Site icon Vistara News

Earthquake In Delhi | ದೆಹಲಿ, ಜಮ್ಮು ಕಾಶ್ಮೀರದಲ್ಲಿ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ

Earthquake In Delhi

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ (Earthquake In Delhi) ಸೇರಿ ಹಲವೆಡೆ ಗುರುವಾರ ಸಂಜೆ ಭೂಕಂಪ ಸಂಭವಿಸಿದೆ. ಅಫಘಾನಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಜಮ್ಮು-ಕಾಶ್ಮೀರದಲ್ಲಂತೂ 5.9 ತೀವ್ರತೆಯ ಭೂಕಂಪನವಾಗಿದೆ.

ಜಮ್ಮು-ಕಾಶ್ಮೀರದ ಹಲವೆಡೆ, ದೆಹಲಿ, ಗುರುಗ್ರಾಮ, ನೊಯ್ಡಾ, ಫರೀದಾಬಾದ್‌, ಘಾಜಿಯಾಬಾದ್‌ ಸೇರಿ ವಿವಿಧೆಡೆ ಭೂಮಿ ಕಂಪಿಸಿದೆ. ಅಫಘಾನಿಸ್ತಾನದಲ್ಲಿ ತೀವ್ರತರವಾದ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಅಫಘಾನಿಸ್ತಾನದ ಹಿಂದು ಕುಷ್‌ ಪ್ರದೇಶದಲ್ಲಿ ಹೆಚ್ಚಿನ ತೀವ್ರತೆಯ ಭೂಕಂಪವಾಗಿದ್ದು, ರಿಕ್ಟರ್‌ ಮಾಪನದಲ್ಲಿ 5.9 ತೀವ್ರತೆ ದಾಖಲಾಗಿದೆ.

ಅಫಘಾನಿಸ್ತಾನ, ಪಾಕಿಸ್ತಾನ ಹಾಗೂ ಉತ್ತರ ಭಾರತದ ಹಲವೆಡೆಯೂ ಭೂಮಿ ಕಂಪಿಸಿದ ಅನುಭವವಾಗಿದೆ. ದೆಹಲಿಯಲ್ಲಿ ವಾರದಲ್ಲಿ ಎರಡನೇ ಬಾರಿ ಭೂಕಂಪ ಸಂಭವಿಸಿದಂತಾಗಿದೆ. ಜನವರಿ 1ರಂದು ಕೂಡ ಲಘು ಭೂಕಂಪ ಸಂಭವಿಸಿತ್ತು.

ಇದನ್ನೂ ಓದಿ | Earthquake in Haryana | ಹರಿಯಾಣದಲ್ಲಿ 3.8 ತೀವ್ರತೆಯ ಲಘು ಭೂಕಂಪ

Exit mobile version