ಚೆನ್ನೈ: ತಮಿಳುನಾಡಿನ ಡಿಎಂಕೆ ನಾಯಕ, ಸಂಸದ ಎ. ರಾಜಾ (A Raja) ಅವರಿಗೆ ಸೇರಿದ 55 ಕೋಟಿ ರೂಪಾಯಿ ಮೌಲ್ಯದ 45 ಎಕರೆ ಬೇನಾಮಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಕೊಯಮತ್ತೂರಿನಲ್ಲಿರುವ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
ಯುಪಿಎ ಮೊದಲ ಅವಧಿಯಲ್ಲಿ ಅಂದರೆ, 2004ರಿಂದ 2007ರ ಅವಧಿಯಲ್ಲಿ ಎ.ರಾಜಾ ಅವರು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವರಾಗಿದ್ದಾಗ ಗುರುಗ್ರಾಮ ಮೂಲದ ಕಂಪನಿಯೊಂದಕ್ಕೆ ಪರಿಸರ ಅನುಮತಿ ನೀಡಿದ್ದಕ್ಕೆ ಪ್ರತಿಯಾಗಿ ರಾಜಾ ಅವರಿಗೆ ಸೇರಿದ ಕಂಪನಿಯಿಂದ 45 ಎಕರೆ ಭೂಮಿ ಖರೀದಿಸಲಾಗಿದೆ ಎಂದು ಇ.ಡಿ ಆರೋಪಿಸಿದೆ.
59 ವರ್ಷದ ಎ. ರಾಜಾ ಅವರು ನೀಲಗಿರಿ ಲೋಕಸಭೆ ಕ್ಷೇತ್ರದ ಡಿಎಂಕೆ ಸದಸ್ಯರಾಗಿದ್ದಾರೆ. 2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿಯೂ ಎ.ರಾಜಾ ಅವರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಇ.ಡಿ ತನಿಖೆ ನಡೆಸಿತ್ತು. ಈಗ ಮತ್ತೊಂದು ಪ್ರಕರಣದಲ್ಲಿ ಆಸ್ತಿ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ | DK Shivakumar| ಡಿಕೆಶಿ ಮನೆಯಲ್ಲೇ ಐಟಿ, ಇ.ಡಿ, ಸಿಬಿಐ ಕಚೇರಿ ತೆಗೆದುಬಿಡಿ: ರಣದೀಪ್ ಸುರ್ಜೇವಾಲಾ ಲೇವಡಿ