Site icon Vistara News

Droupadi Murmu: ತುರ್ತು ಪರಿಸ್ಥಿತಿ ಸಂವಿಧಾನದ ಮೇಲೆ ನಡೆದಿರುವ ಅತಿದೊಡ್ಡ ದಾಳಿ; ದ್ರೌಪದಿ ಮುರ್ಮು

Droupadi Murmu

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ (Parliament Sessions)ದ ನಾಲ್ಕನೇ ದಿನವಾದ ಇಂದು (ಜೂನ್‌ 27) ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಮಾತನಾಡಿದ್ದಾರೆ. ಲೋಕಸಭಾ ಸ್ಪೀಕರ್‌ ಆಗಿ ಎರಡನೇ ಬಾರಿ ಚುನಾಯಿತರಾಗಿರುವ ಓಂ ಬಿರ್ಲಾ ಹಾಗೂ ನೂತನ ಸಂಸದರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಮುರ್ಮು ಅವರು ತಮ್ಮ ಭಾಷಣ ಆರಂಭಿಸಿದರು.

ತುರ್ತು ಪರಿಸ್ಥಿತಿ ಬಗ್ಗೆ ಮುರ್ಮು ಪ್ರಸ್ತಾಪ

ನಿನ್ನೆಯಷ್ಟೇ ಸ್ಪೀಕರ್‌ ಓಂ ಬಿರ್ಲಾ ಅವರು ಸಂಸತ್‌ನಲ್ಲಿ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡಿದ್ದರು. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ತುರ್ತು ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ತುರ್ತು ಪರಿಸ್ಥಿತಿ ಸಂವಿಧಾನದ ಮೇಲೆ ನಡೆದಿರುವ ಅತಿದೊಡ್ಡ ದಾಳಿ ಎಂದಿದ್ದಾರೆ.

ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿ ಹೆಚ್ಚು ಮತದಾನ ಆಗಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ರಾಷ್ಟ್ರಪತಿ ಮರ್ಮು, ದಶಕಗಳ ದಾಖಲೆಯನ್ನು ಮುರಿದು ಜಮ್ಮು ಮತ್ತು ಕಾಶ್ಮೀರ ಹೊರಹೊಮ್ಮಿದೆ. ಇದು ಬಹಳ ಉತ್ತಮ ಬೆಳವಣಿಗೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯಂತ ಕಡಿಮೆ ಮತದಾನ ಆಗುವಂತೆ ನೋಡಿಕೊಂಡು ನಮ್ಮ ಶತ್ರುಗಳು ನಮ್ಮ ವಿರುದ್ಧ ಸಂಚು ರೂಪಿಸುತ್ತಿದ್ದರು. ಅಲ್ಲದೇ ಕಣಿವೆ ರಾಜ್ಯ ಜನರ ಅಭಿಪ್ರಾಯಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದರು. ಆದರೆ ಈ ಬಾರಿ ಅತಿಹೆಚ್ಚು ಮತದಾನ ಮೂಲಕ ಜನ ಶತ್ರುಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ದೇಶದ ಆರ್ಥಿಕತೆ ಬಗ್ಗೆ ಮೆಚ್ಚುಗೆ

ಇದೇ ವೇಳೆ ಅವರು ದೇಶದ ಆರ್ಥಿಕ ಸುಧಾರಣೆ ಬಗ್ಗೆ ಪ್ರಸ್ತಾಪಿಸಿದ್ದು, “ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರದ ಪ್ರತಿಜ್ಞೆಯು ಭಾರತವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನಾಗಿ ರೂಪಿಸಿದೆ. 10 ವರ್ಷಗಳಲ್ಲಿ, 11 ನೇ ಸ್ಥಾನದಿಂದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿ ಭಾರತ ಬೆಳೆಯಿತು. ಸಾಂಕ್ರಾಮಿಕ ಮತ್ತು ವಿವಿಧ ಸಂಘರ್ಷಗಳ ಹೊರತಾಗಿಯೂ ಪ್ರಪಂಚದ ಕೆಲವು ಭಾಗಗಳಲ್ಲಿ, ಭಾರತವು ಕಳೆದ 10 ವರ್ಷಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿಯಿಂದ ಕೈಗೊಂಡ ಸುಧಾರಣೆಗಳು ಮತ್ತು ನಿರ್ಧಾರಗಳಿಂದಾಗಿ ಈ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಯಿತು. ಪ್ರಪಂಚದ ಅಭಿವೃದ್ಧಿಯಲ್ಲಿ ಭಾರತ 15% ರಷ್ಟು ಕೊಡುಗೆ ನೀಡುತ್ತಿದೆ. ಭಾರತವನ್ನು ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವುದೇ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

CAA ಬಗ್ಗೆ ಮುರ್ಮು ಏನಂದ್ರು?

ನನ್ನ ಸರ್ಕಾರವು CAA ಕಾನೂನಿನ ಅಡಿಯಲ್ಲಿ ನಿರಾಶ್ರಿತರಿಗೆ ಪೌರತ್ವವನ್ನು ನೀಡಲು ಪ್ರಾರಂಭಿಸಿದೆ. CAA ಅಡಿಯಲ್ಲಿ ಪೌರತ್ವವನ್ನು ಪಡೆದ ಕುಟುಂಬಗಳಿಗೆ ನಾನು ಉತ್ತಮ ಭವಿಷ್ಯವನ್ನು ಬಯಸುತ್ತೇನೆ. ನನ್ನ ಸರ್ಕಾರವು ಭಾರತದ ಪರಂಪರೆ ಮತ್ತು ಸಂಸ್ಕೃತಿಯನ್ನು ಮರುಸ್ಥಾಪಿಸಲು ಬಯಸುತ್ತದೆ ಎಂದರು.

ಇದನ್ನೂ ಓದಿ: Vijayalakshmi Darshan: ಜೈಲಲ್ಲಿ ದರ್ಶನ್‌ ಭೇಟಿ ಬೆನ್ನಲ್ಲೇ ಫ್ಯಾನ್ಸ್‌ಗೆ ದೊಡ್ಡ ಸಂದೇಶ ಕೊಟ್ಟ ವಿಜಯಲಕ್ಷ್ಮೀ; ಇಲ್ಲಿದೆ ಪೋಸ್ಟ್!

Exit mobile version