Site icon Vistara News

Digvijaya Singh | ಆರೆಸ್ಸೆಸ್‌ ಹಾಗೂ ಪಿಎಫ್‌ಐ ಒಂದೇ ನಾಣ್ಯದ ಎರಡು ಮುಖಗಳು, ದಿಗ್ವಿಜಯ ಸಿಂಗ್‌ ವಾಗ್ಬಾಣ

Ram Lalla Idol doesnt look like child ram Says Digvijay Singh

ನವದೆಹಲಿ: ಉಗ್ರರಿಗೆ ಹಣಕಾಸು ನೆರವು, ಉಗ್ರ ಚಟುವಟಿಕೆ ಸೇರಿ ಹಲವು ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI)ದ ಕಚೇರಿ, ನಾಯಕರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ (Digvijaya Singh) ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ವಿಶ್ವ ಹಿಂದೂ ಪರಿಷತ್‌ (VHP)ಅನ್ನು ಪಿಎಫ್‌ಐ ಜತೆ ಹೋಲಿಕೆ ಮಾಡಿದ್ದಾರೆ.

“ಆರ್‌ಎಸ್‌ಎಸ್‌, ವಿಎಚ್‌ಪಿ ಹಾಗೂ ಪಿಎಫ್‌ಐ ಸಂಘಟನೆಗಳು “ಒಂದೇ ನಾಣ್ಯದ ಎರಡು ಮುಖಗಳು” ಎಂದು ಜರಿದಿದ್ದಾರೆ. “ಯಾರು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಾರೋ ಹಾಗೂ ದ್ವೇಷ ಹರಡುತ್ತಾರೋ ಅವರು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಹಾಗಾಗಿ, ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದೇ ಕಾರಣದಿಂದಾಗಿ ಆರ್‌ಎಸ್‌ಎಸ್‌ ಮತ್ತು ಪಿಎಫ್‌ಐ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಆದರೆ, ಆರ್‌ಎಸ್‌ಎಸ್‌ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.

ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ, ಉಗ್ರರಿಗೆ ನೆರವು, ಹಣಕಾಸು ಸಹಕಾರ ಸೇರಿ ಹಲವು ಆರೋಪಗಳಿಂದಾಗಿ ಎನ್‌ಐಎ, ಇ.ಡಿ ಹಾಗೂ ಆಯಾ ರಾಜ್ಯಗಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪಿಎಫ್‌ಐನ ನೂರಾರು ಮುಖಂಡರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ ದಿಗ್ವಿಜಯ ಸಿಂಗ್‌ ಅವರು ಪಿಎಫ್‌ಐಅನ್ನು ಆರ್‌ಎಸ್‌ಎಸ್‌ ಹಾಗೂ ವಿಎಚ್‌ಪಿ ಜತೆ ಹೋಲಿಸಿದ್ದಾರೆ.

ಇದನ್ನೂ ಓದಿ | RSS Chief Bhagwat | ಮೋಹನ್‌ ಭಾಗವತ್‌ರನ್ನು ರಾಷ್ಟ್ರಪಿತ ಎಂದ ಮೌಲ್ವಿ, ಡಿಎನ್‌ಎ ಒಂದೇ ಎಂದೂ ಹೇಳಿಕೆ

Exit mobile version