Site icon Vistara News

LIC Employees: ಎಲ್‌ಐಸಿ ನೌಕರರಿಗೆ ಕೇಂದ್ರ ಗುಡ್‌ನ್ಯೂಸ್;‌ ಇಷ್ಟು ಪರ್ಸೆಂಟ್‌ ಸಂಬಳ ಹೆಚ್ಚಳ

LIC

LIC Offices To Remain Open on March 30, 31

ನವದೆಹಲಿ: ಭಾರತೀಯ ಜೀವ ವಿಮಾ (Life Insurance Corporation Of India) ನೌಕರರಿಗೆ (LIC Employees) ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಎಲ್‌ಐಸಿ ನೌಕರರ ಸಂಬಳವನ್ನು ಶೇ.17ರಷ್ಟು ಏರಿಕೆ (Salary Hike) ಮಾಡಲು ಕೇಂದ್ರ ಸರ್ಕಾರ (Central Government) ಅನುಮೋದನೆ ನೀಡಿದ್ದು, 2022ರ ಆಗಸ್ಟ್‌ನಿಂದಲೇ ವೇತನ ಹೆಚ್ಚಳವು ಅನ್ವಯವಾಗಲಿದೆ. ಅಂದರೆ, ಎಲ್‌ಐಸಿ ನೌಕರರಿಗೆ 2022ರ ಆಗಸ್ಟ್‌ನಿಂದ ಇದುವರೆಗೆ ಅರಿಯರ್ಸ್‌ (Errears) ಸಿಗಲಿದೆ ಎಂದು ವರದಿಯೊಂದು ತಿಳಿಸಿದೆ.

ಎಲ್‌ಐಸಿ ನೌಕರರ ಬೇಸಿಕ್‌ ಸ್ಯಾಲರಿಯಲ್ಲಿ ಶೇ.17ರಷ್ಟು ಏರಿಕೆಯಾಗಲಿದೆ. ಅಷ್ಟೇ ಅಲ್ಲ, ಭತ್ಯೆಯೂ (Allowance) ಕೂಡ ಏರಿಕೆಯಾಗುವುದರಿಂದ ನೌಕರರ ಸಂಬಳದಲ್ಲಿ ಒಟ್ಟು ಶೇ.22ರಷ್ಟು ಏರಿಕೆಯಾಗಲಿದೆ. ಕೇಂದ್ರ ಸರ್ಕಾರದಿಂದ ನಿರ್ಧಾರದಿಂದ ಎಲ್‌ಐಸಿಯ 1 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. 30 ಸಾವಿರ ಪಿಂಚಣಿದಾರರು ಕೂಡ ಇದರ ಲಾಭ ಪಡೆಯಲಿದ್ದಾರೆ. ಇದರಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ಹೆಚ್ಚುವರಿಯಾಗಿ 4 ಸಾವಿರ ಕೋಟಿ ರೂ. ಹೊರೆಯಾಗಲಿದೆ. ವರ್ಷಕ್ಕೆ ಒಟ್ಟು 29 ಸಾವಿರ ಕೋಟಿ ರೂ. ವ್ಯಯವಾಗಲಿದೆ.

ಎಲ್‌ಐಸಿ ಲಾಭದಲ್ಲಿ ಗಣನೀಯ ಹೆಚ್ಚಳ

ದೇಶದ ವಿಶ್ವಾಸನೀಯ ಜೀವ ವಿಮಾ ಸಂಸ್ಥೆಯಾದ ಎಲ್‌ಐಸಿಯು ಡಿಸೆಂಬರ್‌ ತ್ರೈಮಾಸಿಕದಲ್ಲಿ ಗಣನೀಯ ಲಾಭ ಕಂಡಿದೆ. ಮೂರೇ ತಿಂಗಳಲ್ಲಿ ಎಲ್‌ಐಸಿ ಲಾಭವು ಶೇ.49ರಷ್ಟು ಹೆಚ್ಚಾಗಿದೆ. ಒಂದು ವರ್ಷದ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ನಿವ್ವಳ ಲಾಭವು 6,334 ಕೋಟಿ ರೂ.ನಿಂದ 9,444 ಕೋಟಿ ರೂ.ಗೆ ಏರಿಕೆಯಾಗಿದೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು 2022ರ ಆಗಸ್ಟ್‌ನಿಂದ ಅನ್ವಯವಾಗುವಂತೆ ನೌಕರರ ಸಂಬಳ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: DA Hike Calculator: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ; ಯಾರಿಗೆ ಎಷ್ಟು ಏರಿಕೆ, ಇಲ್ಲಿ ಲೆಕ್ಕ ಹಾಕಿ!

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಬಂಪರ್‌ ಕೊಡುಗೆ ನೀಡಿತ್ತು. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಏರಿಕೆ ಮಾಡಿದ್ದು, ಇದರಿಂದಾಗಿ ನೌಕರರಿಗೆ ನೀಡುತ್ತಿರುವ ತುಟ್ಟಿಭತ್ಯೆಯು ಶೇ.50ರಷ್ಟು ಆಗಿದೆ. ತುಟ್ಟಿ ಭತ್ಯೆಯ ಜತೆಗೆ ಕೇಂದ್ರ ಸರ್ಕಾರವು ಮನೆ ಬಾಡಿಗೆ ಅಲೋವನ್ಸ್‌ (HRA) ಕೂಡ ಏರಿಕೆ ಮಾಡಿದೆ. ಅಷ್ಟೇ ಅಲ್ಲ, ಗ್ರ್ಯಾಚುಟಿ ಮೊತ್ತವನ್ನು 25 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 12,868 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಖರ್ಚುವಾಗಲಿದೆ. 2024ರ ಜನವರಿ 1ರಿಂದಲೇ ತುಟ್ಟಿಭತ್ಯೆ ಹೆಚ್ಚಳವು ಅನ್ವಯವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version