ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಸಂಜೆ ಭೂಕಂಪ (Earthquake in Delhi) ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 5.4ರ ತೀವ್ರತೆ ದಾಖಲಾಗಿದ್ದು, ವಾರದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದೇ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಲು ಕಾರಣವಾಗಿದೆ.
ನೇಪಾಳದಲ್ಲಿ ಕಳೆದ ಮೂರು ದಿನಗಳಲ್ಲಿಯೇ ಐದು ಬಾರಿ ಭೂಕಂಪ ಸಂಭವಿಸಿದೆ. ಇದರಿಂದ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಪಿಸಿದ ಅನುಭವವಾಗಿದೆ. ಆದರೆ, ಭೂಕಂಪನದಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಾಷ್ಟ್ರ ರಾಜಧಾನಿ ಜತೆಗೆ ನೋಯ್ಡಾ, ಗುರುಗ್ರಾಮ, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಪಂಜಾಬ್‌ನ ಕೆಲವೆಡೆ ಭೂಮಿ ಕಂಪಿಸಿದೆ.
ಇದನ್ನೂ ಓದಿ | Nepal earthquake | ನೇಪಾಳದಲ್ಲಿ ಭೂಕಂಪ, 6 ಸಾವು, ದೆಹಲಿಯಲ್ಲೂ ನಡುಗಿದ ಭೂಮಿ