Site icon Vistara News

Dubai Building Fire: ದುಬೈನಲ್ಲಿ ಅಪಾರ್ಟ್​ಮೆಂಟ್​ಗೆ ಬೆಂಕಿ; ಭಾರತದ ನಾಲ್ವರು ಸೇರಿ 16 ಮಂದಿ ದುರ್ಮರಣ

Dubai Building Fire 16 died include 4 Indians

#image_title

ದುಬೈನ ವಸತಿ ಕಟ್ಟಡವೊಂದಕ್ಕೆ ಬೆಂಕಿ ಬಿದ್ದು 16 ಮಂದಿ (Dubai Building Fire) ಮೃತಪಟ್ಟಿದ್ದಾರೆ. ಹೀಗೆ ಬೆಂಕಿಗೆ ಆಹುತಿಯಾದವರಲ್ಲಿ 4 ಮಂದಿ ಭಾರತೀಯರಾಗಿದ್ದು, ಅದರಲ್ಲಿ ಕೇರಳದ ದಂಪತಿಯೂ ಸೇರಿದ್ದಾರೆ ಎಂದು ವರದಿಯಾಗಿದೆ. ದುಬೈನ ಹಳೇ ದೇರಾ ಜಿಲ್ಲೆಯಲ್ಲಿರುವ ಅಲ್​ ರಾಸ್​ ಅಪಾರ್ಟ್​​ಮೆಂಟ್​​ಗೆ ಬೆಂಕಿ ಹೊತ್ತಿಕೊಂಡಿದ್ದಾಗಿ ಅಲ್ಲಿನ ಸಿವಿಲ್​ ಡಿಫೆನ್ಸ್​ ಆಪರೇಶನ್ ರೂಮ್​​ಗೆ ಭಾನುವಾರ ಮಧ್ಯಾಹ್ನ 12.35ರ ಹೊತ್ತಿಗೆ ಕರೆ ಹೋಗಿದೆ. ಕೂಡಲೇ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಘಟನೆಯಲ್ಲಿ 9ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅಪಾರ್ಟ್​ಮೆಂಟ್​ನ ನಾಲ್ಕನೇ ಫ್ಲೋರ್​​ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಅದು ವೇಗವಾಗಿ ಇಡೀ ಅಪಾರ್ಟ್​ಮೆಂಟ್​ಗೆ ಪಸರಿಸಿದೆ. ಸುಮಾರು 12.41ರ ಹೊತ್ತಿಗೆ ಅಲ್ಲಿಗೆ ಬಂದ ಅಗ್ನಿಶಾಮಕದಳದವರು ಕಷ್ಟಪಟ್ಟು ಬೆಂಕಿ ನಂದಿಸಿದ್ದಾರೆ. ಸುಮಾರು 2.45ರ ಹೊತ್ತಿಗೆ ಬೆಂಕಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Fire accident | ಜಿಗಣಿ ಪ್ಲಾಸ್ಟಿಕ್‌ ಫ್ಯಾಕ್ಟರಿಯಲ್ಲಿ ಬೆಂಕಿ ಅನಾಹುತ

ಮೃತರ ಗುರುತು ಪತ್ತೆ
ಮೃತರನ್ನೆಲ್ಲ ಶವಾಗಾರಕ್ಕೆ ಸಾಗಿಸಿದ ಬಳಿಕ ಭಾರತ ಮೂಲದ ಸಾಮಾಜಿಕ ಕಾರ್ಯಕರ್ತ ನಾಸೀರ್ ವಾತನಪಲ್ಲಿ ಎಂಬುವರನ್ನು ಅಲ್ಲಿಗೆ ಕರೆದೊಯ್ಯಲಾಗಿತ್ತು. ಅವರೂ ಕೂಡ ಇದೇ ಅಪಾರ್ಟ್​ಮೆಂಟ್​ನಲ್ಲೇ ಇದ್ದವರಾಗಿದ್ದು, ಮೃತರ ಗುರುತು ಪತ್ತೆಗಾಗಿ ಪೊಲೀಸರು ಕರೆದುಕೊಂಡು ಹೋಗಿದ್ದರು. ಅವರು ಹೇಳಿರುವ ಪ್ರಕಾರ ದುರಂತದಲ್ಲಿ ಭಾರತದ ನಾಲ್ವರು ಮೃತಪಟ್ಟಿದ್ದಾರೆ. ಅದರಲ್ಲಿ ಒಂದು ಜೋಡಿ ಮೂಲತಃ ಕೇರಳದವರು. ಇನ್ನಿಬ್ಬರು ಪುರುಷರು ತಮಿಳುನಾಡಿನವರು. ಹಾಗೇ, ಪಾಕಿಸ್ತಾನದ ಮೂವರು ಮತ್ತು ನೈಜೀರಿಯಾದ ಮಹಿಳೆಯೊಬ್ಬಳು ಮೃತಪಟ್ಟಿದ್ದಾರೆ. ದುಬೈನಲ್ಲಿರುವ ಭಾರತ, ಪಾಕಿಸ್ತಾನ ಮತ್ತು ಯಾವೆಲ್ಲ ದೇಶದ ಪ್ರಜೆಗಳು ಮರಣ ಹೊಂದಿದ್ದಾರೋ, ಆಯಾ ದೇಶಗಳ ಕಾನ್ಸುಲೇಟ್​ಗಳನ್ನು ಸಂಪರ್ಕಿಸುವ ಕೆಲಸ ನಡೆಯುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.

Exit mobile version