Site icon Vistara News

IndiGo Flight | ಇಂಡಿಗೋ ಫ್ಲೈಟ್‌ನಲ್ಲಿ ಕುಡಿದು, ಪರಸ್ಪರ ಜಗಳವಾಡಿದ ಇಬ್ಬರು ಪ್ರಯಾಣಿಕರು

IndiGo Flight @ Drunken Passengers

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣವು ಬೆಳಕಿಗೆ ಬಂದಿದೆ. ಪ್ರಯಾಣಿಕರಿಬ್ಬರು ವಿಮಾನದಲ್ಲಿ ಕುಡಿದು, ಅಮಲಿನಲ್ಲಿ ಪರಸ್ಪರ ಜಗಳವಾಡಿದ ಘಟನೆ ಇಂಡಿಗೋ (IndiGo Flight) ಪ್ಲೈಟ್‌ನಲ್ಲಿ ನಡೆದಿದೆ.

ದೆಹಲಿ – ಪಾಟ್ನಾ ಇಂಡಿಗೋ 6ಇ-6393 ವಿಮಾನದಲ್ಲಿಈ ಘಟನೆ ನಡೆದಿದೆ. ದೆಹಲಿಯಿಂದ ಪಾಟ್ನಾಗೆ ತೆರಳುವ ವೇಳೆ ವಿಮಾನದಲ್ಲೇ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ. ಗಲಾಟೆ ಮಾಡಿದ ಪ್ರಯಾಣಿಕರಿಬ್ಬರನ್ನು ಪಾಟ್ನಾ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ವಿಮಾನದಲ್ಲಿ ನಡೆದ ಈ ಅಹಿತಕರ ಘಟನೆ ಕುರಿತು ಇಂಡಿಗೋ ಸಂಸ್ಥೆ ಪಾಟ್ನಾ ಪೊಲೀಸರಿಗೆ ದೂರು ನೀಡಿತ್ತು.

ಗಲಾಟೆ ಮಾಡಿಕೊಂಡ ಪ್ರಾಯಣಿಕರಿಬ್ಬರು ವಿಮಾನದೊಳಗೆ ಪ್ರವೇಶಿಸುವಾಗಲೇ ಕುಡಿದುಕೊಂಡೇ ಬಂದಿದ್ದರು. 80 ನಿಮಿಷದ ಪ್ರಯಾಣದ ಅವಧಿಯಲ್ಲಿ ಅವರು ನಿರಂತರವಾಗಿ ಕುಡಿಯತ್ತಲೇ ಇದ್ದರು. ಈ ಇಬ್ಬರನ್ನು ಪಾಟ್ನಾ ಏರ್ಪೋರ್ಟ್‌ನಲ್ಲಿ ಮೊದಲಿಗೆ ಸಿಐಎಸ್ಎಫ್ ತಮ್ಮ ವಶಕ್ಕೆ ತೆಗೆದುಕೊಂಡು, ಬಳಿಕ ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಯಿತು. ಇಷ್ಟಾಗಿಯೂ ಇಂಡಿಗೋ ಈ ಘಟನೆ ಬಗ್ಗೆ ಟ್ವೀಟ್ ಮಾಡಿ, ವಿಮಾನದಲ್ಲಿ ಯಾವುದೇ ವಾಗ್ವಾದ ನಡೆದಿಲ್ಲ ಎಂದು ಇಹೇಳಿಕೊಂಡಿದೆ.

ಇದನ್ನೂ ಓದಿ | Air India Pee Case | ಏರ್​ ಇಂಡಿಯಾ ವಿಮಾನದ ಪೈಲೆಟ್​, ನಾಲ್ವರು ಸಿಬ್ಬಂದಿ ಅಮಾನತು; ಕ್ಷಮೆ ಯಾಚಿಸಿದ ಸಿಇಒ

Exit mobile version