Site icon Vistara News

Eid al Adha: 1 ಕೋಟಿ ಕೊಡ್ತೇವೆಂದ್ರೂ ಮುಸ್ಲಿಮರಿಗೆ ಈ ಕುರಿಮರಿ ಕೊಡ್ತಿಲ್ಲ ಅದರ ಮಾಲೀಕ; ವಿಶೇಷ ಕಾರಣವಿದೆ!

Raju singh With Lamb

ಜೈಪುರ: ಬಕ್ರೀದ್ ಹಬ್ಬದ (Eid al Adha) ನಿಮಿತ್ತ ಈಗ ಎಲ್ಲೆಲ್ಲೂ ಕುರಿ, ಮೇಕೆ, ಆಡುಗಳ ಮಾರಾಟ, ಹರಾಜು ಹೆಚ್ಚಾಗಿ ನಡೆಯುತ್ತಿದೆ. ಕುರಿಗಾಹಿಗಳು ತುಂಬ ಒಳ್ಳೊಳ್ಳೆ ಬೆಲೆಗೆ ತಮ್ಮ ಬಳಿ ಇರುವ ಪ್ರಾಣಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಅದರಲ್ಲೂ ಹರಾಜು ಪ್ರಕ್ರಿಯೆಯಲ್ಲಿ ಬಿಡ್​ ಮಾಡುವವರು ಒಳ್ಳೊಳ್ಳೆ ತಳಿ, ದಷ್ಟಪುಷ್ಟ ಕುರಿಗಳಿಗೆಲ್ಲ ಅದ್ಭುತ್ ಬೆಲೆಯನ್ನೇ ಆಫರ್ ಮಾಡುತ್ತಿದ್ದಾರೆ. ಆದರೆ ರಾಜಸ್ಥಾನದಲ್ಲಿ ಒಬ್ಬ ಕುರಿಗಾಹಿ, ರಾಜು ಸಿಂಗ್ ಎಂಬುವರು ತಾವು ಸಾಕಿರುವ ಒಂದು ಕುರಿಮರಿಯನ್ನು ಯಾರೇ ಕೇಳಿದರೂ ಕೊಡುತ್ತಿಲ್ಲ. ಬಕ್ರೀದ್​ಗಾಗಿ (Bakrid 2023) ಮುಸ್ಲಿಮರು 70 ಲಕ್ಷ ರೂ.ದಿಂದ 1 ಕೋಟಿ ರೂ.ವರೆಗೆ ಆಫರ್ ಮಾಡಿದರೂ ಅವರದನ್ನು ಮಾರಲು ಸುತಾರಾಂ ಒಪ್ಪುತ್ತಿಲ್ಲ.

ಇದಕ್ಕೆ ಕಾರಣ ಇದೆ. ರಾಜು ಸಿಂಗ್ ಸಾಕಿದ್ದ ಒಂದು ಹೆಣ್ಣು ಕುರಿಯ ಹೊಟ್ಟೆಯಲ್ಲಿ ಹುಟ್ಟಿರುವ ಈ ಕುರಿಮರಿ ದಷ್ಟಪುಷ್ಟವಾಗಿದೆ. ಮೈಮೇಲೆ ಉಣ್ಣೆಯಿದೆ. ಈ ಕುರಿಯ ಹೊಟ್ಟೆ ಭಾಗದಲ್ಲಿ ಉರ್ದುವಿನಲ್ಲಿ ಬರೆದಂತೆ ಇರುವ ಒಂದು ಶಬ್ದ ಇದೆಯಂತೆ. ಪ್ರಾಣಿಗಳ ಹಣೆ ಮೇಲೆ, ಮೈಮೇಲೆ ಚಂದ್ರಾಕೃತಿಯಂತ ಗುರುತು ಇರುತ್ತದೆಯಲ್ಲ, ಹಾಗೇ ಈ ಕುರಿಯ ಹೊಟ್ಟೆ ಭಾಗದಲ್ಲಿ ಉರ್ದುವಿನಲ್ಲಿ ಏನೋ ಬರೆದಂತೆ ಕಾಣಿಸುತ್ತಿದೆಯಂತೆ. ರಾಜು ಸಿಂಗ್ ಹೋಗಿ ಅದೇನೆಂದು ಕೆಲವು ಮುಸ್ಲಿಂ ವಿದ್ವಾಂಸರ ಬಳಿ ಕೇಳಿದ್ದಾನೆ ಅದಕ್ಕೆ ಅವರು, ಈ ಕುರಿಮರಿ ಹೊಟ್ಟೆ ಮೇಲೆ ಉರ್ದುವಿನಲ್ಲಿ 786 ಎಂದು ಬರೆದುಕೊಂಡಿದೆ. ಇಸ್ಲಾಂನಲ್ಲಿ 786ನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ರಾಜು ಸಿಂಗ್ ಈ ಕುರಿಮರಿ ತನ್ನ ಪಾಲಿನ ಅದೃಷ್ಟ ಎಂದು ಭಾವಿಸಿ, ಮಾರಾಟ ಮಾಡದೆ ಹಾಗೇ ಇಟ್ಟುಕೊಂಡಿದ್ದಾನೆ.

ಇದನ್ನೂ ಓದಿ: ಮೊಗಸಾಲೆ ಅಂಕಣ | ಸಿಪಿಎಂ ಮತ್ತು ತೋಳ ಕುರಿಮರಿ ಕಥೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜು ಸಿಂಗ್ ‘ಈ ಹೊತ್ತಲ್ಲಿ ಮುಸ್ಲಿಮರಿಗೆ ಕುರಿಗಳು ಬೇಕು, ಅವರದನ್ನು ಬಲಿ ಕೊಡಬೇಕು ಎಂದು ನನಗೆ ಗೊತ್ತಿದೆ. ಆದರೆ ನನಗೆ ಈ ಕುರಿಮರಿ ಕೊಡಲು ಇಷ್ಟವಿಲ್ಲ. ನನ್ನ ಅತ್ಯಂತ ಪ್ರೀತಿಯ ಕುರಿ ಅದು. ಇದು ಗಂಡು ಕುರಿಮರಿ. ಒಂದಿಬ್ಬರು ಬಂದು 70 ಲಕ್ಷ ರೂ.ಕೊಡುತ್ತೇವೆ ಎಂದರು. ಮತ್ತೊಬ್ಬರು 1 ಕೋಟಿ ರೂ.ವರೆಗೂ ಆಫರ್ ಮಾಡಿದರು. ಆದರೆ ನನಗೆ ಮಾರಾಟ ಮಾಡಲು ಇಷ್ಟವಿಲ್ಲ. ಈ ಕುರಿ ಬಗ್ಗೆ ನಾನು ತುಂಬ ಕಾಳಜಿ ವಹಿಸುತ್ತಿದ್ದೇನೆ. ತಿನ್ನಲು ದಾಳಿಂಬೆ, ಪಪ್ಪಾಯ, ಸಿರಿಧಾನ್ಯಗಳು, ಹಸಿರು ತರಕಾರಿಗಳನ್ನು ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಕುರಿಯನ್ನು ಅವರು ಮನೆಯ ಒಳಗೇ ಕಟ್ಟುತ್ತಿದ್ದಾರೆ.

Exit mobile version