Site icon Vistara News

Election Commission | ಹಿಮಾಚಲ ಪ್ರದೇಶದಲ್ಲಿ ನ.12ರಂದು ವಿಧಾನಸಭೆ ಚುನಾವಣೆ, ಒಂದೇ ಹಂತದಲ್ಲಿ ಮತದಾನ

Election

ನವದೆಹಲಿ: ಚುನಾವಣೆ ಆಯೋಗವು (Election Commission) ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಿದೆ. ನವೆಂಬರ್‌ ೧೨ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ ೧೦ರಂದು ಫಲಿತಾಂಶ ಪ್ರಕಟವಾಗಲಿದೆ. ಅಕ್ಟೋಬರ್‌ ೧೭ರಂದು ಅಧಿಸೂಚನೆ ಹೊರಡಿಸಲಾಗುತ್ತದೆ.

ಅ.೨೫ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ, ಅ.೨೭ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.೨೯ರಂದು ಉಮೇದುವಾರಿಕೆ ವಾಪಸ್‌ ಪಡೆಯಲು ಅವಕಾಶ ಇರುತ್ತದೆ. ರಾಜ್ಯದ ೬೮ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಅ.೧೪ರಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಆಯೋಗ ಮಾಹಿತಿ ನೀಡಿದೆ.

ಶಾಂತಿಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಆಯೋಗವು ಸಕಲ ಸಿದ್ಧತೆ ಕೈಗೊಳ್ಳಲಿದೆ. ವಿಶೇಷ ಚೇತನರು ಕೂಡ ಮತದಾನ ಮಾಡಲು ವಿಶೇಷ ಸೌಲಭ್ಯ ಒದಗಿಸಲಾಗುತ್ತದೆ. ಅವರನ್ನು ಮತಗಟ್ಟೆಗೆ ಕರೆತರಲು ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲ ಮತಗಟ್ಟೆಗಳಲ್ಲಿ ಸೂಕ್ತ ಭದ್ರತೆ ಒದಗಿಸಲಾಗುತ್ತದೆ. ವದಂತಿ, ನಕಲಿ ಸುದ್ದಿ ಪ್ರಸರಣ ತಡೆಗೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಚುನಾವಣೆ ಆಯುಕ್ತ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

ನವ ಮತದಾರರಿಗೆ ವೋಟಿಂಗ್‌ ಕಿಟ್‌

ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರಿಗೆ ವೋಟಿಂಗ್‌ ಕಿಟ್‌ ನೀಡಲಾಗುತ್ತದೆ. ಹೇಗೆ ಮತದಾನ ಮಾಡಬೇಕು? ಮತದಾನ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಮತದಾನದ ಪ್ರಾಮುಖ್ಯತೆ, ರಹಸ್ಯ ವೋಟಿಂಗ್‌ ಸೇರಿ ಹಲವು ಮಾಹಿತಿ ನೀಡಲಾಗುತ್ತದೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ | ಕಾಂಗ್ರೆಸ್ ಅಧ್ಯಕ್ಷ ಆಯ್ಕೆ ಚುನಾವಣೆ; ನೆಪಕ್ಕೆ ನಡೆಸುತ್ತಾರೋ ನೋಡುತ್ತೇವೆ ಎಂದ ಜಿ 23 ನಾಯಕರು

Exit mobile version