Site icon Vistara News

Hit and Run Law: ಹೆದ್ದಾರಿ, ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತಿರುವ ಚಾಲಕರು! ಕಾರಣ ಏನು?

drivers protesting by blocking highway and roads to oppose Hit and Run Law

ನವದೆಹಲಿ: ಹೊಸ ವರ್ಷದ (New year) ಮೊದಲ ದಿನದಿಂದಲೇ ರಾಷ್ಟ್ರಾದ್ಯಂತ ಸಾರಿಗೆ ಮುಷ್ಕರಕ್ಕೆ (Truck Drivers Protest) ಕರೆ ನೀಡಲಾಗಿದ್ದು, ಮಂಗಳವಾರ ಹಲವು ರಾಜ್ಯಗಳಲ್ಲಿ ಭಾರೀ ತೊಂದರೆಯುಂಟಾಗಿದೆ. ಹಿಟ್ ಆ್ಯಂಡ್ ರನ್ ಅಪಘಾತ (Hit and Run Law) ಪ್ರಕರಣಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಸೇರಿಸಲಾಗಿರುವ ಹೊಸ ದಂಡ ನಿಬಂಧನೆಯ ವಿರುದ್ಧ ಟ್ರಕ್ ಚಾಲಕರು ಮುಷ್ಕರವನ್ನು ನಡೆಸುತ್ತಿದ್ದಾರೆ. ಭಾರತೀಯ ದಂಡ ಸಂಹಿತೆ ಬದಲಿಗೆ ಹೊಸದಾಗಿ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತಾ (BNS) ಕಾನೂನಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಚಾಲಕರಿಗೆ 10 ವರ್ಷಗಳವರೆಗೆ ಶಿಕ್ಷೆ ಸೇರಿದಂತೆ ಕಠಿಣವಾದ ನಿಬಂಧನೆಯನ್ನು ಸೇರಿಸಲಾಗಿದೆ(10 Years Jail).

ಟ್ರಕ್ಸ್, ಟ್ಯಾಂಕರ್ಸ್, ಬಸ್‌ ಸೇರಿದಂತೆ ವಾಣಿಜ್ಯ ಬಳಕೆಯ ವಾಹನಗಳ ಚಾಲಕರರು ಮುಷ್ಕರದಲ್ಲಿ ತೊಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆಗಳನ್ನು ಬಂದ್ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಇದರಿಂದ ಸಾರಿಗೆ ವ್ಯವಸ್ಥೆಯಲ್ಲಿ ಭಾರೀ ಸಮಸ್ಯೆ ಉಂಟಾಗಿದೆ.

ಹಲವು ಸಾರಿಗೆ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಹೊಸ ಕಾನೂನನ್ನು ತೀವ್ರವಾಗಿ ಟೀಕಿಸಿವೆ ಮತ್ತು ಅದನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿವೆ. ಸಾಗಣೆದಾರರ ಪ್ರತಿಭಟನೆಯನ್ನು ಶೀಘ್ರವೇ ಪರಿಹರಿಸದಿದ್ದರೆ, ಪೆಟ್ರೋಲ್ ಬಂಕ್‌ಗಳು ಖಾಲಿಯಾಗಲಿವೆ ಎಂದು ಎಂದು ಮಹಾರಾಷ್ಟ್ರದ ಪೆಟ್ರೋಲ್ ಪಂಪ್ ಡೀಲರ್‌ಗಳ ಸಂಘವು ಎಚ್ಚರಿಸಿದೆ.

ಹಳೆಯ ಭಾರತೀಯ ದಂಡ ಸಂಹಿತೆಯನ್ನು ಬದಲಿಸುವ ಭಾರತೀಯ ನ್ಯಾಯ್ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ, ನಿರ್ಲಕ್ಷ್ಯದ ಚಾಲನೆಯಿಂದ ಗಂಭೀರವಾದ ರಸ್ತೆ ಅಪಘಾತವನ್ನು ಉಂಟುಮಾಡುವ ಮತ್ತು ಪೊಲೀಸರಿಗೆ ಅಥವಾ ಆಡಳಿತದ ಯಾವುದೇ ಅಧಿಕಾರಿಗೆ ತಿಳಿಸದೆ ಓಡಿಹೋದ ಚಾಲಕರು 10 ವರ್ಷಗಳವರೆಗೆ ಶಿಕ್ಷೆ ಅಥವಾ 7 ಲಕ್ಷ ರೂ. ದಂಡವನ್ನು ಪಾವತಿಸಬೇಕಾಗುತ್ತದೆ.

ಯಾವುದೇ ದುಡುಕಿನ ಅಥವಾ ನಿರ್ಲಕ್ಷ್ಯದ ಮೂಲಕ ಯಾವುದೇ ವ್ಯಕ್ತಿಯ ಸಾವಿಗೆ ಕಾರಣರಾದವರು ಅಪರಾಧಿ ನರಹತ್ಯೆಗೆ ಸಮನಾಗಿರುವುದಿಲ್ಲ, ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ವಿವರಣೆಯ ಜೈಲುವಾಸದಿಂದ ಶಿಕ್ಷೆಗೆ ಒಳಗಾಗುತ್ತಾರೆ ಮತ್ತು ದಂಡಕ್ಕೆ ಸಹ ಹೊಣೆಗಾರರಾಗುತ್ತಾರೆ ಎಂದು ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಭಾರತೀಯ ದಂಡ ಸಂಹಿತೆ ಪ್ರಕಾರ, ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಆರೋಪಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿತ್ತು.

ಈ ಸುದ್ದಿಯನ್ನೂ ಓದಿ: Parliament Session: ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲೇ ಅಪರಾಧ ಸಂಹಿತಾ ವಿಧೇಯಕಗಳಿಗೆ ಲೋಕಸಭೆ ಒಪ್ಪಿಗೆ

Exit mobile version