Site icon Vistara News

Delhi Liquor Policy Scam | ದಿಲ್ಲಿ ಮದ್ಯ ನೀತಿ ಹಗರಣ, ತೆಲಂಗಾಣ ಸಿಎಂ ಕೆಸಿಆರ್ ಪುತ್ರಿಗೆ ಉರುಳು!

Kavitha's former auditor arrested by CBI Delhi Liquor Policy scam

ನವದೆಹಲಿ: ದಿಲ್ಲಿ ಲಿಕ್ಕರ್ ಪಾಲಿಸಿ ಹಗರಣವು (Delhi Liquor Policy Scam) ಇದೀಗ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ, ಎಂಎಲ್‌ಸಿ ಕೆ. ಕವಿತಾ (K Kavitha) ಅವರಿಗೂ ಸುತ್ತಿಕೊಂಡಿದೆ. ಜಾರಿ ನಿರ್ದೇಶನಾಲಯ(ಇ.ಡಿ)ವು ಕೋರ್ಟಿಗೆ ಸಲ್ಲಿಸಲಾದ ವರದಿಯಲ್ಲಿ ಕವಿತಾ ಅವರನ್ನೂ ಹೆಸರಿಸಿದ್ದು, 100 ಕೋಟಿ ರೂ. ಕಿಕ್‌ಬ್ಯಾಕ್‌ನಲ್ಲಿ ಅವರ ಪಾತ್ರವಿದೆ ಎಂದು ತಿಳಿಸಿದೆ.

ದಿಲ್ಲಿ ಡಿಸಿಎಂ ಮುನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ಅಮಿತ್ ಅರೋರಾ ಅವರು ಒಂದು ವರ್ಷದ ಅವಧಿಯಲ್ಲಿ ಕವಿತಾ ಅವರಿಗೆ 10 ಬಾರಿ ಕರೆ ಮಾಡಿದ್ದಾರೆ. ಇವರಲ್ಲದೇ ಬೇರೆ ಬೇರೆ 35 ಜನರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ ಎಂಬ ಮಾಹಿತಿಯು ಈಗಾಗಲೇ ವಶದಲ್ಲಿರುವ ಆರೋಪಿಯೊಬ್ಬರ ಕುರಿತು ಸಲ್ಲಿಕೆಯಾಗಿರುವ ರಿಮ್ಯಾಂಡ್ ವರದಿಯಲ್ಲಿ ತಿಳಿಸಲಾಗಿದೆ.

ಕೆಸಿಆರ್ ಅವರ ಪುತ್ರಿ ಅಮಿತ್ ಅರೋರಾ ಅವರೊಂದಿಗೆ ಸಂವಹನ ನಡೆಸಲು ಫ್ಯಾನ್ಸಿ ಸಂಖ್ಯೆಗಳನ್ನು ಬಳಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಇದಕ್ಕಾಗಿ ಕವಿತಾ ಅವರು ಎರಡು ಸಿಮ್‌ಗಳನ್ನು ಬಳಸಿದ್ದಾರೆ. ಅವರ ಇಎಂಇಐ ನಂಬರ್ ಅನ್ನು ಸುಮಾರು 10 ಸಾರಿ ಬದಲಿಸಲಾಗಿದೆ ಎಂದು ಇ.ಡಿ ಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಅಲ್ಲದೇ ವಶಪಡಿಸಿಕೊಳ್ಳಲಾದ ಫೋನುಗಳಲ್ಲಿನ ಡೇಟಾವನ್ನು ಡಿಲಿಟ್, ಫಾರ್ಮ್ಯಾಟ್ ಮಾಡಲಾಗಿತ್ತೂ ಇ.ಡಿ ಕೋರ್ಟಿಗೆ ತಿಳಿಸಿದೆ.

ಇದನ್ನೂ ಓದಿ | Liquor Policy Scam | ಬಿಜೆಪಿ ಹಂಚಿದೆ ಹಗರಣದ ಸ್ಟಿಂಗ್ ವಿಡಿಯೋ, ಇದಕ್ಕೇನು ಹೇಳ್ತಾರೆ ದಿಲ್ಲಿ ಡಿಸಿಎಂ ಸಿಸೋಡಿಯಾ?

Exit mobile version