Site icon Vistara News

ರಾಹುಲ್‌ ಗಾಂಧಿಗೆ ಇಂದು ಮುಂದುವರಿಯಲಿರುವ ಇ.ಡಿ ವಿಚಾರಣೆ, ಕಾಂಗ್ರೆಸ್‌ ಗದ್ದಲ

rahul gandi

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಮೂರನೇ ದಿನವಾದ ಬುಧವಾರ ವಿಚಾರಣೆಗೆ ಒಳಪಡಿಸಲಿದೆ. ಈ ಬಗ್ಗೆ ರಾಹುಲ್‌ಗೆ ಸಮನ್ಸ್‌ ನೀಡಲಾಗಿದೆ. ಈ ನಡುವೆ ಕಾಂಗ್ರೆಸ್‌ ನಾಯಕರ ಪ್ರತಿಭಟನೆಯ ಗದ್ದಲ ಮುಂದುವರಿದಿದೆ.

ರಾಹುಲ್‌ ಗಾಂಧಿ ಅವರನ್ನು ಮಂಗಳವಾರ 10 ಗಂಟೆಗೂ ಹೆಚ್ಚು ಹೊತ್ತು ಇ.ಡಿ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಹಲವಾರು ಪ್ರಶ್ನೆಗಳ ಸುರಿಮಳೆಗೆರೆದಿತ್ತು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಕಚೇರಿಗೆ ತೆರಳುತ್ತಿದ್ದವರನ್ನೂ ಪೊಲೀಸರು ಬಂಧಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್‌ ನಾಯಕ ರಣ್‌ದೀಪ್‌ ಸಿಂಗ್‌ ಸುರ್ಜೇವಾಲ ಆರೋಪಿಸಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕರ ಪ್ರತಿಭಟನೆಯನ್ನು ಟೀಕಿಸಿದ್ದಾರೆ.

ರಾಹುಲ್‌ ಗಾಂಧಿ ವಿವಾರಣೆ ವೇಳೆ ಸರಿಯಾಗಿ ಉತ್ತರಿಸದಿದ್ದರೆ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.

Exit mobile version