು, ಹೃದಯಾಘಾತದ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.

ನಿತ್ಯವೂ ಎರಡರಿಂದ ನಾಲ್ಕು ಕಪ್‌ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ ಎಂದು ಅಧ್ಯಯನ ವರದಿಯ ಒಟ್ಟು ಆಶಯವಾಗಿದೆ. ಹಾಗೆಯೇ, ಇದಕ್ಕಿಂತ ಹೆಚ್ಚು ಟೀ ಕುಡಿಯುವುದು ಬೇಡ ಎಂದು ತಜ್ಞರು ಸೂಚಿಸಿದ್ದಾರೆ. ಹಾಗಾಗಿ, ನಿಯಮಿತವಾಗಿ ಚಹಾ ಕುಡಿಯುವವರು ಹೆದರಬೇಕಿಲ್ಲ.

ಇದನ್ನೂ ಓದಿ | Motivatioal story | ಹಿಮ ಬೆಟ್ಟದ ತುತ್ತತುದಿಯ ಚಹಾ ಅಂಗಡಿಯಲ್ಲಿ ಆ ರಾತ್ರಿ ದೇವರು ಚಹಾ ಕುಡಿದು ಹೋಗಿದ್ದ!

Exit mobile version