ಶ್ರೀನಗರ: ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಪ್ರಬಲ ಭೂಕಂಪ (Earthquake) ಸಂಭವಿಸಿದೆ. ದೋಡಾ ಜಿಲ್ಲೆಯಲ್ಲಿ ರಿಯಾಕ್ಟರ್ ಮಾಪನದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (National Centre for Seismology) ತಿಳಿಸಿದೆ. ಭೂಮಿ ಕಂಪಿಸುತ್ತಲೇ ಜನ ಮನೆಯಿಂದ ಓಡಿ ಬಂದರು. ಯಾವುದೇ ಕಟ್ಟಡಗಳು ಧರೆಗುರುಳಿಲ್ಲ ಹಾಗೂ ಯಾರಿಗೂ ತೊಂದರೆ ಎದುರಾಗಿಲ್ಲ ಎಂದು ತಿಳಿದುಬಂದಿದೆ.
24 ಗಂಟೆಯಲ್ಲಿ 3 ದುರಂತ
ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿಯೇ ಮೂರು ದುರಂತ ಸಂಭವಿಸಿವೆ. ಬುಧವಾರ (ನವೆಂಬರ್ 15) ಇದೇ ಜಿಲ್ಲೆಯಲ್ಲಿ ಬಸ್ಸೊಂದು 200 ಅಡಿ ಆಳದ ಕಣಿವೆಗೆ ಬಿದ್ದು 39 ಜನ ಮೃತಪಟ್ಟಿದ್ದರು. ಇದಾದ ಬಳಿಕ ಗುರುವಾರ (ನವೆಂಬರ್ 16) ಬೆಳಗ್ಗೆ ಅಗ್ನಿ ದುರಂತದ ಸಂಭವಿಸಿ 8 ಮನೆಗಳು ಭಸ್ಮವಾಗಿವೆ. ಇದಾದ ಕೆಲವೇ ಗಂಟೆಯಲ್ಲಿ ಭೂಕಂಪ ಸಂಭವಿಸಿದೆ. ಇದರಿಂದಾಗಿ ಜನ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ಮೂಲಗಳು ತಿಳಿಸಿವೆ.
Earthquake Strikes Chenab Valley's Doda District – NCS Reports 3.9 Magnitude#JammuAndKashmir #kashmir #accident #GiftOfSight#NationalPressDay #ODIWorldCup2023 #australiavssouthafrica pic.twitter.com/eF5e8XLviw
— Iqbal Abdul (@Iqbal_Abdul_) November 16, 2023
ದೆಹಲಿಯಲ್ಲಿ 3 ಬಾರಿ ಭೂಕಂಪ
ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ಒಂದೇ ವಾರದಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿತ್ತು. ನವೆಂಬರ್ 3ರಂದು ರಾತ್ರಿ ದೆಹಲಿ, ಗುರುಗ್ರಾಮ, ಘಾಜಿಯಾಬಾದ್ ಸೇರಿ ಹಲವೆಡೆ ಭೂಕಂಪ ಸಂಭವಿಸಿತ್ತು. ನವೆಂಬರ್ 6ರ ಸಂಜೆ ಕೂಡ ಭೂಮಿ ಕಂಪಿಸಿದ ಅನುಭವವಾಗಿತ್ತು. ಇದಾದ ಬಳಿಕ ನವೆಂಬರ್ 11ರಂದು ಕೂಡ ದೆಹಲಿ, ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಹಲವೆಡೆ ಭೂಮಿ ಕಂಪಿಸಿತ್ತು.
ಇದನ್ನೂ ಓದಿ: Delhi Earthquake: ದೆಹಲಿಯಲ್ಲಿ ಮತ್ತೆ ಪ್ರಬಲ ಭೂಕಂಪ; ಮನೆಯಿಂದ ಓಡಿಬಂದ ಜನ
ನೇಪಾಳದಲ್ಲಿ 157 ಜನ ಸಾವು
ನೇಪಾಳದಲ್ಲೂ ಇತ್ತೀಚೆಗೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 157 ಜನ ಮೃತಪಟ್ಟಿದ್ದು, 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಜನರ ರಕ್ಷಣೆಗೆ ಹರಸಾಹಸ ಮಾಡಬೇಕಾಗಿತ್ತು. ಮಹಿಳೆಯರು, ಮಕ್ಕಳು, ಹಿರಿಯರು ಭೂಕಂಪಕ್ಕೆ ಬಲಿಯಾಗಿದ್ದರು. ಅಷ್ಟಕ್ಕೂ, ನೇಪಾಳದಲ್ಲಿ ಕಳೆದ ಮೂರು ದಿನಗಳಲ್ಲಿ ಮೂರ್ನಾಲ್ಕು ಬಾರಿ ಭೂಮಿ ಕಂಪಿಸಿದ ಕಾರಣ ಜನರಲ್ಲಿ ಭಯ ಮನೆಮಾಡಿದೆ.