Site icon Vistara News

ಭಾರತದಲ್ಲೂ ಭೂಕಂಪ?; ಟರ್ಕಿ-ಸಿರಿಯಾದಲ್ಲಿ 3ದಿನ ಮೊದಲೇ ಪ್ರಬಲ ಭೂಕಂಪದ ಎಚ್ಚರಿಕೆ ಕೊಟ್ಟಿದ್ದ ಡಚ್​ ಸಂಶೋಧಕ ಹೇಳೋದೇನು?

Dutch researcher Frank Hoogerbeets

#image_title

ಫೆ.6ರಂದು ಟರ್ಕಿ-ಸಿರಿಯಾ ಮತ್ತು ಲೆಬನಾನ್​​ನ ಕೆಲವು ಭಾಗಗಳಲ್ಲಿ ಭೂಕಂಪನ ಆಗಿ, ಅದರ ಭೀಕರತೆ ಇವತ್ತಿನವರೆಗೂ ಮುಂದುವರಿದೆ. ಟರ್ಕಿ-ಸಿರಿಯಾದಲ್ಲಿ ಅತ್ಯಂತ ಪ್ರಬಲವಾಗಿ ಭೂಮಿ ಕಂಪಿಸಿದ್ದರೆ, ಲೆಬನಾನ್​​ ಹಲವು ಭಾಗಗಳಲ್ಲಿ ಲಘುವಾಗಿ ಭೂಕಂಪನವಾಗಿತ್ತು. ಹೀಗೆ ಟರ್ಕಿ-ಸಿರಿಯಾ-ಲೆಬನಾನ್​​ನಲ್ಲಿ ಭೂಮಿ ನಡುಗುವುದಕ್ಕೂ ಮೊದಲು ಮೂರು ದಿನಗಳ ಮೊದಲು, ಅಂದರೆ ಫೆ.3ರಂದು ಡಚ್​ ಸಂಶೋಧಕ ಫ್ರಾಂಕ್ ಹೂಗರ್​ಬೀಟ್ಸ್​ ಎಂಬುವರು ತಮ್ಮ ಟ್ವಿಟರ್​​ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ‘ಅತಿಶೀಘ್ರದಲ್ಲಿಯೇ ಟರ್ಕಿ-ಸಿರಿಯಾ-ಲೆಬನಾನ್, ಜೋರ್ಡಾನ್​​ಗಳಲ್ಲಿ ಸುಮಾರು 7.5 ಮ್ಯಾಗ್ನಿಟ್ಯೂಡ್​ಗಳಷ್ಟು ಪ್ರಬಲವಾದ ಭೂಕಂಪ ಉಂಟಾಗಲಿದೆ’ ಎಂದು ಹೇಳಿದ್ದರು.

ಅದೇ ಸಂಶೋಧಕ ಡಚ್​ ಸಂಶೋಧಕ ಫ್ರಾಂಕ್ ಹೂಗರ್​ಬೀಟ್ಸ್​ ಈಗ ಮತ್ತೊಂದು ಅಂದಾಜು ಮಾಡಿದ್ದಾರೆ. ಅತಿಶೀಘ್ರದಲ್ಲೇ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲೂ ಭೂಕಂಪನ ಉಂಟಾಗಬಹುದು ಎಂದು ಹೇಳಿದ್ದು, ಆ ವಿಡಿಯೊ ಕೂಡ ವೈರಲ್ ಆಗುತ್ತಿದೆ. ಅಫ್ಘಾನಿಸ್ತಾನ ಭೂಕಂಪನದ ಕೇಂದ್ರಬಿಂದು ಆಗಬಹುದು. ಅದು ಪಾಕಿಸ್ತಾನ ಮತ್ತು ಭಾರತದ ಮೇಲೆ ಪ್ರಭಾವ ಬೀರಬಹುದು ಎಂದು ಅವರು ಹೇಳಿದ್ದಾರೆ. ಅಂದರೆ ಅವರು ಅಫ್ಘಾನಿಸ್ತಾನದಲ್ಲಿ ಹುಟ್ಟುವ ಭೂಕಂಪನ, ಭಾರತ-ಪಾಕಿಸ್ತಾನದ ಮೂಲಕ ಹಾದು, ಹಿಂದೂ ಮಹಾಸಾಗರದಲ್ಲಿ ಕೊನೆಯಾಗಬಹುದು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಟರ್ಕಿ-ಸಿರಿಯಾದಲ್ಲಿ ಭಾರತದ ‘ಆಪರೇಶನ್​ ದೋಸ್ತ್’; ರಕ್ಷಣೆಗೆ ಹೋದ ಮಹಿಳಾ ಅಧಿಕಾರಿಗೆ ಸಿಹಿಮುತ್ತು ಕೊಟ್ಟ ಟರ್ಕಿಶ್​ ಮಹಿಳೆ​

ಫ್ರಾಂಕ್ ಹೂಗರ್​ಬೀಟ್ಸ್ ಅವರು ಟರ್ಕಿ, ಸಿರಿಯಾ ಬಗ್ಗೆ ನುಡಿದಿದ್ದ ಭೂಕಂಪದ ಭವಿಷ್ಯ ನಿಜವಾಗಿದ್ದರಿಂದ ಈಗ ಭಾರತ-ಪಾಕಿಸ್ತಾನ-ಅಫ್ಘಾನಿಸ್ತಾನದಲ್ಲೂ ಭೂಕಂಪ ಆಗಬಹುದಾ ಎಂಬ ಆತಂಕ ಸಹಜವಾಗಿಯೇ ಪ್ರಾರಂಭವಾಗಿದೆ. ಸೋಷಿಯಲ್​ ಮೀಡಿಯಾಗಳಲ್ಲಂತೂ ಭರ್ಜರಿ ಚರ್ಚೆಯಾಗುತ್ತಿದೆ. ಈ ಮಧ್ಯೆ ಇನ್ನೊಂದು ಟ್ವೀಟ್ ಮಾಡಿರುವ ಅವರು ‘ಪಾಕಿಸ್ತಾನ-ಅಫ್ಘಾನಿಸ್ತಾನದಲ್ಲಿ ಭೂಕಂಪನವಾಗುತ್ತದೆ ಎಂದು ಹೇಳಿರುವ ಬಗ್ಗೆ ತಪ್ಪು ಮಾಹಿತಿ ಹಬ್ಬಿಸಬೇಡಿ. ವಾತಾವರಣದಲ್ಲಿ ಆಗುವ ಏರಿಳಿತಗಳೆಲ್ಲವೂ ಅತ್ಯಂತ ದೊಡ್ಡಮಟ್ಟದ ಹಾನಿ ಮಾಡುತ್ತವೆ ಎಂದು ಹೇಳಲಾಗುವುದಿಲ್ಲ. ಭಾರತ-ಪಾಕಿಸ್ತಾನ-ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನವೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

Exit mobile version