ನವದೆಹಲಿ: ಗುಜರಾತ್‌ನಲ್ಲಿ ಬಿಜೆಪಿಯ ಮುನ್ನಡೆ ಆಲ್ಮೋಸ್ಟ್ 150ಕ್ಕೆ ಹೋಗಿ ನಿಂತಿದ್ದು, ಹೊಸ ಇತಿಹಾಸ ಸೃಷ್ಟಿಯಾಗುವ ನಿರೀಕ್ಷೆ ಇದೆ. ಒಂದೊಮ್ಮೆ 150 ಕ್ಷೇತ್ರಗಳಲ್ಲಿ ಗೆದ್ದರೆ, ಇದೇ ಮೊದಲ ಬಾರಿಗೆ ಗುಜರಾತ್‌ನಲ್ಲಿ ಬಿಜೆಪಿ ಇಂಥದೊಂದು ಸಾಧನೆ ಮಾಡಿದ ಕೀರ್ತಿಗೆ ಪಾತ್ರವಾಗುತ್ತದೆ. ಇತ್ತ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮ ಕಾಳಗ ಜಾರಿಯಲ್ಲಿದೆ. ಹಾಗಿದ್ದೂ ಕಾಂಗ್ರೆಸ್ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದೆಲ್ಲವೂ 11 ಗಂಟೆಯ ಹೊತ್ತಿನ ರಿಸಲ್ಟ್ ಮಾಹಿತಿಗಳು(Election Result 2022).
ಚುನಾವಣಾ ಆಯೋಗದ ಮಾಹಿತಿಗಳ ಪ್ರಕಾರ, ಬಿಜೆಪಿ 150 ಕೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದೇ ವೇಳೆ, ಕಾಂಗ್ರೆಸ್ ಆಲ್ಮೋಸ್ಟ್ 22 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಆಪ್ 7 ಕ್ಷೇತ್ರಗಳಲ್ಲಿದೆ. ಆಪ್ ಇದೇ ಮೊದಲ ಬಾರಿಗೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಸಿದೆ.
ಅಹಮದಾಬಾದ್‌ನ ಘಟ್ಲೋಡಿಯಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಗುಜರಾತ್ ಸಿಎಂ ಭೂಪೇಂದ್ರ ಅವರು ಆಲ್ಮೋಸ್ಟ್ ಗೆಲುವಿನ ಹಂತಕ್ಕೆ ಬಂದು ನಿಂತಿದ್ದಾರೆ ಎನ್ನಲಾಗಿದೆ. ಸದ್ಯದ ಪರಿಸ್ಥತಿಯನ್ನು ನೋಡಿದರೆ, ಆಮ್ ಆದ್ಮಿ ಪಾರ್ಟಿ ಕಾಂಗ್ರೆಸ್ ಮತಕ್ಕೆ ಕನ್ನ ಹಾಕಿರುವುದು ಸ್ಪಷ್ಟವಾಗುತ್ತಿದೆ. ಹಾಗಿದ್ದೂ, ಗ್ರಾಮೀಣ ಗುಜರಾತ್‌ನಲ್ಲಿ ಬಿಜೆಪಿ ತನ್ನ ಪರಿಸ್ಥಿತಿಯನ್ನು ಸುಧಾರಿಸಿಕೊಂಡ ಪರಿಣಾಮವೇ ಆ ಪಕ್ಷಕ್ಕೆ ಲ್ಯಾಂಡ್‌ಸ್ಲೈಡ್ ಜಯ ದಕ್ಕುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮತ್ತೊಂದೆಡೆ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೆಕ್ ಟು ನೆಕ್ ಸ್ಪರ್ಧೆ ಮುಂದುವರಿದಿದೆ. 11 ಗಂಟೆಯ ಮಾಹಿತಿಯ ಪ್ರಕಾರ, ಕಾಂಗ್ರೆಸ್ 34, ಬಿಜೆಪಿ 30 ಹಾಗೂ ಇತರರು ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಮುನ್ನಡೆಯಲ್ಲಿರುವ ಸ್ವತಂತ್ರ ಅಭ್ಯರ್ಥಿಗಳ ಪೈಕಿ ಮೂವರು ಬಿಜೆಪಿ ಹಾಗೂ ಒಬ್ಬರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದಾರೆ.
ಇದನ್ನೂ ಓದಿ | Election Result 2022 | ಗುಜರಾತ್‌ನಲ್ಲಿ ಬಿಜೆಪಿ ಮುನ್ನಡೆ, ಹಿಮಾಚಲದಲ್ಲಿ ಸಮ ಬಲ ಸ್ಪರ್ಧೆ, ಇದು ಆರಂಭಿಕ ಟ್ರೆಂಡ್