Site icon Vistara News

Drunken Groom: ಕುಡಿದ ಮತ್ತಿನಲ್ಲಿಯೇ ಮಂಟಪಕ್ಕೆಬಂದ ವರ; ಒದ್ದೋಡಿಸಿದ ವಧು!

Drunken Groom

ಮಧ್ಯಪ್ರದೇಶ: ‘ಒಂದು ಗಂಡಿಗೊಂದು ಹೆಣ್ಣು ಹೇಗೋ ಏನೋ ಹೊಂದಿಕೊಂಡು/ ದುಃಖ ಹಗುರ ಏನುತಿರೆ/ ಪ್ರೇಮವೇನು ಹಾಸ್ಯವೇ?’ ನರಸಿಂಹ ಸ್ವಾಮಿಯವರ ಈ ಕವಿತೆಯ ಸಾಲು ಕೇಳುತ್ತಿದ್ದರೆ ಮದುವೆ ಆಗದಿದ್ದವರಿಗೂ ಒಮ್ಮೆ ಮದುವೆಯಾಗಿಬಿಡೋಣ ಅನಿಸುತ್ತದೆ. ಸಂಗಾತಿಯ ಬಗ್ಗೆ, ಮದುವೆ ಬಗ್ಗೆ ಸಾಕಷ್ಟು ಕನಸುಗಳನ್ನು ಈ ಕವಿತೆ ಹಸಿ ಎದೆಯಲ್ಲಿ ಪ್ರೇಮಾಂಕುರದ ಬೀಜ ಬಿತ್ತುತ್ತದೆ. ತಮ್ಮ ಮದುವೆಯನ್ನು ಹಾಗೇ ಆಚರಿಸಬೇಕು, ಈ ರೀತಿಯಾಗಿ ಮಾಡಬೇಕು ಎಂದು ಈಗಿನವರು ತಿಂಗಳಾನುಗಟ್ಟಲೆಯಿಂದ ತಯಾರಿ ನಡೆಸುತ್ತಾರೆ. ಆದರೆ ಇಲ್ಲೊಬ್ಬ ವರ ಮಹಾಶಯ ಸಿಕಾಪಟ್ಟೆ ಕುಡಿದು (Drunken Groom) ನಡೆಯಬೇಕಿದ್ದ ತನ್ನ ಮದುವೆಯನ್ನೇ ಮುರಿದುಕೊಂಡ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ.

ತನ್ನನ್ನು ವರಿಸುವವನು ಬರುತ್ತಾನೆ ಎಂದು ವಧು ಕನಸು ಕಂಗಳಿನಿಂದ ಕಾಯುತ್ತಿದ್ದರೆ ಅವಳ ಕನಸಿಗೆ ವರನು ತಣ್ಣೀರು ಎರೆಚಿದ್ದಾನೆ. ಭಿಂಡ್ ಜಿಲ್ಲೆಯ ಲಹಾರ್ ಮೂಲದ ವೀರೇಂದ್ರ ರಾಜಾವತ್ ಅವರ ಮಗನ ಮದುವೆಯ ಮೆರವಣಿಗೆ ಬ್ಯಾಂಡ್ ವಾದ್ಯಗಳ ಮೂಲಕ  ವಧುವಿನ ಮನೆಯ ಬಾಗಿಲಿಗೆ ಬಂದಿತ್ತು. ಆದರೆ ವರ ಕುಡಿದ ಮತ್ತಿನಲ್ಲಿದ್ದ. ಕುದುರೆಯಿಂದ ಇಳಿಯುತ್ತಿದ್ದಂತೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಎದ್ದು ನಿಲ್ಲಲು ಆಗದ ಸ್ಥಿತಿಯಲ್ಲಿ ಆತ ಇದ್ದ. ಅಲ್ಲಿದ್ದವರು ಕೆಳಗೆ ಬಿದ್ದ ವರನನ್ನು ಮೇಲಕ್ಕೆತ್ತಲು ಸಹಾಯ ಮಾಡಿದ್ದಾರೆ. ಆದರೆ ಆತನಡೆಯುವಾಗ ಮತ್ತೆ ಎಡವಿ ಬಿದ್ದಿದ್ದಾನೆ. ಹಾಗೇ ಅವನ ಸ್ನೇಹಿತರು ಕೂಡ ಕುಡಿದ ಮತ್ತಿನಲ್ಲಿದ್ದಿದ್ದರು ಎನ್ನಲಾಗಿದೆ.

ವರನ ಈ ಸ್ಥಿತಿ ಕಂಡು ಬೇಸರಗೊಂಡ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಆಕೆಯ ಮನವೊಲಿಸಲು ಕುಟುಂಬಸ್ಥರು ಹಾಗೂ ವರನ ಕಡೆಯವರು ಎಷ್ಟೇ ಪ್ರಯತ್ನಿಸಿದರೂ ಆಕೆ ತನ್ನ ನಿಲುವನ್ನು ಬದಲಾಯಿಸಿದೆ ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ವರನ ಕಡೆಯವರು ಕೋಪಗೊಂಡಿದ್ದು, ಎರಡು ಕುಟುಂಬದ ನಡುವೆ ವಾಗ್ವಾದ ಏರ್ಪಟ್ಟಿದೆ. ಆ ವೇಳೆ ವರನ ಕಡೆಯವರು ವಧುವಿನ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ವಧುವಿನ ಕಡೆಯವರು ಹಾಗೂ ವರನ ಕಡೆಯವರು ಪರಸ್ಪರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ವರ ಮತ್ತು ವಧುವಿನ ಕಡೆಯವರು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲಿ ಇರುವಂತಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

ವರ ಕುಡಿದ ಅಮಲಿನಲ್ಲಿ ಬಂದಿದ್ದು, ವಧುವಿನ ಮನೆ ಬಾಗಿಲಿಗೆ ಬಂದ ಕೂಡಲೇ ಕುಸಿದು ಬಿದ್ದಿದ್ದಾನೆ. ಇದನ್ನು ಕಂಡು ವಧು ಆತನನ್ನು ಮದುವೆಯಾಗಲು ನಿರಾಕರಿಸಿ ಬಾರಾತ್ ಅನ್ನು ವಾಪಾಸ್ ಕಳುಹಿಸಿದ್ದಾಳೆ. ಇದರಿಂದ ಪರಸ್ಪರ ಹಲ್ಲೆ ಮತ್ತು ಸುಲಿಗೆ ಆರೋಪದಡಿ ಎರಡು ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ತನಿಖೆ ನಡೆಯುತ್ತಿದೆ ಎಂದು ಅಲ್ಲನ ನಗರ ಠಾಣಾ ಪ್ರಭಾರಿ ರಾಜ್ ಕುಮಾರ್ ತಿಳಿಸಿದ್ದಾರೆ.

Exit mobile version