ಹೈದರಾಬಾದ್: ಮಧ್ಯಪ್ರದೇಶದಲ್ಲಿ ಆದಿವಾಸಿ ವ್ಯಕ್ತಿಯೊಬ್ಬರ ಮೇಲೆ ಪ್ರವೇಶ್ ಶುಕ್ಲಾ ಎಂಬ ದುರುಳ ಮೂತ್ರ ವಿಸರ್ಜನೆ ಮಾಡಿದ ಪ್ರಕರಣವು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ, ಆಂಧ್ರಪ್ರದೇಶದಲ್ಲೂ ಇಂತಹದ್ದೇ ಹೀನ ಕೃತ್ಯ ಎಸಗಲಾಗಿದೆ. ದಲಿತ ವ್ಯಕ್ತಿಯೊಬ್ಬ ಅನ್ಯ ಜಾತಿಯ ಬಾಲಕಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕಾಗಿ ಒಂಬತ್ತು ದುರುಳರು ಆತನ ಮೇಲೆ ಹಲ್ಲೆ ನಡೆಸಿ, ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ತಡವಾಗಿ ಸುದ್ದಿಯಾಗಿದೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಜೂನ್ 19ರಂದು ಘಟನೆ ನಡೆದಿದೆ. ದಲಿತ ವ್ಯಕ್ತಿಯನ್ನು ದೂರದ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಆತನ ಮೇಲೆ ಹಲ್ಲೆ ನಡೆಸಿ, ಒಂಬತ್ತೂ ಜನರು ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಆದರೆ, ಇವರು ಮೂತ್ರ ವಿಸರ್ಜನೆ ಮಾಡಿದ್ದನ್ನು, ಅವರಲ್ಲೇ ಒಬ್ಬ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾನೆ. ವಿಡಿಯೊ ವೈರಲ್ ಆದ ಬಳಿಕ ಒಂಗೋಳೆ ಗ್ರಾಮದಲ್ಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಹೀನ ಕೃತ್ಯದ ದೃಶ್ಯಾವಳಿ
Ongole, Andhra Pradesh
— Hate Tracker (@HatetrackIN) July 19, 2023
Tribal youth thrashed, urinated in mouth, and forced to eat meat by several men.
The video of the incident has gone viral over the internet.
What action will Andhra Govt take on this? pic.twitter.com/hWqUpHpAlC
ದೌರ್ಜನ್ಯಕ್ಕೊಳಗಾದ ವ್ಯಕ್ತಿಯನ್ನು ಮೋಟಾ ನವೀನ್ ಎಂದು ಗುರುತಿಸಲಾಗಿದೆ. ಮನ್ನಂ ರಾಮಾಂಜನೇಯುಲು ಹಾಗೂ ಎಂಟು ವ್ಯಕ್ತಿಗಳು ಮೂತ್ರ ವಿಸರ್ಜನೆ ಮಾಡಿದ್ದಾರೆ. ಇವರಲ್ಲಿ ಇಬ್ಬರು ಬಾಲಕರು ಎಂದು ಕೂಡ ತಿಳಿದುಬಂದಿದೆ. “ರಾಮಾಂಜನೇಯುಲು ಹಾಗೂ ಮೋಟಾ ನವೀನ್ ಗೆಳೆಯರಾಗಿದ್ದರು. ಆದರೆ, ರಾಮಾಂಜನೇಯುಲುವಿನ ಮತ್ತೊಬ್ಬ ಗೆಳೆಯನ ಸಂಬಂಧಿಕಳಾದ ಬಾಲಕಿಯನ್ನು ನವೀನ್ ಪ್ರೀತಿಸುತ್ತಿದ್ದ. ಇದನ್ನು ತಿಳಿದ ರಾಮಾಂಜನೇಯುಲು, ಗೆಳೆಯ ಎಂಬುದನ್ನು ಮರೆತು ಆತನ ಮೇಲೆ ಹಲ್ಲೆ ನಡೆಸಿದ್ದಾನೆ” ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
ಇದನ್ನೂ ಓದಿ: MP Urination Case: ‘ನನ್ನ ಮೇಲೆ ಮೂತ್ರ ವಿಸರ್ಜಿಸಿದವನ ಜೈಲಿಂದ ಬಿಟ್ಬಿಡಿ’; ಕಾರ್ಮಿಕನ ಒತ್ತಾಯ
ಇದಕ್ಕೂ ಮೊದಲು ಮೋಟಾ ನವೀನ್ ಹಾಗೂ ಬಾಲಕಿಯು ಓಡಿ ಹೋಗಿದ್ದರು. ನವೀನ್ ವಿರುದ್ಧ ಪೋಕ್ಸೊ ಕಾಯ್ದೆ ಅಡಿಯಲ್ಲಿ ಕೇಸ್ ಕೂಡ ದಾಖಲಾಗಿತ್ತು ಎಂದು ತಿಳಿದುಬಂದಿದೆ. ಇಷ್ಟಾದರೂ ಬಾಲಕಿ ಜತೆ ನವೀನ್ ಪ್ರೀತಿ ಮುಂದುವರಿದಿತ್ತು. ಹಾಗಾಗಿ, ನವೀನ್ ಮೇಲಿನ ಕೋಪಕ್ಕಾಗಿ ಇಂತಹ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ರಾಮಾಂಜನೇಯುಲು ಸೇರಿ ಹಲವರ ವಿರುದ್ಧ ಮೋಟಾ ನವೀನ್ ಪ್ರಕರಣ ದಾಖಲಿಸಿದ್ದಾರೆ. ಇದಾದ ಬಳಿಕ ಆರು ಆರೋಪಿಗಳನ್ನು ಬಂಧಿಸಲಾಗಿದೆ. ರಾಮಾಂಜನೇಯುಲು ಸೇರಿ ಮೂವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.