ನವದೆಹಲಿ: ಶನಿವಾರ ರಾತ್ರಿ 9:30 ರ ಸುಮಾರಿಗೆ ಅಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿತು. ಇದರ ಪ್ರಭಾವ ರಾಷ್ಟ್ರ ರಾಜಧಾನಿ ಮತ್ತು ಪಕ್ಕದ ಪ್ರದೇಶಗಳಾದ ಡೆಲ್ಲಿ ಎನ್ಸಿಆರ್, ಜಮ್ಮು ಮತ್ತು ಕಾಶ್ಮೀರ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ 195 ಕಿ.ಮೀ (121 ಮೈಲಿ) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮತ್ತು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (ಜಿಎಫ್ಜೆಡ್) ತಿಳಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಪ್ರಕಾರ ಭೂಕಂಪದ ಕೇಂದ್ರಬಿಂದು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಜಿಲ್ಲೆಯ ವಾಯುವ್ಯಕ್ಕೆ 418 ಕಿ.ಮೀ ದೂರದಲ್ಲಿರುವ ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿತ್ತು. ಇದರಿಂದ ಹೆಚ್ಚಿನ ಹಾನಿ ಉಂಟಾಗಿಲ್ಲ. ಆದಾಗ್ಯೂ ಮುನ್ನೆಚ್ಚರಿಕೆ ವಹಿಸಲು ರಾಷ್ಟ್ರೀಯ ವೀಪತ್ತು ದಳ ನಿರ್ಧರಿಸಿದೆ.
ಭೂಕಂಪ ಆದಾಗ ಮುನ್ನೆಚ್ಚರಿಕೆ ಏನು?
- ಭೂಕಂಪದ ಸಮಯದಲ್ಲಿ, ಭಯಪಡದಿರುವುದು ಮತ್ತು ಶಾಂತವಾಗಿರುವುದು ಮುಖ್ಯ. ಟಿವಿ ಅಥವಾ ರೇಡಿಯೋದಲ್ಲಿ ಬರುವ ಮಾಹಿತಿಯನ್ನು ಕೇಳಿಸಿಕೊಳ್ಳಬೇಕು.
- ಮುಗ್ಗರಿಸಿ ಬೀಳದಂತೆ ಮೊಣಕಾಲುಗಳ ಮೇಲೆ ಕುಳಿತುಕೊಳ್ಳಿ. ತಲೆ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳಿ ಮತ್ತು ಗಟ್ಟಿಮುಟ್ಟಾದ ಮೇಜು ಅಥವಾ ಮೇಜಿನ ಕೆಳಗೆ ಬಚ್ಚಿಟ್ಟುಕೊಳ್ಳಬೇಕು.
- ಭೂಕಂಪದ ಸಮಯದಲ್ಲಿ ಹೊರಗೆ ಅಥವಾ ಇತರ ಕೋಣೆಗಳಿಗೆ ಓಡುವುದು ಗಾಯಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಗಾಜು, ನೇತಾಡುವ ವಸ್ತುಗಳು, ಪುಸ್ತಕದ ಡಬ್ಬಗಳು. ದೊಡ್ಡ ಪೀಠೋಪಕರಣಗಳಿಂದ ದೂರ ಸರಿಯಬೇಕು. ನೀವು ಹೊರಗೆ ಇದ್ದರೆ ಹೊರಗೆ ಇರಬೇಕು. ಮರಗಳು, ದೂರವಾಣಿ ಕಂಬಗಳು ಮತ್ತು ಕಟ್ಟಡಗಳಿಂದ ದೂರವಿರುವ ತೆರೆದ ಪ್ರದೇಶಕ್ಕೆ ಹೋಗಿ.
- ಬೆಂಕಿಪೊಟ್ಟಣಗಳು ಅಥವಾ ಲೈಟರ್ ಗಳನ್ನು ಬಳಸಬಾರದ. ಭೂಕಂಪದ ವೇಳೆ ಅನಿಲ ಸೋರಿಕೆಯಾಗುವುದರಿಂದ ಸ್ವಿಚ್ ಗಳನ್ನು ಆನ್ ಮಾಡಬಾರದು. ಟಾರ್ಚ್ ಮಾತ್ರ ಬಳಸಬೇಕು.
- ಆಲ್ಕೋಹಾಲ್ ಮತ್ತು ಪೇಂಟ್ನಂಥ ವಸ್ತುಗಳು ಚೆಲ್ಲಿದ್ದರೆ ತಕ್ಷಣ ಸ್ವಚ್ಛಗೊಳಿಸಬೇಕು.
- ವಿದ್ಯುತ್ ತಂತಿಗಳನ್ನು ಹೊಂದಿರುವ ಸ್ಥಳಗಳ ಬಳಿ ಇರುಬಾರದು.
- ಜನರು ಅಪಾಯದಲ್ಲಿಲ್ಲದಿದ್ದರೆ ಅವರನ್ನು ಸ್ಥಳಾಂತರಿಸಬೇಡಿ. ಬದಲಾಗಿ, ರಕ್ಷಣಾ ತಂಡಗಳಿಗೆ ಮಾಹಿತಿ ನೀಡಿ ಮತ್ತು ಸಹಾಯ ಪಡೆಯಿರಿ. ಬೆಂಕಿ ಇದ್ದರೆ, ಅದನ್ನು ನಂದಿಸಲು ಪ್ರಯತ್ನಿಸಿ.
- ಹಾನಿಗೊಳಗಾದ ಕಟ್ಟಡಗಳಿಗೆ ಮತ್ತೆ ಪ್ರವೇಶಿಸಬೇಡಿ. ಹಾನಿಗೊಳಗಾದ ರಚನೆಗಳ ಬಳಿ ಹೋಗಬೇಡಿ.
- ಎಲಿವೇಟರ್ ಗಳನ್ನು ಬಳಸಬೇಡಿ ಏಕೆಂದರೆ ವಿದ್ಯುತ್ ಹೊರಹೋಗಬಹುದು ಮತ್ತು ಅದು ಅಸಮರ್ಪಕವಾಗಿ ಕಾರ್ಯನಿರ್ವಹಿಸಬಹುದು.
- ಬಳಿಕವೂ ಕೆಲವು ಭೂಕಂಪನಗಳನ್ನು ನಿರೀಕ್ಷಿಸಲು ಸಿದ್ಧರಾಗಿರಿ.