ನವದೆಹಲಿ: ಸುಮಾರು 5,551 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಚೀನಾದ ಮೊಬೈಲ್ ಉತ್ಪಾದನಾ ಕಂಪನಿಯಾದ ಶಿಯೋಮಿ ಟೆಕ್ನಾಲಜಿ ಇಂಡಿಯಾ ಲಿಮಿಟೆಡ್ ಪ್ರೈವೇಟ್ ಲಿಮಿಟೆಡ್ ಹಾಗೂ ಮೂರು ವಿದೇಶಿ ಬ್ಯಾಂಕ್‌ಗಳಿಗೆ ಜಾರಿ ನಿರ್ದೇಶನಾಲಯವು ಶೋಕಾಸ್ ನೋಟಿಸ್ (ED Notice) ಜಾರಿಗೊಳಿಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ನಿಯಮಗಳನ್ನು ಉಲ್ಲಂಘಿಸಿ ಸಾವಿರಾರು ಕೋಟಿ ರೂ. ವಿದೇಶಿ ವಿನಿಮಯ ಮಾಡಿದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ 10 (4) ಹಾಗೂ 10 (5) ಸೆಕ್ಷನ್‌ಗಳ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಶಿಯೋಮಿ ಇಂಡಿಯಾದ ಮಾಜಿ ಎಂಡಿ ಮನು ಕುಮಾರ್ ಜೈನ್, ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸಮೀರ್ ಬಿ. ರಾವ್ ಅವರಿಗೆ ನೋಟಿ ನೀಡಿದೆ. ಹಾಗೆಯೇ, CITI ಬ್ಯಾಂಕ್, ಎಚ್‌ಎಸ್‌ಬಿಸಿ ಬ್ಯಾಂಕ್ ಹಾಗೂ Deutsche Bank ಎಜಿಗೆ ಕೂಡ ಇ.ಡಿ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಎಫ್‌ಇಎಂಎ ಅಡಿಯಲ್ಲಿ ನಿಯಮಗಳನ್ನು ಪಾಲಿಸದೆ, ಟೆಕ್ನಿಕಲ್ ಕೊಲ್ಯಾಬರೇಷನ್ ಅಗ್ರೀಮೆಂಟ್ ಅಡಿಯಲ್ಲಿ ಕಾನೂನು ಪಾಲಿಸದೆ ವಿದೇಶಿ ವಿನಿಮಯ ಮಾಡಿದ ಹಿನ್ನೆಲೆಯಲ್ಲಿ ಮೂರು ವಿದೇಶಿ ಬ್ಯಾಂಕ್‌ಗಳಿಗೆ ನೋಟಿ ಜಾರಿ ಮಾಡಲಾಗಿದೆ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Chhattisgarh Liquor Scam: ಛತ್ತೀಸ್‌ಗಢ ಮದ್ಯ ಹಗರಣ ಆರೋಪಿಗಳ 121 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇ.ಡಿ
ಕಳೆದ ವರ್ಷವೇ ಎಫ್‌ಇಎಂಎ ಅಡಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚೀನಾ ಮೂಲದ ಶಿಯೋಮಿ ಗ್ರೂಪ್‌ಗೆ ಸೇರಿದ 5,551.27 ಕೋಟಿ ರೂಪಾಯಿಯನ್ನು ಜಪ್ತಿ ಮಾಡಿದೆ. ನಿಯಮಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಯಲ್ಲಿರುವ ಕಂಪನಿಯನ್ನು ಹಣವನ್ನು ಜಪ್ತಿ ಮಾಡಿದೆ ಎಂದು ಇ.ಡಿ ಮಾಹಿತಿ ನೀಡಿದೆ.
5,551.27 ಕೋಟಿ ರೂಪಾಯಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗಾಗಲೇ ತನಿಖೆ ಮುಗಿಸಿದೆ. ಇದರಿಂದಾಗಿ ಮುಂದಿನ ಪ್ರಕ್ರಿಯೆಯ ಭಾಗವಾಗಿ ಶೋಕಾಸ್ ನೋಟಿಸ್ ನೀಡಿದೆ. ಪ್ರಕರಣ ಇತ್ಯರ್ಥವಾಗುವಾಗ ಶಿಯೋಮಿ ಕಂಪನಿಯು ನಿಯಮ ಉಲ್ಲಂಘಿಸಿದ್ದು ಸಾಬೀತಾದರೆ ಇಂತಿಷ್ಟು ದಂಡ ವಿಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.