Site icon Vistara News

Container Drags Car: ಕಾರಿಗೆ ಡಿಕ್ಕಿ ಹೊಡೆದು, ಅದನ್ನು 3 ಕಿ.ಮೀ ಎಳೆದ ಟ್ರಕ್ ಚಾಲಕ; ಕಾರಿನಲ್ಲಿದ್ದವ ಅದೃಷ್ಟವಶಾತ್‌ ಪಾರು

Container Drags Car

#image_title

ಲಖನೌ: ದೆಹಲಿಯಲ್ಲಿ ಹೊಸ ವರ್ಷದಂದು ಅಪಘಾತದ ಬಳಿಕ ಕಾರಿನ ಅಡಿಗೆ ಸಿಲುಕಿದ ಚಾಲಕನು ಯುವತಿಯನ್ನು ೧೩ ಕಿ.ಮೀ ಎಳೆದು, ಯುವತಿ ಮೃತಪಟ್ಟ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಇದಾದ ಬಳಿಕವೂ ಇಂತಹ ಪ್ರಕರಣವು ದೇಶದ ಹಲವೆಡೆ ಸುದ್ದಿಯಾಗಿವೆ. ಇದರ ಬೆನ್ನಲ್ಲೇ, ಉತ್ತರ ಪ್ರದೇಶದಲ್ಲಿ ಟ್ರಕ್‌ ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ಕಾರನ್ನು ಮೂರು ಕಿಲೋಮೀಟರ್‌ (Container Drags Car) ಎಳೆದಿದ್ದಾನೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಉತ್ತರ ಪ್ರದೇಶ ಮೀರತ್‌ನಲ್ಲಿ ೨೨ ಚಕ್ರದ ಟ್ರಕ್‌ ಹಾಗೂ ಕಾರು ಅಪಘಾತಕ್ಕೀಡಾಗಿವೆ. ಇದೇ ವೇಳೆ ಟ್ರಕ್‌ನ ಮುಂಭಾಗದಲ್ಲಿ ಕಾರು ಇದ್ದಿದ್ದನ್ನು ನೋಡಿದರೂ ಟ್ರಕ್‌ ಚಾಲಕನು ಕುಡಿದ ಮತ್ತಿನಲ್ಲಿ ಹಾಗೆಯೇ ಕಾರನ್ನು ಮೂರು ಕಿ.ಮೀವರೆಗೆ ತಳ್ಳಿಕೊಂಡು ಸಾಗಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಲಾರಿಯು ಕಾರನ್ನು ತಳ್ಳಿಕೊಂಡು ಮುಂದೆ ಸಾಗುತ್ತಿದ್ದನ್ನು ನೋಡಿದ ನಾಲ್ವರು ಲಾರಿಯನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಕಾರು ಚಾಲಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಟ್ರಕ್‌ ಚಾಲಕನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದೆಹಲಿ ಮಾದರಿಯಲ್ಲಿ ಇನ್ನೊಂದು ಅಪಘಾತ, ಬೈಕ್‌ ಸವಾರನನ್ನು 12 ಕಿಮೀ ಎಳೆದೊಯ್ದು ಸಾಯಿಸಿದ ಕಾರು

Exit mobile version