ಲಖನೌ: ಶನಿವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ಉತ್ತರ ಪ್ರದೇಶದಲ್ಲಿ 5.2 ರಿಕ್ಟರ್ ತೀವ್ರತೆಯ ಭೂಕಂಪ ಸಂಭವಿಸಿದೆ. ನಸುಕಿನ 1.12ರ ಸುಮಾರಿಗೆ ಲಖನೌದ ಉತ್ತರ-ಈಶಾನ್ಯಕ್ಕೆ 139 ಕಿಮೀ ದೂರದಲ್ಲಿ ಕಂಪನ ಸಂಭವಿಸಿದೆ.
ಭೂಕಂಪದ ಕೇಂದ್ರವು ಭೂಮಿಯಿಂದ 82 ಕಿ.ಮೀ ಆಳದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಭಾರತ-ನೇಪಾಳ ಗಡಿಗೆ ಸಮೀಪವಿರುವ ಉತ್ತರ ಪ್ರದೇಶದ ಬಹರೈಚ್ ಭೂಕಂಪನದ ಕೇಂದ್ರ ಬಿಂದುವಾಗಿತ್ತು.
ಭೂಕಂಪದಿಂದ ಯಾವುದೇ ಹಾನಿ ವರದಿಯಾಗಿಲ್ಲ. ಆದರೆ ಲಖಿಂಪುರ ಖೇರಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ನೆಲ ಅಲುಗಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದ ಉತ್ತರಾಖಂಡದ ಪಿಥೋರಗಢ ಪ್ರದೇಶದಲ್ಲಿ ಶುಕ್ರವಾರ ಲಘು ಕಂಪನದ ಅನುಭವವಾಗಿತ್ತು. ಮಧ್ಯಾಹ್ನ 12.55ಕ್ಕೆ ಕಂಪನ ಸಂಭವಿಸಿದೆ.
ಎನ್‌ಸಿಎಸ್ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಹ್ಯಾನ್ಲಿ ಗ್ರಾಮದ ದಕ್ಷಿಣ-ನೈಋತ್ಯದಲ್ಲಿ ಮತ್ತೊಂದು 3.1 ತೀವ್ರತೆಯ ಭೂಕಂಪ ಸಂಭವಿಸಿದೆ.
ಇದನ್ನೂ ಓದಿ: ಭೂಕಂಪದಿಂದ ಮಗಳನ್ನು ಬಚಾಯಿಸಿದ ತೀಕ್ಷ್ಣಮತಿ ತಂದೆ: ವಿಡಿಯೊ ವೈರಲ್